More

    1 ಎಕರೆಯಲ್ಲಿ ತಿಂಗಳಿಗೆ 1 ಲಕ್ಷ ರೂಪಾಯಿ ಗಳಿಕೆ ಹೇಗೆ?

    1 ಎಕರೆಯಲ್ಲಿ ತಿಂಗಳಿಗೆ 1 ಲಕ್ಷ ರೂಪಾಯಿ ಗಳಿಕೆ ಹೇಗೆ?ರೈತ ದೇಶದ ಬೆನ್ನೆಲುಬು. ತುತ್ತು ಅನ್ನವ ತಿನ್ನುವ ಮೊದಲು ರೈತನನ್ನು ನೆನೆ ಎಂಬ ನಾಣ್ನುಡಿಯಂತೆ ಇಂದು ನಾವೆಲ್ಲರೂ ಹೊಟ್ಟೆ ತುಂಬುವಷ್ಟು ಊಟ ಮಾಡಿ ಹಸಿವೆ ಇಲ್ಲದೆ ನಿಶ್ಚಿಂತೆಯಿಂದ ನಿದ್ದೆ ಮಾಡುತ್ತಿದ್ದರೆ, ಇದಕ್ಕೆ ರೈತನ ಶ್ರಮದ ಬೆವರೇ ಮುಖ್ಯ ಕಾರಣ. ಇಂತಹ ರೈತನಿಗೆ ನಾವೆಲ್ಲರೂ ಕೃತಜ್ಞರಾಗಿರಬೇಕು. ನಮಗೆಲ್ಲರಿಗೂ ಡಾಕ್ಟರ್, ಲಾಯರ್, ಇಂಜಿನಿಯರ್​ಗಳು ಮಾತ್ರ ಮುಖ್ಯ ಎನಿಸುತ್ತಾರೆ. ಆದರೆ, ಮೂರು ಹೊತ್ತು ಅನ್ನಕ್ಕೆ ಕಾರಣವಾಗಿರುವ ರೈತನ ನೆನಪು ಮಾತ್ರ ಬರುವುದಿಲ್ಲ. ನಮ್ಮ ದೇಶದ ಹಿಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ‘ಜೈ ಕಿಸಾನ್​’ ಎಂದು ಶ್ಲಾಘಿಸಿದರು. ‘ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ, ಫಲವನು ಬಯಸದೆ ಸೇವೆಯೆ ಪೂಜೆಯು ಕರ್ಮವೆ ಇಹ ಪರ ಸಾಧನವು’ ಎಂದು ಕವಿ ಕುವೆಂಪು ರೈತರನ್ನು ಕೊಂಡಾಡಿದರು. ಆದರೆ ಇಂತಹ ಅನ್ನದಾತ ಇಂದು ಖುಷಿಯಾಗಿಲ್ಲ. ಆತ ಒಳ್ಳೆಯ ಆದಾಯ ಗಳಿಸುತ್ತಿಲ್ಲ. ಈ ಸನ್ನಿವೇಶದಲ್ಲಿ ರೈತರಲ್ಲಿ ಬೇಸಾಯದ ಬಗ್ಗೆ ವಿಶ್ವಾಸ ಮೂಡಿಸಿ ಮತ್ತೆ ಅವರು ಕೃಷಿ ಚಟುವಟಿಕೆಯಲ್ಲಿ ತೊಡಗುವ ಮೂಲಕ ಹೆಚ್ಚು ಆದಾಯ ಗಳಿಸುವಂತೆ ಮಾಡಲು ಹೊಸ ಪರಿಕಲ್ಪನೆಯೊಂದನ್ನು ಹುಟ್ಟು ಹಾಕಿದ್ದೇವೆ. ಹೆಚ್ಚು ಹಣ ಖರ್ಚು ಮಾಡದೆ ಒಂದು ಎಕರೆ ಕೃಷಿ ಭೂಮಿಯಲ್ಲಿ ಒಂದು ಲಕ್ಷ ರೂ. ಆದಾಯ ಗಳಿಸುವುದು ಹೇಗೆ ಎನ್ನುವುದರ ಬಗ್ಗೆ ವಿಶೇಷ ಕೋರ್ಸ್ ವಿನ್ಯಾಸಗೊಳಿ ಸಲಾಗಿದೆ. ಈ ವಿಶೇಷ ಕೋರ್ಸ್ ಬಗ್ಗೆ ವಿವರ ಇಲ್ಲಿದೆ.

