Monday, 23rd October 2017  

Vijayavani

1. ಲಿಂಗಾಯತರು ಹಿಂದೂಗಳಲ್ಲ ಹೇಳಿಕೆ – ಜಾಮದಾರ್​ಗೆ ಕನೇರಿ ಮಠದ ಶ್ರೀ ತಿರುಗೇಟು – ಬಹಿರಂಗ ಚರ್ಚೆಗೆ ಕಾಡಸಿದ್ದೇಶ್ವರ ಸ್ವಾಮಿಗಳ ಆಹ್ವಾನ 2. ರಾಜ್ಯ ಕಾಂಗ್ರೆಸ್​ನಲ್ಲಿ ಭುಗಿಲೆದ್ದ ಭಿನ್ನಾಭಿಪ್ರಾಯ – ಸಿದ್ದು, ಪರಂ, ಡಿಕೆಶಿ ದೂರ ದೂರ – ಹೈಕಮಾಂಡ್​ ಸಾಮೂಹಿಕ ಜಪ, ನಾಯಕರು ಸಪರೇಟ್​ ರೂಪ 3. ಧಾರವಾಡದಲ್ಲಿ ಸರ್ಕಾರದ ಸಾಧನಾ ಸಮಾವೇಶ – ಜನರ ತೆರಿಗೆ ದುಡ್ಡಲ್ಲಿ ಕಾಂಗ್ರೆಸ್‌ ಪಕ್ಷಕ್ಕೂ ಪ್ರಚಾರ – ಬೆನ್ನುತಟ್ಟಿಕೊಳ್ಳೋ ಸಮಾವೇಶಕ್ಕೆ ಪಿಡಿಓಗಳೂ ದುರ್ಬಳಕೆ 4. ನಟ ವಿಜಯ್ ಬೆಂಬಲಕ್ಕೆ ನಿಂತ ತಲೈವಾ – ಮೆರ್ಸಲ್‌ ಸಿನಿಮಾದ ಬಗ್ಗೆ ಮೆಚ್ಚುಗೆಯ ಟ್ವೀಟ್ – ವಿವಾದಾತ್ಮಕ ವಿಷಯಗಳಿಗೂ ರಜನಿಕಾಂತ್ ಪರೋಕ್ಷ ಶ್ಲಾಘನೆ 5. ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಬಿಗ್​ ಶಾಕ್​ – ಬಿಜೆಪಿಗೆ ಸೇರಲು 1 ಕೋಟಿ ರೂ ಆಮೀಷ – ಹಾರ್ದಿಕ್​ ಪಟೇಲ್​ ಸಂಗಡಿಗನ ಗಂಭೀರ ಆರೋಪ
Breaking News :

ಮಕ್ಕಳ ಸಾವು: ಗೋರಖ್​ಪುರ ಇಲ್ಲೇ ಪಕ್ಕದ ಕೋಲಾರದಲ್ಲಿದೆ

Tuesday, 22.08.2017, 4:16 PM       No Comments

ಕೋಲಾರ: ಅಪೌಷ್ಠಿಕತೆ ಮತ್ತು ಆಮ್ಲಜನಕ ಕೊರತೆಯಿಂದ ನೂರಾರು ಮಕ್ಕಳು ದೂರದ ಉತ್ತರ ಪ್ರದೇಶದ ಗೋರಖ್​ಪುರದಲ್ಲಿ ಸಾಲು ಸಾಲು ಸಾವಿಗೀಡಾದಾಗ ಕರ್ನಾಟಕದಲ್ಲಿ ಜನತೆ ಮತ್ತು ಸರ್ಕಾರ ಮಮ್ಮಲ ಮರುಗಿತ್ತು. ಆದರೆ ಈಗ

ರಾಜ್ಯದ ಸಾಕ್ಷಾತ್‌ ಆರೋಗ್ಯ ಸಚಿವರ ಕ್ಷೇತ್ರದಲ್ಲೇ ಅಂದರೆ ಕೋಲಾರದಲ್ಲಿ ಅಪೌಷ್ಠಿಕತೆಯಿಂದ ಮಕ್ಕಳು ಸಾವಿಗೀಡಾಗಿರುವ ಪ್ರಕರಣ ವರದಿಯಾಗಿದೆ.

ಈ ಬಗ್ಗೆ ಆರೋಗ್ಯ ಸಚಿವ ರಮೇಶ್‌ಕುಮಾರ್‌ ಸಡನ್ನಾಗಿ ಸೈಲೆಂಟ್‌ ಮೋಡ್‌ಗೆ ಹೋಗಿದ್ದು, ಮಕ್ಕಳ ಸಾವಿನ ಬಗ್ಗೆ ತುಟಿಕ್‌ ಪಿಟಿಕ್‌ ಅಂದಿಲ್ಲ. ಅಷ್ಟೇ ಅಲ್ಲ ಪ್ರಕರಣವೂ ಬೆಳಕಿಗೆ ಬಾರದಂತೆ ನೋಡಿಕೊಂಡಿದ್ದಾರೆ.

ಕೋಲಾರದ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಏನಾಗಿದೆ ಎಂದರೆ ಕಳೆದ ಒಂದು ತಿಂಗಳಲ್ಲಿ 10 ಮಕ್ಕಳು ಅಸುನೀಗಿವೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯ, ಅಪೌಷ್ಠಿಕತೆ, ಬೆಳವಣಿಗೆ ಇಲ್ಲದಿರುವುದು ಕಾರಣವಾಗಿದೆ. (ದಿಗ್ವಿಜಯ ನ್ಯೂಸ್‌)

Leave a Reply

Your email address will not be published. Required fields are marked *

Back To Top