Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ಪ್ರತಿಕ್ಷಣವನ್ನೂ ಆನಂದಿಸೋಣ

Friday, 20.04.2018, 3:03 AM       No Comments

|ರಾಗಿಣಿ

ಯುವಕನೊಬ್ಬ ತನ್ನ ಕೆಲಸದ ಬಗ್ಗೆ ಮಹತ್ತರ ಕನಸುಗಳನ್ನು ಕಂಡಿದ್ದ. ಆದರೆ ಪ್ರತಿಭೆಗೆ ತಕ್ಕ ಕೆಲಸ ಸಿಗದೆ ಸಿಕ್ಕ ಕೆಲಸವನ್ನೇ ವಿಧಿ ಇಲ್ಲದೆ ನಿರ್ವಹಿಸುತ್ತಿದ್ದ. ಪ್ರಮೋಶನ್ ಸಿಕ್ಕರೆ ವಯಸ್ಸಾದ ತಂದೆ, ತಾಯಿ, ಹೆಂಡತಿ, ಮಕ್ಕಳಿಗೆ ಒಳ್ಳೆಯ ಜೀವನ ಕೊಡಿಸುವ ಭರವಸೆಯಲ್ಲಿದ್ದ. ಆದರೆ ಅಲ್ಲೂ ನಿರಾಸೆ ಕಾದಿತ್ತು. ಹಲವು ವರ್ಷಗಳ ಕಾಲ ಬಡಿ ್ತಗಲೇ ಇಲ್ಲ. ತೀವ್ರ ನೊಂದ ಯುವಕ ಒಬ್ಬ ಸಾಧುವಿನ ಬಳಿ ಬಂದು ತನ್ನೆಲ್ಲ ಕಷ್ಟ ತೋಡಿಕೊಂಡ, ಪ್ರತಿ ಸಲವೂ ತನ್ನ ಕನಸುಗಳು ಹೇಗೆಲ್ಲ ಭಗ್ನಗೊಂಡವು ಎಂಬುದನ್ನು ವಿವರಿಸಿದ. ಇವನ ತೊಳಲಾಟ ಅರಿತ ಸಾಧು ಯುವಕನನ್ನು ಒಂದು ಹೂದೋಟಕ್ಕೆ ಕರೆದುಕೊಂದು ಹೋದ.

ಅಲ್ಲಿ ಸುಂದರ ಗುಲಾಬಿ ಹೂಗಳು ಅರಳಿದ್ದವು. ಸಾಧು-‘ನೋಡು ನೀನು ಸರದಿ ಪ್ರಕಾರ ಮೊದಲನೇ ಸಾಲಿನಲ್ಲಿರುವ ಗುಲಾಬಿ ಹೂಗಳನ್ನು ನೋಡಿಕೊಂಡು ಮುಂದಕ್ಕೆ ಹೋಗಿ ಮರಳಿ ಬಾ, ಆದರೆ ಬರುವಾಗ ನೀನು ಇರುವುದರಲ್ಲೇ ಸುಂದರವಾದ ಗುಲಾಬಿ ಹೂವಿನೊಂದಿಗೆ ಬರಬೇಕು’ ಎಂದನು.

ಯುವಕ ಒಂದೊಂದೇ ಗುಲಾಬಿ ಹೂವು ನೋಡಿಕೊಂಡು ಮುಂದಕ್ಕೆ ಸಾಗುತ್ತಿದ್ದ, ಒಂದಕ್ಕಿಂತ ಒಂದು ಸುಂದರ ಹೂಗಳನ್ನು ನೋಡಿ ಗೊಂದಲಕ್ಕೆ ಬಿದ್ದ. ಇದಕ್ಕಿಂತ ಸುಂದರ ಹೂ ಸಿಗಬಹುದೇನೋ ಎಂದುಕೊಂಡು ಮುಂದೆ ಸಾಗಿದ. ಆದರೆ ಕೊನೆಸಾಲಿನಲ್ಲಿ ಅವನಿಗೆ ನಿರಾಸೆ ಕಾದಿತ್ತು! ಕೆಲವು ಬಾಡಿಹೋದ ಹೂಗಳಷ್ಟೆ ಉಳಿದಿತ್ತು. ಕೊನೆಗೆ ಬಾಡಿ ಹೋದ ಗುಲಾಬಿಯನ್ನೇ ತಂದ ಯುವಕ ಸಾಧುವನ್ನು ಉದ್ದೇಶಿಸಿ, ‘ತೋಟದಲ್ಲಿ ಸುಂದರ ಹೂಗಳನ್ನು ಕಂಡೆ. ಆದರೆ ಇನ್ನೂ ಸುಂದರ ಹೂ ಸಿಗಬಹುದೆಂಬ ನಿರೀಕ್ಷೆಯಲ್ಲಿ ಮುಂದಕ್ಕೆ ಸಾಗಿದೆ. ಕೊನೆಯಲ್ಲಿ ಈ ಬಾಡಿದ ಹೂವಷ್ಟೆ ಸಿಕ್ಕಿತು’ ಎಂದನು.