    ರೈತರು ಕೃಷಿಯಿಂದ ಹೊರ ಬರಲು ಕಾರಣವೇನು? ನೀವು ಬಹುಶಃ ನೋಡಿರಬಹುದು, ಬಹಳಷ್ಟು ರೈತರು ವ್ಯವಸಾಯ ಬದಿಗಿಟ್ಟು ಬೇರೆ ವೃತ್ತಿಗೆ ತೆರಳುತಿದ್ದಾರೆ. ಕಾರಣ ಏನಿರಬಹುದು ಅಂತ ಕೇಳಿದರೆ ಅವರಿಂದ ಬರುವ ಉತ್ತರ, ‘ನಮ್ಮಲ್ಲಿರುವ ಕಡಿಮೆ ಭೂಮಿ ಅಥವಾ ಜಮೀನಿನಿಂದ ಎಷ್ಟು ಮಹಾ ಗಳಿಸೋಕೆ ಸಾಧ್ಯ? ಅದಕ್ಕಾಗಿ ನಾವು ಬಹಳಷ್ಟು ಕಷ್ಟಗಳನ್ನು ಅನುಭವಿಸಬೇಕು. ಅದೇ ಬೇರೆ ಕ್ಷೇತ್ರದಲ್ಲಿ ದುಡಿಮೆ ಮಾಡಿದರೆ ಒಂದಷ್ಟು ನಿರ್ದಿಷ್ಟ ಸಂಬಳವಾದ್ರೂ ಸಿಗುತ್ತೆ’ ಅನ್ನೋದು. ಬೆಂಗಳೂರಿನಂತಹ ಮಹಾನಗರಗಳಿಗೆ ಉದ್ಯೋಗ ಅರಸಿ ಓಲಾ, ಉಬರ್ ಚಾಲಕರಾಗಿಯೋ ಅಥವಾ ಡೆಲಿವರಿ ಏಜೆಂಟ್​ಗಳಾಗಿಯೋ ಕೆಲಸಕ್ಕೆ ಸೇರಿರುವವರಲ್ಲಿ ಬಹುಪಾಲು ಜನರು ಕೃಷಿಯಲ್ಲಿ ಲಾಭವಿಲ್ಲವೆಂದು ತಮ್ಮ ಜಮೀನನ್ನು, ಹಳ್ಳಿಯನ್ನು ಬಿಟ್ಟು ಬಂದವರೆ ಹೆಚ್ಚು. ಕುಟುಂಬದ ಸದಸ್ಯರೆಲ್ಲರೂ ಸೇರಿ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಪರಿಶ್ರಮಪಟ್ಟರೆ, ತಿಂಗಳಿಗೆ ನಿಮ್ಮದೇ ಕೃಷಿ ಭೂಮಿಯಲ್ಲಿ ರಾಜನಂತೆ ದುಡಿಯುತ್ತ ತಿಂಗಳಿಗೆ ಒಂದು ಲಕ್ಷ ಆದಾಯ ಗಳಿಸಲು ಸಾಧ್ಯವಿದೆ. ಕರ್ನಾಟಕದ ಹಲವು ಭಾಗಗಳಲ್ಲಿ ರೈತರು ತಮ್ಮ ಬಳಿ ಇರುವ ಅರ್ಧ ಎಕರೆ, ಒಂದು ಎಕರೆ ಜಮೀನಿನಲ್ಲೇ ಈ ರೀತಿಯ ಲಾಭದಾಯಕ ಕೃಷಿ ಮಾಡುತ್ತಿದ್ದಾರೆ.

