Thursday, 20th September 2018  

Vijayavani

Breaking News

ಮೋದಿ ಮಹದಾಯಿ ಬಗ್ಗೆ ಮಾತನಾಡಿದ್ದು ಚುನಾವಣೆಗಾಗಿಯೇ?: ಎಚ್​ಡಿಡಿ

Sunday, 06.05.2018, 5:55 PM       No Comments

<<ಸಿಎಂನಿಂದ ಜೆಡಿಎಸ್​ ಮುಗಿಸಲು ಯತ್ನ>>

ರಾಯಚೂರು: ನಾಲ್ಕು ಬಾರಿ ‌ಮಹದಾಯಿ ಸಮಸ್ಯೆ ಬಗೆಹರಿಸಲು ಕೇಳಿದರೆ ಮೌನವಾಗಿದ್ದ ಪ್ರಧಾನಿ ಮೋದಿ ಈಗ ಆಲೋಚಿಸುವ ಮಾತನ್ನಾಡಿದ್ದಾರೆ. ಇದು ವಿಕಾಸದ ಮಾತೇ ಅಥವಾ ಚುನಾವಣೆಯ ಮಾತೇ? ಎಂದು ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.

ರಾಯಚೂರಿನ ಜೆಡಿಎಸ್ ಚುನಾವಣೆ ಪ್ರಚಾರ ಸಮಾವೇಶದಲ್ಲಿ ಭಾನುವಾರ ಮಾತನಾಡಿ, ರಾಜ್ಯಕ್ಕೆ ಆಗಮಿಸಿರುವ ಮೋದಿ ವಿಕಾಸದ ‌ಮಾತಾಡುತ್ತಿದ್ದಾರೆ. ಅವರ ಪಕ್ಷ ಅಧಿಕಾರದಲ್ಲಿದ್ದಾಗ ಯಾವ ವಿಕಾಸ ಮಾಡಿದ್ದಾರೆ. ರಾಹುಲ್ ಗಾಂಧಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಬೆಳೆ ಸಾಲ ಮನ್ನಾ ಮಾಡುತ್ತಾರಂತೆ, ಬಿಜೆಪಿಯವರು ಒಂದು ಲಕ್ಷ ಮನ್ನಾ ಮಾಡ್ತಾರಂತೆ. ಆದರೆ ಇದು ಕುಮಾರಸ್ವಾಮಿ ಅವರ ಪ್ರಭಾವ ಎನ್ನುವುದನ್ನು ಮರೆಯಬಾರದು ಎಂದರು.

ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಸೆಡೆದು ‌ನಿಲ್ಲಲು ಜೆಡಿಎಸ್‌ನ್ನು ಬೆಂಬಲಿಸಲು‌ ದೇವೇಗೌಡರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಸಿಎಂನಿಂದ ಜೆಡಿಎಸ್​ ಮುಗಿಸಲು ಯತ್ನ
ನಾನು ಬೆಳೆಸಿದ ಸಿದ್ದರಾಮಯ್ಯ ಅವರೇ ಜೆಡಿಎಸ್​ಗೆ ದ್ರೋಹ ಮಾಡಿದ್ದು, ನಮ್ಮ ಪಕ್ಷದ ಏಳು ಮಂದಿ ಶಾಸಕರನ್ನು ಕಾಂಗ್ರೆಸ್‌ಗೆ ಸೆಳೆದು ಜೆಡಿಎಸ್ ಮುಗಿಸಲು ಯತ್ನಿಸಿದ್ದಾರೆ. ಆದರೂ ನನ್ನ ಹೋರಾಟದ ಕಿಚ್ಚು ಇನ್ನೂ ಕಡಿಮೆ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *

Back To Top