Saturday, 22nd September 2018  

Vijayavani

‘ದಂಗೆ’ ಬಿಸಿ ತಟ್ಟುತ್ತಿದ್ದಂತೆ ದೇವರ ಸ್ತುತಿ - ಶಾರದಂಬೆ ಸನ್ನಿಧಿಯಲ್ಲಿ ಎಚ್​​ಡಿಕೆ - ಸಿಎಂಗೆ ಅಣ್ಣ ರೇವಣ್ಣ ಸಾಥ್​        ರಾಜ್ಯ ರಾಜಕೀಯ ಹಾಸನಕ್ಕೆ ಶಿಫ್ಟ್​ - ಇಂದು ಹಾಸನದಲ್ಲಿ ಜೆಡಿಎಲ್​​ಪಿ ಮೀಟಿಂಗ್​ - ದಳನಾಯಕರಿಂದ ರಣತಂತ್ರದ ಚರ್ಚೆ        ಸಿಎಂ ದಂಗೆ ಹೇಳಿಕೆ ವಿರುದ್ಧ ಬಿಜೆಪಿ ಆಕ್ರೋಶ - ಇಂದು ಕೂಡ ಹಲವೆಡೆ ಹೋರಾಟ ಸಂಭವ        ಇಂದು ಚಿಕ್ಕಮಗಳೂರಲ್ಲಿ ಸಿಎಂ ಮೀಟಿಂಗ್​ - ಅತಿವೃಷ್ಟಿ, ಅನಾವೃಷ್ಟಿ ಕುರಿತು ಚರ್ಚೆ - ಸಿಎಂಗೆ ವರದಿ ನೀಡಲಿರುವ ಡಿಸಿ        ರಾಫೆಲ್​​ ವಿಮಾನ​​​​ ಖರೀದಿ ಹಗರಣ - ಭಾರತವೇ ಅನಿಲ್​ ಅಂಬಾನಿ ಹೆಸರು ಸೂಚಿಸಿತ್ತು - ವಿವಾದಕ್ಕೆ ತುಪ್ಪ ಸುರಿದ ಹೊಲೆಂಡೆ ಹೇಳಿಕೆ        ಭುಗಿಲೆದ್ದಿರುವ ರಫೇಲ್​​ ಡೀಲ್​ ಹಗರಣ - ಪ್ರಕಟಣೆ ಹೊರಡಿಸಿದ ಫ್ರಾನ್ಸ್​​ ಸರ್ಕಾರ - ಕಂಪನಿಗಳ ಮೇಲೆ ಹಸ್ತಕ್ಷೇಪ ಇಲ್ಲವೆಂದು ಸ್ಪಷ್ಟನೆ       
Breaking News

ಉದ್ಯಾನ ನಗರಿಯಲ್ಲೀಗ ಸ್ಮಾರ್ಟ್​ಹೋಮ್ ಕಲ್ಪನೆ

Saturday, 26.05.2018, 3:05 AM       No Comments

ಇದು ಅಂಗೈನಲ್ಲೇ ಅರಮನೆ ಜಮಾನ. ಕುಳಿತಲ್ಲೇ ಧ್ವನಿ ಆದೇಶದ ಮೂಲಕ ಹಾಡು ಕೇಳಬಹುದು. ಆನ್​ಲೈನ್​ನಲ್ಲಿ ಆರ್ಡರ್ ಮಾಡಬಹುದು. ಎಸಿ, ಟಿವಿ ಆನ್ ಮಾಡಬಹುದು. ಇವೆಲ್ಲವೂ ಸ್ಮಾರ್ಟ್​ಹೋಮ್ ಮಹಿಮೆ.

|ಅಭಿಲಾಷ್ ಪಿಲಿಕೂಡ್ಲು

ಬೆಂಗಳೂರು: ಮನೆಯಲ್ಲಿ ಎಸಿ, ಮೂಡ್​ಗೆ ತಕ್ಕಂಥ ಬೆಳಕು, ಟಿವಿ, ನೀರಿನ ಸ್ವಿಚ್ ಹಾಕಲು ನೀವು ಎದ್ದು ಹೋಗಬೇಕಿಲ್ಲ. ಕುಳಿತ ಜಾಗದಿಂದಲೇ ಎಲ್ಲವನ್ನೂ ನಿಯಂತ್ರಿಸಬಹುದು. ಮನೆಯಿಂದ ಹೊರಗಿದ್ದುಕೊಂಡೇ ಈ ಎಲ್ಲ ವ್ಯವಸ್ಥೆಯನ್ನೂ ಕಮಾಂಡ್ ಮಾಡಬಹುದು. ಇಷ್ಟೇ ಅಲ್ಲ, ಇಂಥ ಹಾಡು ಬೇಕು ಎಂದು ನೀವಿರುವ ಸ್ಥಳದಿಂದಲೇ ಹೇಳಿದರೆ ಸಾಕು ನಿಮಗಿಷ್ಟದ ಹಾಡು ಟ್ಯೂನ್ ಆಗಿ ಕಿವಿಗೆ ಇಂಪು ಕೊಡುತ್ತದೆ!