    1 ಎಕರೆಯಲ್ಲಿ ತಿಂಗಳಿಗೆ 1 ಲಕ್ಷ ರೂಪಾಯಿ ಗಳಿಕೆ ಹೇಗೆ?ಒಂದು ಎಕರೆ ಕೃಷಿ ಭೂಮಿಯಲ್ಲಿ ಒಂದು ಲಕ್ಷ ರೂ. ಗಳಿಸೋದು ಹೇಗೆ? ಯಾವ ಕ್ರಮಗಳ ಅನುಸರಣೆ ರೈತರ ಬದುಕನ್ನು ಬದಲಿಸಬಲ್ಲದು? ಹೆಚ್ಚು ಬಂಡವಾಳವಿಲ್ಲದೆ ಬಹುಬೆಳೆ ವಿಧಾನದಿಂದ 1 ಎಕರೆಯಿಂದ ತಿಂಗಳಿಗೆ 1 ಲಕ್ಷ ರೂ. ಗಳಿಸುವುದಾದ್ರು ಹೇಗೆ? ಯಾವುದೇ ರಾಸಾಯನಿಕಗಳಿಲ್ಲದೆ ಮನೆಯಲ್ಲೇ ಪೌಷ್ಟಿಕ ಗೊಬ್ಬರ ತಯಾರಿಸುವುದಾದರೂ ಹೇಗೆ? ಇವೆಲ್ಲದಕ್ಕೂ ಉತ್ತರ ಒಂದೇ ವೇದಿಕೆಯಲ್ಲಿ ಅದುವೇ ನಮ್ಮ ಇಂಡಿಯನ್ ಮನಿಡಾಟ್​ಕಾಮ್ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ. ‘ನೀವೇನು, ಬೆಳೆ ಬೆಳಿತೀರಾ? ನಿಮಗೆ ಹೇಗೆ ಗೊತ್ತು ಕೃಷಿ ಬಗ್ಗೆ? ಅಂತ ನೀವೇನಾದ್ರೂ ಅಂದುಕೊಂಡ್ರೆ, ನಿಮ್ಮ ಪ್ರಶ್ನೆ ಸಮಂಜಸವಾಗಿಯೇ ಇದೆ. ಕೃಷಿಯಲ್ಲಿ ಯಶಸ್ಸು ಪಡೆಯುವುದು ಹೇಗೆ? ಎಂಬುದನ್ನು ವಿವರಿಸುವವರು ಕೃಷಿ ಕ್ಷೇತ್ರದಲ್ಲಿ ಉನ್ನತಿ ಸಾಧಿಸಿ, ಪ್ರಸ್ತುತ ಮಂಡ್ಯ ಜಿಲ್ಲೆಯಲ್ಲಿ ಆರ್ಗ್ಯಾನಿಕ್ ಮಂಡ್ಯ ಎಂಬ ಸಂಸ್ಥೆ ಸ್ಥಾಪಿಸುವ ಮುಖೇನ ಪ್ರತಿಯೊಬ್ಬ ರೈತರ ಒಳಿತಿಗಾಗಿ ಶ್ರಮಿಸುತ್ತಿರುವ ಮಧುಚಂದನ್ ಅವರು. ಅಮೆರಿಕದಲ್ಲಿ ತಮ್ಮದೇ ಆದ ಸಾಫ್ಟ್​ವೇರ್ ಕಂಪನಿಯೊಂದನ್ನು ನಡೆಸುತ್ತಿದ್ದ ಮಧುಚಂದನ್, ರೈತರ ಏಳ್ಗೆಗೆ ಟೊಂಕ ಕಟ್ಟಿ ನಿಂತಿದ್ದಾರೆ. ಇವರ ಜತೆಗೆ ಮತ್ತೊಬ್ಬ ಯಶಸ್ವಿ ರೈತ, ಸಾವಯವ ಬೆಳೆ ಬೆಳೆಯುವ ಮೂಲಕ ತಿಂಗಳಿಗೆ ಒಂದು ಎಕರೆ ಜಮೀನಿನಲ್ಲಿ ಒಂದು ಲಕ್ಷ ರೂ. ಗಳಿಸಿತ್ತಿರುವ ಕಾರಸವಾಡಿ ಮಹಾದೇವ ಅವರು. ತಿಂಗಳಿಗೆ ಒಂದು ಎಕರೆ ಜಮೀನಿನಲ್ಲಿ ಒಂದು ಲಕ್ಷ ಸಂಪಾದಿಸಲು ಅವರು ಏನು ಮಾಡಿದ್ರು ಎಂಬುದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಮೂಲಕ ನಿಮ್ಮದೇ ಕೃಷಿ ಭೂಮಿಯಿಂದ ಚಿನ್ನದ ಬೆಲೆ ಬೆಳೆಯುವ ಪರಿಯನ್ನು ವಿವರಿಸುತ್ತಾರೆ. ಈ ಎಲ್ಲ ಕ್ರಮಗಳು ಸಾಮಾಜಿಕ ಹಾಗೂ ವೈಜ್ಞಾನಿಕವಾಗಿಯೂ ನಿಮ್ಮ ಕೃಷಿ ಭೂಮಿಗೆ ಅನುಗುಣವಾಗಿ ಉತ್ತಮ ಲಾಭಾಂಶ ಗಳಿಸುವಲ್ಲಿ ಸಹಾಯಕವಾಗಲಿದೆ.

