Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ತೆರಿಗೆ ಹೆಚ್ಚಳ ಏಳಿಗೆಗೆ ಪೂರಕ

Monday, 22.01.2018, 3:04 AM       No Comments

| ಜೆ.ಸಿ.ಜಾಧವ ವಿಮಾ ಅಭಿವೃದ್ಧಿ ಅಧಿಕಾರಿ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತೆರಿಗೆಯೂ ಒಳಗೊಂಡಿರುವುದರಿಂದ ಪ್ರತಿ ಬೆಲೆ ಏರಿಕೆ ಮೂಲಕ ಸರ್ಕಾರಗಳಿಗೆ ಸಂಪನ್ಮೂಲ ಕ್ರೋಡೀರಣವಾಗುತ್ತದೆ. ಹೀಗೆ ತೆರಿಗೆಯಿಂದ ಸಂಗ್ರಹಿಸಿದ ಮೊತ್ತವನ್ನು ಈ ವರ್ಷದಲ್ಲಿ ಕೇಂದ್ರ ಹಣಕಾಸು ಸಚಿವರು ರೂ.3,96,135 ಲಕ್ಷಕೋಟಿ ರೂಪಾಯಿಗಳನ್ನು ದೇಶದ ಅಭಿವೃದ್ಧಿಗಾಗಿ ಅಂದರೆ ರಸ್ತೆ, ಬಂದರು, ರೈಲು ಯೋಜನೆಗಳಿಗೆ ಹಾಗೂ ಸಂಪರ್ಕ ಸಾಧನಗಳ ಸೌಲಭ್ಯಗಳಿಗಾಗಿ ಬಳಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಕುಸಿತವಾದಾಗಲೂ ಸಹಿತ ಹೆಚ್ಚಿನ ದರದ ತೆರಿಗೆ ಇರುವುದರಿಂದ ಬೇಡಿಕೆಯನ್ನು ನಿಯಂತ್ರಣದಲ್ಲಿಡಲು ಸಾಧ್ಯ. ಹಾಗಾಗಿಯೇ ಅಬಕಾರಿ ಸುಂಕ 2014 ಹಾಗೂ ಪ್ರಸ್ತುತ ದರದಲ್ಲಿ ಬದಲಾವಣೆಯಾಗಿರುವುದು. ನಮ್ಮ ದೇಶದಲ್ಲಿ ಒಟ್ಟು ಬಳಕೆಯಾಗುವ ಡಿಸೇಲ್​ನಲ್ಲಿ ಅರ್ಧದಷ್ಟು ಸರಕು ಸಾಗಾಣೆಗೆ ವ್ಯಯಿಸಲಾದರೆ, ಇನ್ನರ್ಧದಷ್ಟು ಡಿಸೇಲ್ ಜನರೇಟರಗಳಿಗೆ ಬಳಸಲಾಗುತ್ತದೆ. ಪೆಟ್ರೋಲ್ ಕಾರ್ ಹಾಗೂ ಬೈಕ್​ಗಳಿಗೆ ಹೆಚ್ಚು ಬಳಕೆಯಾಗುತ್ತದೆ. ಡಿಸೇಲ್ ಬಳಸಿ ವಿದ್ಯುತ್ ಉತ್ಪಾದಿಸಿದರೆ ಒಂದು ಲೀಟರ್ ಡಿಸೇಲ್​ಗೆ 5 ಯುನಿಟ್ ಉತ್ಪಾದಿಸಬಹುದು. ಅಂದರೆ -ಠಿ;10 ಪ್ರತಿ ಯುನಿಟ್​ಗೆ, ಈಗ ಪ್ರಸ್ತುತ ಡಿಸೇಲ್ ದರ -ಠಿ;65ರ ಆಸುಪಾಸು. ಅದೇ ಸೋಲಾರ್ ರೂಫ್-ಟಾಪ್​ನಿಂದ ವಿದ್ಯುತ್ ಉತ್ಪಾದಿಸಿದರೆ -ಠಿ;5ರಲ್ಲಿ ಪ್ರತಿ ಯುನಿಟ್ ತಯಾರಾಗುತ್ತದೆ. ಈ ಎಲ್ಲಾ ಕಾರಣಗಳಿಗಾಗಿ ಸೋಲಾರ್ ಹಾಗೂ ಮರುಬಳಕೆಯ ಇಂಧನ ಬಳಕೆಯನ್ನು ಸರ್ಕಾರ ಪ್ರೇರೇಪಿಸುತ್ತಿದೆ. ದೇಶದಲ್ಲಿ ಸುಮಾರು 57,000 ಪೆಟ್ರೋಲ್ ಡಿಸೇಲ್ ಬಂಕ್​ಗಳಿದ್ದರೆ, ಬರೀ 1094 ಸಿಎನ್​ಜಿ ಔಟ್​ಲೆಟ್​ಗಳಿವೆ. ಈ ವಿಷಯದಲ್ಲಿ ಸರ್ಕಾರಗಳು ಸ್ವಾಭಾವಿಕ ಅನಿಲ ಇಂಧನ ಪೂರೈಸುವ ಬಹಳಷ್ಟು ಔಟ್​ಲೆಟ್​ಗಳನ್ನು ಸ್ಥಾಪಿಸಲು ಮುಂದಾಗಬೇಕಾಗಿರುವುದು ಅವಶ್ಯ. ಈ ಸಿಎನ್​ಜಿ ಔಟ್​ಲೆಟ್​ಗಳನ್ನು ಹೆಚ್ಚುಹೆಚ್ಚಾಗಿ ಸ್ಥಾಪಿಸಿ ತೈಲೋತ್ಪನ್ನಗಳ ಬದಲಾಗಿ ಸಿಎನ್​ಜಿ ಉಪಯೋಗಿಸಲು ಪ್ರೋತ್ಸಾಹಿಸಬೇಕು. ಇದರಿಂದ ಕಚ್ಚಾತೈಲ ಆಮದು ಕಡಿಮೆಯಾಗುತ್ತದೆ ಹಾಗೂ ಸ್ವಾಭಾವಿಕ ಅನಿಲ ಬಳಸುವುದರಿಂದ ಪರಿಸರಕ್ಕೆ ಹಾನಿಯಾಗುವುದು ತಪ್ಪುತ್ತದೆ ಅಲ್ಲದೇ ಆರ್ಥಿಕವಾಗಿ ಮುಂದುವರಿದ ರಾಷ್ಟ್ರವಾಗಲು ಸಹಾಯವಾಗುತ್ತದೆ.

Leave a Reply

Your email address will not be published. Required fields are marked *

Back To Top