ಹೌದು, ಕೈಯಲ್ಲಿರುವ ಸ್ಮಾರ್ಟ್​ಫೋನ್ ಅಥವಾ ವಾಯ್್ಸ ಕಮಾಂಡ್ ಮೂಲಕವೇ ಮನೆ ವ್ಯವಸ್ಥೆಯನ್ನು ನಿಯಂತ್ರಿಸಬಹುದಾದ ಸ್ಮಾರ್ಟ್​ಹೋಮ್ ಪರಿಕಲ್ಪನೆ ಉದ್ಯಾನಗರಿಗೂ ಬಂದಿದೆ. ಆಧುನಿಕ ತಂತ್ರಜ್ಞಾನ ಉಪಕರಣಗಳಿಂದಲೇ ಸುತ್ತುವರಿದಿರುವ ಜನರ ಮೆಚ್ಚುಗೆಗೆ ತಕ್ಕಂತೆ ‘ಸ್ಮಾರ್ಟ್​ಹೋಮ್ ಪರಿಕಲ್ಪನೆಯೊಂದಿಗೆ ಯುವ ಗ್ರಾಹಕರನ್ನು ಆಕರ್ಷಿಸಲು ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಡೆವಲಪರ್ಸ್ ಯೋಜನೆಗಳ ಜಾರಿಗೆ ಸಜ್ಜಾಗಿದ್ದಾರೆ.

ಪಾಶ್ಚಾತ್ಯ ದೇಶಗಳಲ್ಲಿ ಈಗಾಗಲೇ ಯಶಸ್ವಿಯಾಗಿರುವ ಸ್ಮಾರ್ಟ್​ಹೋಮ್ ಪರಿಕಲ್ಪನೆ ಇಲ್ಲೂ ಬಂದಿದೆ. ರಾಜಧಾನಿಯಲ್ಲೇ ಮೊದಲು ಈ ಯೋಜನೆ ಜಾರಿಯಾಗಿದೆ. ಇದೇ ಪ್ರಪ್ರಥಮ ಬಾರಿಗೆ ಬೆಂಗಳೂರು ಉತ್ತರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಎಂಬೆಸ್ಸಿ ಗ್ರೂಪ್ ‘ಎಂಬೆಸಿ ಎಡ್ಜ್’ ಹೆಸರಿನಲ್ಲಿ 826 ಸ್ಮಾರ್ಟ್​ಹೋಮ್ಳನ್ನು ನಿರ್ಮಾಣ ಮಾಡಿದೆ. ಇನ್ನೂ ಹಲವು ಸಂಸ್ಥೆಗಳು ಈ ಹೊಸ ಪರಿಕಲ್ಪನೆ ಜಾರಿಗೆ ಸಿದ್ಧತೆ ನಡೆಸಿರುವುದು ಹೊಸ ಟ್ರೆಂಡ್ ಸೃಷ್ಟಿಗೆ ನಾಂದಿಯಾಡಿದೆ.

ಏನಿದು ಸ್ಮಾರ್ಟ್​ಹೋಮ್

ಹಾಲಿವುಡ್ ಸಿನಿಮಾಗಳಲ್ಲಿ ಕೇವಲ ಮಾತಿನ ಆದೇಶದಿಂದಲೇ ಮನೆಯ ಉಪಕರಣಗಳನ್ನು ನಿಯಂತ್ರಿಸುತ್ತಿರುವ ದೃಶ್ಯಗಳನ್ನು ನೋಡಿರುತ್ತೇವೆ. ಆಪ್ ಬಳಸಿ ಮನೆಯನ್ನೇ ನಿಯಂತ್ರಣ ಮಾಡುವ ಸೌಲಭ್ಯ ದೊರಕಿದರೆ ಹೇಗಿರುತ್ತದೆ?. ಇಂತಹ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡೇ ಸ್ಮಾರ್ಟ್​ಹೋಮ್ ನಿರ್ಮಾಣ ಮಾಡಲಾಗುತ್ತಿದೆ. ಇಂಟರ್​ನೆಟ್ ಮೂಲಕ ಕಾರ್ಯನಿರ್ವಹಿಸುವ ಈ ಉಪಕರಣಗಳು, ವಾಯ್್ಸಮಾಂಡ್(ಮಾತಿನ ಮೂಲಕ ನಿಯಂತ್ರಿಸಬಹುದಾದ ಉಪಕರಣಗಳು) ಸೌಲಭ್ಯ ಹೊಂದಿವೆ.

