Wednesday, 15th August 2018  

Vijayavani

ಕಾವೇರಿ ಕಣಿವೆಯಲ್ಲಿ ಮಳೆ ಆರ್ಭಟ: ಕೆಆರ್‌ಎಸ್‌ಗೆ ಭಾರಿ ಒಳಹರಿವು, ಡ್ಯಾಂನಿಂದ 1.50 ಲಕ್ಷ ಕ್ಯೂಸೆಕ್‌ ನೀರು ಹೊರಕ್ಕೆ        ಹಾಸನದಲ್ಲಿ ಮಳೆ ಅಬ್ಬರ: ಶಿರಾಡಿಘಾಟ್‌ನಲ್ಲಿ ಅನಿಲ ಟ್ಯಾಂಕ್‌ ಪಲ್ಟಿ, ಸೋಮವಾರ ಪೇಟೆ ಹೆದ್ದಾರಿ ಬಿರುಕು        ಉಕ್ಕಿಹರಿಯುತ್ತಿದೆ ತುಂಗಭದ್ರ: ದಾವಣಗೆರೆ ಜಿಲ್ಲೆಯಲ್ಲಿ ಬೆಳೆ ನಾಶ, ಕಂಪ್ಲಿ ಸೇತುವೆ ನೀರಲ್ಲಿ ಮುಳುಗಡೆ        ಕೆಂಪು ಕೋಟೆ ಮೇಲೆ ಮೋದಿ ಧ್ವಜರೋಹಣ: ಸರ್ಕಾರದ ಸಾಧನೆಗಳ ಬಣ್ಣನೆ, ಆಯುಷ್ಮಾನ್‌ ಭಾರತ ಘೋಷಣೆ       
Breaking News

ಪ್ರಕೃತಿ ವೈಭವದ ಜಲಪಾತೋತ್ಸವ

Monday, 23.07.2018, 3:03 AM       No Comments

ಪ್ರಕೃತಿಪ್ರಿಯರೇ.. ಜಲಪಾತೋತ್ಸವಕ್ಕೆ ಸಜ್ಜಾಗಿ. ಈ ಬಾರಿ ಉತ್ತಮ ಆರಂಭ ಕಂಡ ಮುಂಗಾರು ತನ್ನ ಅಬ್ಬರವನ್ನು ಅದೇ ಗತಿಯಲ್ಲಿ ಮುಂದುವರಿಸಿರುವುದರಿಂದ ರಾಜ್ಯದ ಬಹುತೇಕ ನದಿ-ಜಲಾಶಯಗಳು ತುಂಬುತ್ತಿರುವ ಬೆನ್ನಲ್ಲೇ ಜಲಪಾತಗಳೂ ತುಂಬಿ ಭೋರ್ಗರೆಯುತ್ತಿವೆ. ಧುಮ್ಮಿಕ್ಕುವ ಜಲಪಾತವನ್ನು ನೋಡುವುದೇ ಒಂದು ವೈಭೋಗ. ಐವತ್ತು, ನೂರು, ನೂರೈವತ್ತು, ಇನ್ನೂರು ಅಡಿ.. ಹೀಗೆ ಎತ್ತರೆತ್ತರದಿಂದ ಜಲಧಾರೆ ಧುಮುಕಿ ಭೂಸ್ಪರ್ಶ ಮಾಡುತ್ತಿದ್ದರೆ ಅದರ ಸೊಬಗು ವರ್ಣನಾತೀತ. ರಾಜ್ಯದ ಹಲವು ಜಲಪಾತಗಳಲ್ಲಿ ನಾವು ಇಂಥ ಸೊಬಗನ್ನು ಈಗ ಕಣ್ತುಂಬಿಸಿಕೊಳ್ಳಬಹುದು. ಕೆಲವು ಪ್ರಕೃತಿದತ್ತ ಜಲಪಾತವಾಗಿದ್ದರೆ, ಮತ್ತೆ ಕೆಲವು ಭಾರಿ ಮಳೆಗೆ ತಾತ್ಕಾಲಿಕ ಜಲಧಾರೆಗಳಾಗಿ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿವೆ. ಪ್ರವಾಸಿಗರು ರಾಜ್ಯದ ಎಲ್ಲೆಲ್ಲಿ ಇಂಥ ಸುಂದರ ದೃಶ್ಯ ವೈಭವವನ್ನು ವೀಕ್ಷಿಸಬಹುದು ಎಂಬುದರ ಚಿತ್ರಸಹಿತ ಮಾಹಿತಿ ಇಲ್ಲಿದೆ.

Leave a Reply

Your email address will not be published. Required fields are marked *

Back To Top