Monday, 23rd July 2018  

Vijayavani

ಬಿಜೆಪಿ ಸಂಪರ್ಕ್ ಸಮರ್ಥನ್ ಅಭಿಯಾನ - ಕಿಚ್ಚ ಸುದೀಪ್ ಭೇಟಿಯಾದ ಶ್ರೀರಾಮುಲು- ಮೋದಿ ಸಾಧನೆ ಪುಸ್ತಕ  ವಿತರಣೆ        ದೆಹಲಿಯಲ್ಲಿ ರಾಹುಲ್-ಸಿದ್ದು ಭೇಟಿ - ದೋಸ್ತಿ ನಡೆಗೆ ಅಸಮಾಧಾನ ಹೊರಹಾಕಿದ್ರಾ ಸಿದ್ದು - ಕುತೂಹಲ ಕೆರಳಿಸಿದ ಕೈ ದಿಗ್ಗಜರ ಭೇಟಿ        ಮತ್ತೆ ವಾಸ್ತು ಮೊರೆ ಮೋದ ರೇವಣ್ಣ - ಸರ್ಕಾರಿ ಬಂಗಲೆ ನವೀಕರಣಕ್ಕೆ 2 ಕೋಟಿ ಖರ್ಚು - ಇದೇನಾ ದುಂದುವೆಚ್ಚಕ್ಕೆ ಕಡಿವಾಣ ?        ದರ್ಶನ್ ಮ್ಯಾನೇಜರ್​​ ಮಲ್ಲಿಕಾರ್ಜುನ್​ನಿಂದ ಮತ್ತೊಂದು ದೋಖಾ - ನಟ ಅರ್ಜುನ್ ಸರ್ಜಾಗೂ ಮಹಾ ಮೋಸ        ಶೀರೂರು ಶ್ರೀ ಸಾವಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ - ಸ್ವಾಮೀಜಿ ಕೊನೆದಿನದ ಡಿವಿಆರ್ ನಾಪತ್ತೆ - ಪೊಲೀಸರಿಂದ ತೀವ್ರ ಶೋಧ       
Breaking News

ಸಂಪೂರ್ಣ ಸಾಲಮನ್ನಾಕ್ಕೆ ಆಗ್ರಹ: ನಗರಕ್ಕೆ ಆಗಮಿಸಿದ 100 ಕ್ಕೂ ಹೆಚ್ಚು ರೈತರು

Wednesday, 11.07.2018, 7:35 AM       No Comments

ಬೆಂಗಳೂರು: ಸಂಪೂರ್ಣ ಸಾಲಮನ್ನಾಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಲು 100 ಕ್ಕೂ ಹೆಚ್ಚು ರೈತರು ಬುಧವಾರ ಬೆಳಗ್ಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಆಗಮಿಸಿದ್ದಾರೆ.

ಸಂಪೂರ್ಣ ಸಾಲಮನ್ನಾ ಸೇರಿದಂತೆ, ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಲಿದ್ದಾರೆ. ರೈತರು ನಗರದ ಫ್ರೀಡಂ ಪಾರ್ಕ್​ನಿಂದ ವಿಧಾನಸೌಧದವರೆಗೆ ಮೆರವಣಿಗೆ ನಡೆಸಿ ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಲಿದ್ದಾರೆ.

ಆ ನಂತರ ರೈತರು ಸಿಎಂ ಕುಮಾರಸ್ವಾಮಿ, ವಿಪಕ್ಷ ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಮತ್ತು ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

ಮಂಗಳವಾರ ರೈತರು ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬೆಂಗಳೂರು ಚಲೋ ಪ್ರತಿಭಟನೆಯನ್ನು ಆರಂಭಿಸಿದ್ದರು.

Leave a Reply

Your email address will not be published. Required fields are marked *

Back To Top