Wednesday, 19th September 2018  

Vijayavani

ಸಂಪುಟಕ್ಕೆ ಸತೀಶ್​​​​​.. ಲೋಕಸಭೆಗೆ ರಮೇಶ್​​ - ಬೆಳಗಾವಿ ಕದನಕ್ಕೆ ತೆರೆ ಎಳೆಯಲು ಸಿದ್ದು ಪ್ಲಾನ್​​        ಹೈಕಮಾಂಡ್​​ ಅಂಗಳಕ್ಕೆ ಅತೃಪ್ತರ ಪುರಾಣ - ರಾಹುಲ್​​ ಜತೆ ಇಂದು ಸಿದ್ದರಾಮಯ್ಯ ಚರ್ಚೆ        ರಣೋತ್ಸಾಹದಲ್ಲಿ ಕಮಲ ಪಾಳಯ - ಇಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್​​ನಲ್ಲಿ ಶಾಸಕಾಂಗ ಸಭೆ        ಸಚಿವ ಡಿಕೆಶಿಗೆ ಫುಡ್​​ ಪಾಯ್ಸನ್​ - ಅಪೋಲೋ ಆಸ್ಪತ್ರೆಯಲ್ಲಿ ಸಚಿವರಿಗೆ ಟ್ರೀಟ್​ಮೆಂಟ್​ - ಸಂಜೆ ಡಿಸ್ಚಾರ್ಜ್ ಸಾಧ್ಯತೆ        ರಾಮಚಂದ್ರಾಪುರ ಮಠದ ಕೈತಪ್ಪಿದ ಗೋಕರ್ಣ ದೇಗುಲ - ಶ್ರೀ ಮಹಾಬಲೇಶ್ವರ ದೇವಸ್ಥಾನ ಸರ್ಕಾರದ ಸುಪರ್ದಿಗೆ        ದುಬೈ ಅಂಗಳದಲ್ಲಿಂದು ಭಾರತ- ಪಾಕ್​​ ಕಾಳಗ - ರೋಹಿತ್​​​​ ಪಡೆ ವಿರುದ್ಧ ಸರ್ಫರಾಜ್​ ಟೀಮ್​​ ತಂತ್ರ       
Breaking News

ಮಾಂಜರಿ ಪಿಂಚಣಿ ವಿಳಂಬದಿಂದ ಪಲಾನುಭವಿಗಳ ಪರದಾಟ 

Wednesday, 11.07.2018, 3:00 AM       No Comments

ಮಾಂಜರಿ: ಕಳೆದ 3ರಿಂದ 4 ತಿಂಗಳಿಂದ ಅಂಚೆಯ ಮೂಲಕ ಬರುವ ಪಿಂಚಣಿ ಸಂದಾಯವಾಗಿಲ್ಲ ಎಂದು ತಾಲೂಕಿನ ಬಹುತೇಕ ಪಿಂಚಣಿದಾರರು ಪರದಾಡುತ್ತಿದ್ದು, ವಿಳಂಬ ನೀತಿಯ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ವೃದ್ಧಾಪ್ಯ ವೇತನ ಅವಲಂಬಿಸಿ ಜೀವನ ಕಟ್ಟಿಕೊಂಡಿರುವ ಇಳಿ ವಯಸ್ಸಿನ ಜೀವಗಳು ಪ್ರತಿ ತಿಂಗಳು ಪಿಂಚಣಿಗಾಗಿ ಕಾಯುತ್ತಿರುವುದು ತೀವ್ರ ಚರ್ಚೆಗೂ ಗ್ರಾಸವಾಗಿದೆ.

ತಾಲೂಕಿನ ಅಂಕಲಿ ಗ್ರಾಮದ ಬಾಳು ಮಾಯಪ್ಪಾ ಯಡ್ರಾಂವೆ ಅವರ ಪಿಂಚಣಿ ಕಳೆದ ಅಕ್ಟೋಬರ್‌ದಿಂದ ಮೇ ವರೆಗಿನ ಹಣ ಚಿಕ್ಕೋಡಿ ಅಂಚೆ ಕಚೇರಿಯಿಂದ ಒಂದೇ ಸಲ ಬಿಡುಗಡೆಯಾಗಿದೆ. ಅಂಕಲಿ ಮತ್ತು ಮಾಂಜರಿ ಗ್ರಾಮದಲ್ಲಿ ಇಂತಹ ವಿಳಂಬದ ದೂರುಗಳು ಹೇರಳವಾಗಿವೆ.

ಚಿಕ್ಕೋಡಿ ಉಪ ಖಜಾನೆಯ ಮುಖ್ಯ ಲೆಕ್ಕಿಗ ಶಾಂತಿನಾಥ ಮೆಳವಂಕಿ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಖಜಾನೆಯಿಂದ ಇವತ್ತಿನವರೆಗೂ ಯಾವುದೇ ಪಿಂಚಣಿಗಳು ಬಾಕಿ ಇಲ್ಲ . ಪ್ರತಿ ತಿಂಗಳ ಕೊನೆಯ ವಾರದಲ್ಲಿ ಸರಿಯಾಗಿ ಬಿಡುಗಡೆ ಆಗುತ್ತಿದೆ ಎಂದು ತಿಳಿಸಿದ್ದಾರೆ. ಆದರೆ ಚಿಕ್ಕೋಡಿ ಅಂಚೆ ಇಲಾಖೆಯ ಸಹಾಯಕ ಅಧೀಕ್ಷಕ (ಎಎಸ್‌ಪಿ)ರು ಖಜಾನೆಯಿಂದ ಬಂದ ಪಿಂಚಣಿಗಳನ್ನು ಸಂದಾಯ ಮಾಡಲಿಕ್ಕೆ ಅಂಚೆ ಇಲಾಖೆಗೆ ಸುಮಾರು ಒಂದೂವರೆ ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಪಿಂಚಣಿ ಬಡವಾಡೆ ವಿಳಂಬವಾಗಬಾರದೆಂದು ಸಾಧ್ಯವಾದಷ್ಟು ಪ್ರಯತ್ತಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಡಿಜಿಟಲ್ ಯುಗದಲ್ಲಿ ಲಾನುಭವಿಗಳಿಗೆ ಪಿಂಚಣಿ ಸಕಾಲಕ್ಕೆ ತಲುಪದಿದ್ದರೆ ಹೇಗೆ ಎಂಬುದು ಪಿಂಚಣಿದಾರರ ಪ್ರಶ್ನೆಯಾಗಿದೆ.

Leave a Reply

Your email address will not be published. Required fields are marked *

Back To Top