Wednesday, 19th September 2018  

Vijayavani

ಹವಾಲಾ ಕೇಸ್​ನಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಡಿಕೆಶಿಗೆ ಮತ್ತೊಂದು ಕಡೆ ಅನಾರೋಗ್ಯ        ಬಂಧನದಿಂದ ತಪ್ಪಿಸಿಕೊಳ್ಳಲು‌ ಸಚಿವ ಡಿಕೆಶಿ ಶತಪ್ರಯತ್ನ; ವಕೀಲರೊಂದಿಗೆ ಸತತ ಚರ್ಚೆ        ಡಿಕೆಶಿ ವಿರುದ್ಧ ದಾಖಲಾಗಿರುವ ಪ್ರಕರಣದ ಮಾಹಿತಿ ಪಡೆದ ಸಿಎಂ ಎಚ್ಡಿಕೆ; ಅಧಿಕಾರಿಗಳೊಂದಿಗೆ ಚರ್ಚೆ        ಬೆಳಗಾವಿ ರಾಜಕಾರಣದಲ್ಲಿ ಡಿಕೆಶಿ ಹಸ್ತಕ್ಷೇಪದ ಬಗ್ಗೆ ಸಿಎಂ ಜತೆ ಚರ್ಚೆಯನ್ನೇ ನಡೆಸಿಲ್ಲ ಎಂದ ಸತೀಶ್​ ಜಾರಿಕಿಹೊಳಿ        ಜೆಡಿಎಸ್​ ಸೇರುವಂತೆ ಆಳಂದ ಬಿಜೆಪಿ ಶಾಸಕ ಸುಭಾಷ್​ ಗುತ್ತೇದಾರ್​ಗೆ ಎಚ್​ಡಿಕೆ ಆಹ್ವಾನ       
Breaking News

ನವ ವಿವಾಹಿತೆ ಆತ್ಮಹತ್ಯೆ

Friday, 15.06.2018, 5:41 AM       No Comments

ಮಂಡ್ಯ: ಮೂರೂವರೆ ತಿಂಗಳ ಹಿಂದೆ ವಿವಾಹವಾಗಿದ್ದ ಗೃಹಿಣಿ ಕೌಟುಂಬಿಕ ಕಲಹದಿಂದ ಬೇಸತ್ತು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

ತಾಲೂಕಿನ ಹಲ್ಲೆಗೆರೆ ಗ್ರಾಮದ ಸಿದ್ದೇಶ್ ಎಂಬುವರ ಪತ್ನಿ ಅಶ್ವಿನಿ (24)ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದು, ಘಟನೆ ಬೆನ್ನಲ್ಲೇ ಪತಿ ನಾಪತ್ತೆಯಾಗಿದ್ದಾನೆ.
ಬಸರಾಳು ಸಮೀಪದ ಮೂಜಗಹಳ್ಳಿಯ ಅಶ್ವಿನಿ ಹಾಗೂ ಸಿದ್ದೇಶ್ ಮೂರೂವರೆ ತಿಂಗಳ ಹಿಂದೆ ಮಂಡ್ಯದಲ್ಲಿ ನಡೆದ ಸರಳ ಸಾಮೂಹಿಕ ವಿವಾಹದಲ್ಲಿ ವಿವಾಹವಾಗಿದ್ದರು. ಅಶ್ವಿನಿ ಬೆಂಗಳೂರಿಗೆ ಹೋಗಿ ನೆಲೆಸಬೇಕೆಂದು ಪತಿಗೆ ಒತ್ತಡ ಹಾಕುತ್ತಿದ್ದರು ಎನ್ನಲಾಗಿದೆ. ಪತಿ ಕಾಲಾವಕಾಶ ಕೇಳಿದ್ದರಿಂದ ಖಿನ್ನತೆಗೊಳಗಾಗಿ ಹಲವು ಬಾರಿ ಪತಿ -ಪತ್ನಿ ನಡುವೆ ಜಗಳ ನಡೆದಿತ್ತು. ಬುಧವಾರ ರಾತ್ರಿ ದಂಪತಿ ನಡುವೆ ಮತ್ತೇ ಮಾತಿನ ಚಕಮಕಿ ನಡೆದಿದೆ.

ಇದರಿಂದ ಬೇಸತ್ತ ಅಶ್ವಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಪತಿಯೇ ಕೊಲೆ ಮಾಡಿ, ಪರಾರಿಯಾಗಿದ್ದಾನೋ ಎಂಬುದು ಮರಣೋತ್ತರ ಪರೀಕ್ಷೆ ನಂತರ ಹೊರಬೀಳಬೇಕಿದೆ. ಬೆಳಗ್ಗೆ ಮೃತದೇಹವನ್ನು ಮಿಮ್ಸ್ ಶವಾಗಾರಕ್ಕೆ ತಂದು ಪಂಚನಾಮೆ ನಡೆಸಿ ವಾರಸುದಾರರಿಗೆ ನೀಡಲಾಗಿದೆ. ಕೆರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Back To Top