ಸಾಧು ಮುಗುಳ್ನಗುತ್ತ- ‘ನೀನು ಅತ್ಯಂತ ಸುಂದರ ಹೂವಿನ ಹುಡುಕಾಟದಲ್ಲೇ ಸಮಯ ವ್ಯರ್ಥಮಾಡಿದೆ. ಕೈಗೆಟುಕದ ಸುಂದರ ಹೂಗಳ ನಿರೀಕ್ಷೆಯಲ್ಲಿ ಕೈಗೆ ಸಿಕ್ಕಿದ ಹೂಗಳ ಸೌಂದರ್ಯ ಗಮನಿಸಲೇ ಇಲ್ಲ. ಪರಿಣಾಮ, ಬಾಡಿಹೋದ ಹೂಗಳಷ್ಟೆ ದಕ್ಕಿತು. ಈ ಹೂದೋಟವನ್ನು ಜೀವನಕ್ಕೆ ಹೋಲಿಸಿ ನೋಡು. ದೊಡ್ಡ ಕನಸುಗಳ ನಿರೀಕ್ಷೆಯಲ್ಲಿ ಮುಳುಗಿ ನಿನಗೆ ಒದಗಿದ ಸುಂದರ ಸುಮಧುರ ಕ್ಷಣಗಳನ್ನು ಅನುಭವಿಸಲೇ ಇಲ್ಲ. ಕಣ್ಮುಂದೆ ಇರುವ ಖುಷಿಯನ್ನು ಕಡೆಗಣಿಸಿದೆ ಹಾಗೂ ಕೊನೆಯಲ್ಲಿ ನಿರಾಸೆ ಅನುಭವಿಸಿದೆ. ಇದೆಲ್ಲ ಜ್ಞಾನೋದಯ ಆಗುವ ಹೊತ್ತಿನಲ್ಲಿ ಜೀವನದ ಅತ್ಯಮೂಲ್ಯ ಕ್ಷಣಗಳು ಮುಗಿದಿರುತ್ತವೆ’ ಎಂದನು. ಜೀವನದಲ್ಲಿ ನಿರೀಕ್ಷಿತ ಗುರಿ ಮುಟ್ಟಬೇಕೆಂಬ ತವಕದಲ್ಲಿ ಸಾಗುವಾಗ ಅದರ ಪ್ರಯಾಣವನ್ನು ಕೂಡ ಆನಂದಿಸಬೇಕು. ಪ್ರತಿ ಖುಷಿ ದೊಡ್ಡದಿರಲಿ, ಚಿಕ್ಕದಿರಲಿ ಪ್ರತಿಕ್ಷಣವೂ ಮುಗುಳ್ನಗುತ್ತ ಹೆಜ್ಜೆ ಇಡೋಣ. ನಾಳಿನ ಹುಡುಕಾಟದಲ್ಲೇ ವ್ಯಸ್ತರಾಗಿ ಇಂದಿನ ಸೌಂದರ್ಯವನ್ನು ನಿರ್ಲಕ್ಷಿಸದಿರೋಣ.

(ಲೇಖಕಿ ಹವ್ಯಾಸಿ ಬರಹಗಾರ್ತಿ)

Leave a Reply

Your email address will not be published. Required fields are marked *

Back To Top