Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ಆಟೋಗೆ ಬೈಕ್​ ಸ್ವಲ್ಪ ಟಚ್​​​ ಆಗಿದ್ದಕ್ಕೆ ಪ್ರಾಣ ತೆಗೆಯೋದಾ…!

Friday, 20.10.2017, 6:31 AM       No Comments

ಬೆಂಗಳೂರು: ಆಟೋಗೆ ಬೈಕ್​ ಟಚ್​​​ ಆಗಿದ್ದಕ್ಕೆ ಉಂಟಾದ ಗಲಾಟೆ ಓರ್ವನ ಪ್ರಾಣ ತೆಗೆದಿರುವ ಘಟನೆ ನಗರದ ಕೆ.ಜಿ.ಹಳ್ಳಿಯಲ್ಲಿ ಗುರುವಾರ ರಾತ್ರಿ ನಡೆದಿದೆ.

ಅಟೋಗೆ ಬೈಕ್​ ಟಚ್ ಆಗಿದ್ದಕ್ಕೆ ದುಷ್ಕರ್ಮಿಗಳು ಲಾಂಗು ಮಚ್ಚುಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಮೃತ ವ್ಯಕ್ತಿಯನ್ನ ಕೆ ಜಿ ಹಳ್ಳಿ ನಿವಾಸಿ ಸೈಯದ್ ಯೂಸುಫ್ ಅಂತ ಗುರುತಿಸಲಾಗಿದೆ.

ನಿನ್ನೆ ಗುರುವಾರ ರಾತ್ರಿ ಸುಮಾರು ಎಂಟು ಘಂಟೆ ವೇಳೆಗೆ ಯೂಸುಫ್​ ಕೆಲಸ ಮುಗಿಸಿ ಮನೆಗೆ ಬಂದಿದ್ದಾರೆ. ನಂತರ ಟೀ ಕುಡಿಯಲು ಒಂಬತ್ತು ಗಂಟೆ ಸುಮಾರಿಗೆ ಕೆ ಜಿ ಹಳ್ಳಿ ಹಳೆ ಪೊಲೀಸ್ ಠಾಣೆ ಬಳಿ ತೆರಳ್ತಿದ್ದಾಗ, ರೌಡಿಶೀಟರ್​​ ಚಪ್ಡಿ ನದೀಮ್ ಅಟೋಗೆ ಟಚ್ ಅಗಿದೆ.

ಈ ವೇಳೆ ಗಲಾಟೆ ಶುರುವಾಗಿ ನದೀಮ್​​​​​​​ ಮತ್ತು ಸಹಚರರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ನಂತರ ಗಾಯಗೊಂಡಿದ್ದ ಯೂಸುಫ್​ನನ್ನು ಬೌರಿಂಗ್ ಅಸ್ಪತ್ರೆಗೆ ಚಿಕಿತ್ಸೆ ಗೆ ದಾಖಲಿಸಿತ್ತಾದ್ರೂ , ತಲೆ ಮತ್ತು ಬೆನ್ನಿಗೆ ಬಲವಾದ ಪೆಟ್ಟು ಬಿದ್ದಿದ್ದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೆ ಜಿ ಹಳ್ಳಿ ಪೊಲೀಸರು ಚಪ್ಡಿ ನದೀಮ್ ಮತ್ತು ಅತನ ಗ್ಯಾಂಗ್​​ನ ಮತ್ತಿಬ್ಬರನ್ನು ವಶಕ್ಕೆ ಪಡೆದಿದ್ದು ಉಳಿದ ಅರೋಪಿಗಳಿಗಾಗಿ ಬಲೆ ಬೀಸಿದ್ದಾರೆ . (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top