Thursday, 20th September 2018  

Vijayavani

Breaking News

ಅಮೆರಿಕದ ಬೋಸ್ಟನ್​ ಪಟ್ಟಣದ ಹಲವೆಡೆ ಬೆಂಕಿ ಅವಘಡ, ಸಾಮೂಹಿಕ ಸ್ಥಳಾಂತರ

Friday, 14.09.2018, 10:47 AM       No Comments

ಬೋಸ್ಟನ್​: ಅಮೆರಿಕದ ಉತ್ತರ ಬೋಸ್ಟನ್​ನ ಹಲವೆಡೆ ಗುರುವಾರ ಸಂಭವಿಸಿದ ಬೆಂಕಿ ಅವಘಡದಿಂದಾಗಿ ಇಲ್ಲಿನ ಜನರನ್ನು ಸಾಮೂಹಿಕ ಸ್ಥಳಾಂತರಿಸಲಾಗುತ್ತಿದ್ದು, ಅನಿಲ​ ಸ್ಫೋಟದಿಂದಾಗಿ ಈ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.

ಪೂರ್ವ ಕರಾವಳಿ ಪಟ್ಟಣಗಳಾದ ಲಾರೆನ್ಸ್, ಅಂಡೋವರ್ ಮತ್ತು ಉತ್ತರ ಅಂಡೋವರ್​ ಒಳಗೊಂಡ ವ್ಯಾಪಕ ಪ್ರದೇಶಗಳಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಗ್ಯಾಸ್​ ವಾಸನೆ ಹರಡಿದೆ. ಸುಮಾರು 70 ಪ್ರದೇಶಗಳಲ್ಲಿ ಸ್ಫೋಟ ಸಂಭವಿಸಿರುವುದಾಗಿ ವರದಿಯಾಗಿದೆ ಎಂದು ಮ್ಯಾಸಚೂಸೆಟ್ಸ್ ರಾಜ್ಯ ಪೊಲೀಸ್ ತಿಳಿಸಿದೆ.

ಅಗ್ನಿಶಾಮಕ ದಳ ಸ್ಥಳದಲ್ಲಿ ಬೀಡುಬಿಟ್ಟಿದ್ದು ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಈ ಭಾಗದಲ್ಲಿರುವ ಗ್ಯಾಸ್​ ಪೈಪ್​ಲೈನ್​ ಸಂಪರ್ಕವನ್ನು ನಿಷ್ಕ್ರೀಯಗೊಳಿಸಲಾಗುತ್ತಿದ್ದು, ಇದು ಸ್ವಲ್ಪ ಸಮಯ ಹಿಡಿಯಲಿದೆ. ಅಲ್ಲದೆ, ಹೆಚ್ಚಿನ ಅನಾಹುತ ಆಗದಂತೆ ತಡೆಯಲು ಘಟನಾ ಸ್ಥಳದ ಸುತ್ತ ವಿದ್ಯುತ್​ ಸಂಪರ್ಕವನ್ನು ಕಡಿತಗೊಳಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ 6 ಮಂದಿಗೆ ಗಾಯಗೊಂಡಿದ್ದು, ಎಂಡೋವರ್​ನಲ್ಲಿ ಓರ್ವ ಅಗ್ನಿಶಾಮಕ ಸಿಬ್ಬಂದಿಗೂ ಗಾಯವಾಗಿದೆ. ಲಾರೆನ್ಸ್​ ಜನರಲ್​ ಹಾಸ್ಪಿಟಲ್​ನ ವಕ್ತಾರ ಜಿಲ್​ ಮೆಕ್​ಡೊನಾಲ್ಡ್ಸ್​ ಹೆಸ್ಲಿ ಮಾತನಾಡುತ್ತಾ 10 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಘಟನೆಯ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಹೆಚ್ಚಿನ ಒತ್ತಡದಿಂದ ಸ್ಫೋಟಗಳು ಸಂಭವಿಸಿ ಬೆಂಕಿ ತಗುಲಿರಬಹುದೆಂಬ ಅನುಮಾನ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top