Thursday, 19th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News

ಸ್ವಯಂಚಾಲಿತ ವೀಲ್​ಚೇರ್

Saturday, 07.07.2018, 3:04 AM       No Comments

ವೈದ್ಯಕೀಯ ಸಲಕರಣೆಗೆ ಭಾರತ ವಿದೇಶಿ ಕಂಪನಿಗಳನ್ನೇ ಹೆಚ್ಚು ಅವಲಂಬಿಸಿರುವ ಈ ಸಮಯದಲ್ಲಿ ತಮಿಳುನಾಡು ಅಮೃತ ವಿಶ್ವವಿದ್ಯಾಪೀಠದ ಬಿ. ಟೆಕ್ ವಿದ್ಯಾರ್ಥಿಗಳು ದೇಶೀಯ ಸ್ವಯಂಚಾಲಿತ ವೀಲ್​ಚೇರ್​ಅಭಿವೃದ್ಧಿ ಪಡಿಸಿದ್ದಾರೆ. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ವಿದ್ಯಾರ್ಥಿಗಳ ಸಾಧನೆ

ಸ್ವಯಂಚಾಲಿತ ವೀಲ್​ಚೇರನ್ನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ಅಭಿವೃದ್ಧಿ ಪಡಿಸಿದ್ದಾರೆ. ಬಿ.ಟೆಕ್​ನ ಪ್ರಾಜೆಕ್ಟ್ ಕೋರ್ಸ್ ಅಂಗವಾಗಿ ಮೂವರು ವಿದ್ಯಾರ್ಥಿಗಳು ಈ ಸಂಶೋಧನೆ ನಡೆಸಿದ್ದಾರೆ. ಚಿಂಟ ರವಿತೇಜ, ಶರತ್ ಶ್ರೀಕಾಂತ್ ಹಾಗೂ ಅಖಿಲ್ ಈ ಸಂಶೋಧನೆಯಲ್ಲಿ ಭಾಗಿಯಾಗಿದ್ದಾರೆ. ಅಮೃತ ವಿಶ್ವವಿದ್ಯಾಪೀಠದ ಟೆಕ್ನಾಲಜಿ ಬಿಜಿನೆಸ್ ಇನ್​ಕ್ಯುಬೇಟರ್ ನೆರವಿನಿಂದ ಈ ಪ್ರಾಜೆಕ್ಟ್ ಮಾಡಲಾಗಿದೆ. ಇದಕ್ಕೆ ಸೆಲ್ಪ್-ಇ ವೀಲ್ ಚೇರ್ ಎಂದು ಹೆಸರಿಡಲಾಗಿದೆ.

ಬೆಲೆಯೂ ಅಗ್ಗ

ಸ್ವಯಂಚಾಲಿತ ವೀಲ್​ಚೇರ್​ಗಳ ಬೆಲೆ ದುಬಾರಿಯಿದೆ. ಒಂದು ವೀಲ್​ಚೇರ್​ಗೆ 1ರಿಂದ 4 ಲಕ್ಷ ರೂ.ವರೆಗೂ ಬೆಲೆಯಿದೆ. ಸಾಮಾನ್ಯರಿಗೆ ಇದನ್ನು ಖರೀದಿಸಲು ಸಾಧ್ಯವೇ ಇಲ್ಲ ಎನ್ನುವಂಥ ಪರಿಸ್ಥಿತಿಯಿದೆ. ಆದರೆ ಈ ವಿದ್ಯಾರ್ಥಿಗಳು ರೂಪಿಸಿರುವ ಸ್ವಯಂಚಾಲಿತ ವೀಲ್​ಚೇರ್​ನ್ನು 1 ಲಕ್ಷ ರೂ. ಒಳಗೆ ನಿರ್ವಿುಸಲಾಗಿದೆ. ಇದು ಉತ್ಪಾದನೆ ಹಂತಕ್ಕೆ ತಲುಪಿದರೆ ಇನ್ನಷ್ಟು ಬೆಲೆ ಕಡಿಮೆಯಾಗಬಹುದು ಎನ್ನುವುದು ಸಂಶೋಧನಾ ವಿದ್ಯಾರ್ಥಿಗಳ ಅಭಿಪ್ರಾಯವಾಗಿದೆ.

ಸಾರ್ವಜನಿಕ ಸ್ಥಳ, ಮನೆ ಹಾಗೂ ಇತರೆಡೆ ಬಳಸಬಹುದಾದ ರೀತಿಯಲ್ಲಿ ವೀಲ್​ಚೇರ್ ಅಭಿವೃದ್ಧಿಪಡಿಸಿದ್ದೇವೆ. ಸಾಮಾನ್ಯ ಭಾರತೀಯರಿಗೆ ಈ ಸೌಲಭ್ಯ ಅಸಾಧ್ಯ ಎನ್ನುತ್ತಿದ್ದ ಕಾರಣದಿಂದ ಈ ಸಂಶೋಧನೆ ಹಾಗೂ ಅಭಿವೃದ್ಧಿಗೆ ಮುಂದಾದೆವು.

| ಶರತ್ ಶ್ರೀಕಾಂತ್ ಬಿ.ಟೆಕ್ ವಿದ್ಯಾರ್ಥಿ

Leave a Reply

Your email address will not be published. Required fields are marked *

Back To Top