    ಕೃಷಿಯಿಂದ ಆರ್ಥಿಕತೆಗೆ ಸಿಗುತ್ತೆ ಮತ್ತಷ್ಟು ಬಲ: ನಮ್ಮ ದೇಶದ ಒಟ್ಟಾರೆ 138 ಕೋಟಿ ಜನಸಂಖ್ಯೆಯಲ್ಲಿ ಸರಾಸರಿ ಶೇ.58 ಜನಸಂಖ್ಯೆ ಕೃಷಿಯನ್ನು ಅವಲಂಬಿಸಿದ್ದಾರೆ. ಹೀಗಿದ್ದರೂ ನಮ್ಮ ದೇಶದ ಒಟ್ಟು ದೇಶಿಯ ಉತ್ಪನ್ನ ಅಂದರೆ ಜಿಡಿಪಿಯಲ್ಲಿ ಕೃಷಿಯ ಕೊಡುಗೆ ಕೇವಲ ಶೇ.18 ಮಾತ್ರ. ಒಮ್ಮೆ ಯೋಚನೆ ಮಾಡಿ ನೋಡಿ, ನಮ್ಮ ದೇಶದ ಶೇಕಡಾ 58 ಕೃಷಿಕರೆಲ್ಲರೂ ಮನಸ್ಸು ಮಾಡಿ ಶೇಕಡಾ 18ರ ಬದಲಿಗೆ ಶೇಕಡಾ 58ರಷ್ಟು ದೇಶದ ಜಿಡಿಪಿಗೆ ಕೊಡುಗೆ ನೀಡುವುದಾದರೆ, ನಮ್ಮ ದೇಶದ ಆರ್ಥಿಕತೆ ಉನ್ನತ ಶಿಖರವನ್ನೇರುವುದರಲ್ಲಿ ಸಂದೇಹವೇ ಇಲ್ಲ.

    ರೈತರಿಗೆ ಸರ್ಕಾರದಿಂದ ಸಿಗುವ ಪ್ರಯೋಜನಗಳು: ಅನ್ನ ಕೊಡುವ ರೈತ ಚೆನ್ನಾಗಿದ್ದರೆ ಇಡೀ ದೇಶ ಚೆನ್ನಾಗಿದ್ದ ಹಾಗೆ ಅಂತಾರೆ. ಅದೇ ನಿಟ್ಟಿನಲ್ಲಿ ನಮ್ಮ ದೇಶದ ರೈತರ ಒಳಿತಿಗಾಗಿ ಹಾಗೂ ಕೃಷಿಯನ್ನು ಪೋತ್ಸಾಹಿಸುವ ಸಲುವಾಗಿ ಸರ್ಕಾರ ಬಹಳಷ್ಟು ಯೋಜನೆಗಳನ್ನು ಹೊರತಂದಿದೆ. ಪ್ರಧಾನ್​ ಮಂತ್ರಿ ಕೃಷಿ ಸಿಂಚೈ ಯೋಜನೆ (ಪಿಎಂಕೆಎಸ್​ವೈ), ಪರಂಪರಗತ್​ ಕೃಷಿ ವಿಕಾಸ್​ ಯೋಜನೆ (ಪಿಕೆವಿವೈ), ಪ್ರಧಾನ್​ ಮಂತ್ರಿ ಕಿಸಾನ್​ ಸಮ್ಮಾನ್- ಧನ್​ ಯೋಜನೆ, ಪ್ರಧಾನ್​ ಮಂತ್ರಿ ಫಸಲ್​ ಭೀಮಾ ಯೋಜನೆ (ಪಿಎಂಎಫ್​ಬಿವೈ), ಜಾನುವಾರು ವಿಮಾ ಯೋಜನೆ, ಸುಸ್ಥಿರ ಕೃಷಿಗಾಗಿ ರಾಷ್ಟ್ರೀಯ ಮಿಷನ್​ (ಎನ್​ಎಂಎಸ್​ಎ), ಇ-ರಾಷ್ಟ್ರೀಯ ಕೃಷಿ ಮಾರುಕಟ್ಟೆ (E-NAM), ಸೂಕ್ಷ್ಮ ನೀರಾವರಿ ನಿಧಿ (ಮಿಫ್​) ಮತ್ತು ಹಲವಾರು.

    PHOTO GALLERY| ಚಿರು ಫೋಟೋ ಇಟ್ಟುಕೊಂಡು ಸೀಮಂತ ಶಾಸ್ತ್ರ ಮಾಡಿಸಿಕೊಂಡ ಮೇಘನಾ ರಾಜ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts