Wednesday, 15th August 2018  

Vijayavani

ಕಾವೇರಿ ಕಣಿವೆಯಲ್ಲಿ ಮಳೆ ಆರ್ಭಟ: ಕೆಆರ್‌ಎಸ್‌ಗೆ ಭಾರಿ ಒಳಹರಿವು, ಡ್ಯಾಂನಿಂದ 1.50 ಲಕ್ಷ ಕ್ಯೂಸೆಕ್‌ ನೀರು ಹೊರಕ್ಕೆ        ಹಾಸನದಲ್ಲಿ ಮಳೆ ಅಬ್ಬರ: ಶಿರಾಡಿಘಾಟ್‌ನಲ್ಲಿ ಅನಿಲ ಟ್ಯಾಂಕ್‌ ಪಲ್ಟಿ, ಸೋಮವಾರ ಪೇಟೆ ಹೆದ್ದಾರಿ ಬಿರುಕು        ಉಕ್ಕಿಹರಿಯುತ್ತಿದೆ ತುಂಗಭದ್ರ: ದಾವಣಗೆರೆ ಜಿಲ್ಲೆಯಲ್ಲಿ ಬೆಳೆ ನಾಶ, ಕಂಪ್ಲಿ ಸೇತುವೆ ನೀರಲ್ಲಿ ಮುಳುಗಡೆ        ಕೆಂಪು ಕೋಟೆ ಮೇಲೆ ಮೋದಿ ಧ್ವಜರೋಹಣ: ಸರ್ಕಾರದ ಸಾಧನೆಗಳ ಬಣ್ಣನೆ, ಆಯುಷ್ಮಾನ್‌ ಭಾರತ ಘೋಷಣೆ       
Breaking News

ಸೂಪರ್​ ಬೈಕ್​ ರೈಡಿಂಗ್ ಕ್ರೇಜ್​ಗೆ ಬಹುರಾಷ್ಟ್ರೀಯ ಬ್ಯಾಂಕ್​ ಉದ್ಯೋಗಿ ಬಲಿ

Monday, 13.08.2018, 9:48 AM       No Comments

ಗುರಂಗಾವ್​: ಬಹುರಾಷ್ಟ್ರೀಯ ಬ್ಯಾಂಕಿನಲ್ಲಿ ಕಾರ್ಯನಿರ್ವಾಹಕನಾಗಿ ಸೇವೆ ಸಲ್ಲಿಸುತ್ತಿದ್ದ 25 ವರ್ಷದ ವ್ಯಕ್ತಿಯೊಬ್ಬ ಸೂಪರ್​ ಬೈಕ್​ ರೈಡಿಂಗ್​ ವೇಳೆ ಅಪಘಾತಕ್ಕೀಡಾಗಿ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.

ಸಂಚಿತ್​ ಓಬೆರಾಯ್​ ಮೃತ ದುರ್ದೈವಿ. ದೆಹಲಿಯ ಕುಂಡಿಲ್​ ಮನೆಸಾರ್​-ಪಲ್ವಾಲ್​ ಅಥವಾ ಕೆಎಂಪಿ ಎಕ್ಸ್​ಪ್ರೆಸ್​ವೇನಲ್ಲಿ ಈ ದುರ್ಘಟನೆ ಸಂಭವಿಸಿದೆ. ಪಶ್ಚಿಮ ದೆಹಲಿಯ ನಿವಾಸಿಯಾದ ಸಂಚಿತ್​ ಭಾನುವಾರ ಬೆಳಗ್ಗೆ ಬೈಕ್​ ಉತ್ಸಾಹಿಗಳೊಂದಿಗೆ ರೈಡಿಂಗ್​ಗೆ ತೆರಳಿದ್ದರು. ಈ ವೇಳೆ ಹೆದ್ದಾರಿಯ ಮಧ್ಯೆ ಹಿಮ್ಮುಖವಾಗಿ ಚಲಿಸುತ್ತಿದ್ದ ಟ್ರಕ್​ಗೆ ಸಂಚಿತ್​ ಬೈಕ್​ ಡಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಆತ​ನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯೇ ಸಾವಿಗೀಡಾಗಿದ್ದಾನೆ.

ಸಂಚಿತ್​ ಬೈಕ್​ ಡಿಕ್ಕಿಯಾಗುತ್ತಿದ್ದಂತೆ ಟ್ರಕ್​​ ಚಾಲಕ ಅಲ್ಲಿಂದ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸೂಪರ್​ ಸುಜಕಿ ಹಯಾಬುಸಾ ಸಣ್ಣ ಕಾರಿನ ಇಂಜಿನ್​ ವೇಗಕ್ಕಿಂತಲೂ ಹೆಚ್ಚಿನ ವೇಗವನ್ನು ಹೊಂದಿದ್ದು, ಗಂಟೆಗೆ 300 ಕಿ.ಮೀ ಸಾಗಬಲ್ಲ ಸಾಮರ್ಥ್ಯವಿದೆ. ಮೃತ ಸಂಚಿತ್​ ಗಂಟೆಗೆ 200 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬೈಕ್​ ಉತ್ಸಾಹಿಗಳು ತಮ್ಮ ಬೈಕ್​ಗಳನ್ನು ಬದಲಾವಣೆ ಮಾಡಿಕೊಂಡು ತೆರೆದ ರಸ್ತೆಯಲ್ಲಿ ಈ ರೀತಿಯಾದ ವೇಗದ ರೈಡಿಂಗ್​ ಮಾಡುವುದು ದೆಹಲಿಯಲ್ಲಿ ಸಾಮಾನ್ಯವಾಗಿದೆ. ಇತ್ತೀಚ್ಚೆಗೆ ಸಂಚಿತ್​ ಸೂಪರ್​ ಬೈಕ್​ನಲ್ಲಿ ವೀಲಿಂಗ್​ ಮಾಡುತ್ತಿರುವ ಫೋಟೋವನ್ನು ತಮ್ಮ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿಕೊಂಡಿದ್ದರು. ಅಪಘಾತ ಸಂಬಂಧ ಗುರಂಗಾವ್​ನಿಂದ 45 ಕಿ.ಮೀ ದೂರದಲ್ಲಿರುವ ತೌರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top