Thursday, 19th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News

ಮತ್ತೆ ಬಂದ ರಿಚ್ಚಿ

Monday, 30.04.2018, 3:05 AM       No Comments

ಬೆಂಗಳೂರು: ರಕ್ಷಿತ್ ಶೆಟ್ಟಿ ನಿರ್ದೇಶಿಸಿದ ಚೊಚ್ಚಲ ಚಿತ್ರ ‘ಉಳಿದವರು ಕಂಡಂತೆ’ ಸಖತ್ ಸದ್ದು ಮಾಡಿತ್ತು. ಅದರಲ್ಲೂ ಕಥಾನಾಯಕ ರಿಚ್ಚಿ ಪಾತ್ರವಂತೂ ಈಗಲೂ ಫೇಮಸ್. ಆತನ ವಿಭಿನ್ನ ಮ್ಯಾನರಿಸಂ, ವೇಷ ಭೂಷಣ, ಹುಲಿ ಕುಣಿತ, ‘ಶೂಟ್ ಮಾಡ್ಬೇಕಾ..’ ಎಂಬ ಪಂಚಿಂಗ್ ಡೈಲಾಗ್ ಸೇರಿ ಹಲವು ಕಾರಣಗಳಿಗಾಗಿ ಪ್ರೇಕ್ಷಕರಿಗೆ ರಿಚ್ಚಿ ಇಷ್ಟವಾಗುತ್ತಾನೆ. ಅಷ್ಟಕ್ಕೂ ಈಗ್ಯಾಕೆ ಅವನ ವಿಚಾರ ಅಂತೀರಾ? ಮತ್ತೆ ತೆರೆಮೇಲೆ ಬರಲು ರಿಚ್ಚಿ ಸಜ್ಜಾಗಿದ್ದಾನೆ. ಹೌದು, ‘ಉಳಿದವರು ಕಂಡಂತೆ’ ಚಿತ್ರದ ಆ ಪಾತ್ರವನ್ನೇ ಮುಖ್ಯವಾಗಿಟ್ಟುಕೊಂಡು ಸಿನಿಮಾ ಮಾಡಲು ಯೋಜನೆ ತಯಾರಾಗುತ್ತಿದೆ. ಈ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಲಿದ್ದು, ರಿಷಭ್ ಶೆಟ್ಟಿ ನಿರ್ದೇಶನ ಮಾಡಲಿದ್ದಾರೆ. ರಿಚ್ಚಿ ಪಾತ್ರದಲ್ಲಿ ಮತ್ತೆ ರಕ್ಷಿತ್ ಮಿಂಚಲಿದ್ದಾರೆ.

ಸದ್ಯ ಪ್ರೀ-ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ಇದೇ ವರ್ಷ ಡಿಸೆಂಬರ್ ವೇಳೆ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ. ಪ್ರಸ್ತುತ ‘ಅವನೇ ಶ್ರೀಮನ್ನಾರಾಯಣ’ ಮತ್ತು ‘777 ಚಾರ್ಲಿ’ ಸಿನಿಮಾಗಳಲ್ಲಿ ರಕ್ಷಿತ್ ಬಿಜಿಯಾಗಿದ್ದಾರೆ. ಅತ್ತ ರಿಷಭ್ ಕೂಡ ‘ಕಥಾ ಸಂಗಮ’, ‘ಸ.ಹಿ.ಪ್ರಾ.ಶಾಲೆ ಕಾಸರಗೋಡು’ ಮತ್ತು ‘ಬೆಲ್​ಬಾಟಂ’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ‘ರಿಚ್ಚಿ ಪಾತ್ರವನ್ನು ಇಟ್ಟುಕೊಂಡು ಸಿನಿಮಾ ಮಾಡಬೇಕು ಎಂಬುದು ರಕ್ಷಿತ್ ಶೆಟ್ಟಿ ಅವರ ಬಹುದಿನಗಳ ಆಸೆ ಆಗಿತ್ತು. ಆದರೆ ಬ್ಯಾಕ್ ಟು ಬ್ಯಾಕ್ ಬೇರೆ ಸಿನಿಮಾಗಳಲ್ಲಿ ಅವರು ಬಿಜಿ ಆಗಿದ್ದರಿಂದ ಗಮನ ಹರಿಸಲು ಸಾಧ್ಯವಾಗಿರಲಿಲ್ಲ. ಈಗ ಕಾಲ ಕೂಡಿಬಂದಿದೆ’ ಎನ್ನುತ್ತಾರೆ ನಿರ್ವಪಕ ಪುಷ್ಕರ್. ಇದಲ್ಲದೆ, ಇನ್ನೂ ಎರಡು ಚಿತ್ರಗಳಿಗೆ ಪುಷ್ಕರ್ ಬ್ಯಾನರ್ ಜತೆ ರಕ್ಷಿತ್ ಸಹಿ ಮಾಡಿದ್ದಾರೆ. ಆ ಪೈಕಿ ಒಂದಕ್ಕೆ ‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಖ್ಯಾತಿಯ ಹೇಮಂತ್ ರಾವ್ ನಿರ್ದೇಶನ ಮಾಡಲಿದ್ದು, ಇನ್ನೊಂದು ಪ್ರಾಜೆಕ್ಟ್ ಬಗ್ಗೆ ಮಾತುಕತೆ ನಡೆಯುತ್ತಿದೆ. ಅಚ್ಚರಿಯ ವಿಚಾರ ಏನೆಂದರೆ, ತಲಾ ನಾಲ್ಕು ಕೋಟಿ ರೂ.ನಂತೆ, ಮೂರು ಸಿನಿಮಾಗಳಿಗೆ ಸೇರಿ ಒಟ್ಟು 12 ಕೋಟಿ ರೂ. ಸಂಭಾವನೆ ರಕ್ಷಿತ್ ಖಾತೆಗೆ ಹೋಗಲಿದೆ ಎಂಬುದು ಪುಷ್ಕರ್ ನೀಡುವ ಮಾಹಿತಿ!

ಈ ಹಿಂದೆ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ರಕ್ಷಿತ್, ರಿಷಭ್ ಮತ್ತು ನನ್ನ ಕಾಂಬಿನೇಷನ್​ಗೆ ಗೆಲುವು ಸಿಕ್ಕಿತ್ತು. ಈಗ ರಿಚ್ಚಿ ಪಾತ್ರ ಆಧಾರಿತ ಸಿನಿಮಾ ಮೂಲಕ ಮತ್ತೆ ಒಂದಾಗುತ್ತಿದ್ದೇವೆ. ‘ಉಳಿದವರು ಕಂಡಂತೆ’ ಕಥೆಯ ಎಳೆಯನ್ನೇ ಇಟ್ಟುಕೊಂಡು ಒಂದು ಪಕ್ಕಾ ಕಮರ್ಷಿಯಲ್ ಚಿತ್ರ ಮಾಡುವ ಗುರಿ ಇದೆ.

| ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕ

Leave a Reply

Your email address will not be published. Required fields are marked *

Back To Top