Tuesday, 22nd August 2017  

Vijayavani

1.ಕೇಬಲ್ ವೈರ್ ಕದ್ದಿದ್ದಾರೆ ಅಂತ ಮೂವರಿಗೆ ಥಳಿಸಿದ್ರು- ಒಬ್ಬನಿಗೆ ಶಾಕ್​ ಕೊಟ್ಟು ಕೊಂದೇ ಬಿಟ್ರು- ಬೆಂಗಳೂರಿನ ಕುಂದಹಳ್ಳಿ ಬಳಿ ಬರ್ಬರ ಹತ್ಯೆ 2.ಸುಪ್ರೀಂಕೋರ್ಟ್​ನಲ್ಲಿಂದು ತಲಾಖ್​ ತೀರ್ಪು- ನ್ಯಾಯದ ನೀರಿಕ್ಷೆಯಲ್ಲಿ ಮುಸ್ಲಿಂ ಮಹಿಳೆಯರು- ಎಲ್ಲರ ಚಿತ್ತ ಫೈನಲ್​ ಜಡ್ಜ್​ಮೆಂಟ್​ನತ್ತ 3.ಎರಡೆಲೆ ಒಂದಾದ್ರೂ ನಿಂತಿಲ್ಲ ಹೈಡ್ರಾಮ- ಬಣ ವೀಲಿನಕ್ಕೆ ಚಿನ್ನಮ್ಮನ ಟೀಂ ಗರಂ – ಇಂದು18 ಶಾಸಕರಿಂದ ಗೌರ್ನರ್​ ಭೇಟಿಗೆ ಟೈಂ ಫಿಕ್ಸ್​ 4.ಕೇಂದ್ರದ ವಿರುದ್ದ ಸಿಡಿದೆದ್ದ ಬ್ಯಾಂಕರ್ಸ್- ಇಂದು ದೇಶಾದ್ಯಂತ ಬಹುತೇಕ ಬ್ಯಾಂಕ್​ ವಹಿವಾಟು ಕ್ಲೋಸ್​- ಎಟಿಎಂ ಬಳಸೋರಿಗೆ ರಿಲಾಕ್ಸ್​ 5.ಶತಮಾನದ ಸೂರ್ಯಗ್ರಹಣಕ್ಕೆ ಅಮೆರಿಕ ಸಾಕ್ಷಿ- ಖಗೋಳದಲ್ಲಿ ಬೆಳಕಿನ ವಿಸ್ಮಯ ಸೃಷ್ಟಿ – ವಜ್ರದುಂಗುರ ಕಂಡು ಬೆರಗಾದ್ರು ಟ್ರಂಪ್​
Breaking News :

ದೆಹಲಿ ಆರೋಗ್ಯ ಮಂತ್ರಿ ಸತ್ಯೇಂದ್ರ ಜೈನ್ ನಿವಾಸದ ಮೇಲೆ ಸಿಬಿಐ ದಾಳಿ

Monday, 19.06.2017, 2:34 PM       No Comments

ನವದೆಹಲಿ: ದೆಹಲಿ ಸರ್ಕಾರದ ಆರೋಗ್ಯ ಮಂತ್ರಿ ಸತ್ಯೇಂದ್ರ ಜೈನ್ ಅವರ ನಿವಾಸಕ್ಕೆ ಸೋಮವಾರ ಭೇಟಿ ನೀಡಿದ್ದ ಸಿಬಿಐ ಅಧಿಕಾರಿಗಳ ತಂಡವು ಅವರ ಪತ್ನಿಯನ್ನು ಸಹಿತ ವಿಚಾರಣೆಗೊಳಪಡಿಸಿತು.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಭೇಟಿ ನೀಡಿರುವುದಾಗಿ ತಿಳಿದುಬಂದಿದೆ. ಈ ಪ್ರಕರಣದ ಬಗ್ಗೆ ಸತ್ಯೇಂದ್ರ ಜೈನ್ ಅವರ ಪತ್ನಿಯನ್ನು ತೀವ್ರ ವಿಚಾರಣೆ ಮಾಡಲಾಗುತ್ತಿದ್ದು, ಅಗತ್ಯ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

ಪ್ರಕರಣದ ಪ್ರಾಥಮಿಕ ವಿಚಾರಣೆಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ಪಡೆಯಲು ಜೈನ್ ಅವರ ಪತ್ನಿಯನ್ನು ವಿಚಾರಣೆ ಮಾಡಲಾಗಿದೆ ಎಂದು ಸಿಬಿಐ ವಕ್ತಾರ ಆರ್.ಕೆ. ಗೌರ್ ತಿಳಿಸಿದ್ದಾರೆ.

2015-16ರಲ್ಲಿ ಪ್ರೈಸ್ ಇನ್ಫೋ ಸಲ್ಯೂಶನ್ಸ್​ ಪ್ರೈವೇಟ್ ಲಿ., ಅಕಿಂಚನ್ ಡೆವಲಪರ್ಸ್​ ಮತ್ತು ಮನಗಲ್ಯಾತನ್ ಪ್ರಾಜೆಕ್ಟ್ ಪ್ರೈವೇಟ್ ಲಿ. ಮೂಲಕ 4.63 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸತ್ಯೇಂದ್ರ ಜೈನ್ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಆಮ್​ ಆದ್ಮಿ ಪಕ್ಷ ಕೇಂದ್ರ ಸರ್ಕಾರವನ್ನು ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದೆ. ಸಿಬಿಐಯನ್ನು ದುರುಪಯೋಗಪಡಿಸಿಕೊಂಡು ದೆಹಲಿ ಸರ್ಕಾರದ ಸಚಿವದ್ವಯರ ಮೇಲೆ ದಾಳಿ ಮಾಡಿಸುತ್ತಿದೆ ಎಂದು ಟ್ವಿಟ್​ ಮಾಡಿದೆ.

‘ಟಾಕ್ ಟು ಎಕೆ’ ಕಾರ್ಯಕ್ರಮದ ಪ್ರಾಥಮಿಕ ತನಿಖೆಯಲ್ಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರ ಹೇಳಿಕೆ ದಾಖಲಿಸಲು ಸಿಬಿಐ ತಂಡ ಕೆಲವು ದಿನಗಳ ಹಿಂದೆ ಸಿಸೋಡಿಯಾ ಅವರ ಮನೆಗೆ ಭೇಟಿ ನೀಡಿತ್ತು. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top