ರಾಜ್ಯದಲ್ಲಿ ಮಾಸಿಕ 60 ಲಕ್ಷ ಜನರಿಗೆ ಕರೊನಾ ಲಸಿಕೆ

ashwathnarayana
Published on

ಬೆಂಗಳೂರು: ರಾಜ್ಯದಲ್ಲಿ ಮಾಸಿಕ 60 ಲಕ್ಷ ಜನರಿಗೆ ಕರೊನಾ ನಿರೋಧಕ ಲಸಿಕೆ ವಿತರಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕರೊನಾ ಕಾರ್ಯಪಡೆ ಅಧ್ಯಕ್ಷರಾಗಿರುವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.

ನಗರದ ಶೇಷಾದ್ರಿಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಬುಧವಾರ ಭಾಗವಹಿಸಿದ ನಂತರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪ್ರತಿ ತಿಂಗಳು 60 ಲಕ್ಷ ಡೋಸ್ ಲಸಿಕೆ ಹಂಚಿಕೆ ಮಾಡುತ್ತಿದ್ದು, ಜೂನ್​​ ತಿಂಗಳಲ್ಲಿ ಅಷ್ಟನ್ನೂ ಜನರಿಗೆ ನೀಡಲಾಗಿದೆ. ಜುಲೈನಲ್ಲೂ ಇಷ್ಟೇ ಪ್ರಮಾಣದಲ್ಲಿ ವಿತರಿಸಲಾಗುವುದು ಎಂದರು.

ಲಸಿಕೆ ಬಳಕೆ ಕ್ಷಮತೆ ಕಾಯ್ದುಕೊಳ್ಳುವ ಜೊತೆಗೆ‌ ಹಂಚಿಕೆ ಪ್ರಮಾಣವನ್ನು ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಕೋರಲಾಗಿದೆ. ಕರೊನಾ ಮೂರನೇ ಅಲೆ‌ ಬಗ್ಗೆ ಜನರಿಗೆ ಆತಂಕ ಬೇಡ. ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಅಶ್ವತ್ಥ ನಾರಾಯಣ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net