ಮನೆಯಲ್ಲಿನ ಎಸಿ, ಬೆಳಕು, ನೀರಿನ ವ್ಯವಸ್ಥೆಯನ್ನು ತಂತ್ರಜ್ಞಾನವೇ ನಿಯಂತ್ರಿಸುತ್ತದೆ. ಆಪ್ ಮುಖಾಂತರ ಮನೆ ಪ್ರವೇಶಿಸುವ ಮೊದಲೇ ಎಸಿ ಆನ್ ಮಾಡಬಹುದು. ತಮ್ಮಿಷ್ಟದ ಹಾಡುಗಳನ್ನು ಕೇವಲ ವಾಯ್್ಸ ಕಮಾಂಡ್ ಮೂಲಕ ಕೇಳಬಹುದಾದ ಆಧುನಿಕ ವ್ಯವಸ್ಥೆ ಸ್ಮಾರ್ಟ್​ಹೋಮ್ಲ್ಲಿರುತ್ತದೆ. ಅಷ್ಟೇ ಅಲ್ಲ, ಬೆಳಕನ್ನೂ ನಿಮ್ಮ ಮೂಡ್​ಗೆ ತಕ್ಕಂತೆ ಬದಲಾಯಿಸಿಕೊಳ್ಳುವ ವ್ಯವಸ್ಥೆಯೂ ಸ್ಮಾರ್ಟ್​ಹೋಮ್ಲ್ಲಿದೆ.

ಆನ್​ಲೈನ್ ಆರ್ಡರ್ ಮಾಡಿ

ಸ್ಮಾರ್ಟ್​ಹೋಮ್ಲ್ಲಿ ಕುಳಿತಲ್ಲಿಂದಲೇ ತಮಗೆ ಬೇಕಾದ ಮನೆ ಸಾಮಗ್ರಿಗಳನ್ನು ಆನ್​ಲೈನ್ ಮಾರುಕಟ್ಟೆಯಿಂದ ಖರೀದಿಸಬಹುದು. ಅಮೆಜಾನ್ ಇಕೋ ಉಪಕರಣಕ್ಕೆ ಸಾಮಗ್ರಿಗಳ ಪಟ್ಟಿ ಓದಿ ಹೇಳಿದರೆ, ನೇರವಾಗಿ ಅಮೆಜಾನ್.ಇನ್ ವೆಬ್​ಸೈಟ್​ನಿಂದ ಸಾಮಗ್ರಿಗಳು ಮನೆ ಬಾಗಿಲಿಗೇ ಬರುತ್ತವೆ. ಈ ರೀತಿಯ ಸಕಲ ಸೌಲಭ್ಯವಿರುವ ಸ್ಮಾರ್ಟ್ ಮನೆಗಳ ಆಯ್ಕೆ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಅಧಿಕವಾಗುತ್ತಿದೆ. ಡೆವಲಪರ್ಸ್ ಕೂಡ ಹಲವು ಕಂಪನಿಗಳ ಜತೆಗೂಡಿ ಗ್ರಾಹಕರನ್ನು ಆಕರ್ಷಿಸುವಂತಹ ಆಧುನಿಕ ಸೌಲಭ್ಯವುಳ್ಳ ಮನೆ ನಿರ್ವಣಕ್ಕೆ ಮುಂದಾಗಿದ್ದಾರೆ.

ಈ ಹಿಂದೆ ಗ್ರಾಹಕರು ಲಕ್ಷುರಿ ಮನೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಇದೀಗ ಜನರ ಆಯ್ಕೆ ಸ್ಮಾರ್ಟ್​ಹೋಮ್ೆ ಬದಲಾಗಿದೆ. ಎಲ್ಲರ ಬಳಿಯೂ ಸ್ಮಾರ್ಟ್​ಫೋನ್ ಸೌಲಭ್ಯವಿದ್ದು, ತಂತ್ರಜ್ಞಾನದ ಸಹಕಾರದೊಂದಿಗೆ ಸಿನಿಮಾ ಮಾದರಿಯಲ್ಲಿ ಇಡೀ ಮನೆ ಮಾತಿನ ಆದೇಶದಲ್ಲೇ ಕಾರ್ಯನಿರ್ವಹಿಸುವಂತಿದೆ.

| ಜೀತು ವಿರ್ವಾನಿ ಎಂಬಸಿ ಗ್ರೂಪ್ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ

Leave a Reply

Your email address will not be published. Required fields are marked *

Back To Top