Saturday, 23rd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ಮಾನವೀಯತೆ ಮರೆಯದಿರೋಣ

Monday, 11.06.2018, 3:04 AM       No Comments

| ನರೇಂದ್ರ ಎಸ್. ಗಂಗೊಳ್ಳಿ

ಒಂದು ಊರಿನ ಪುಟ್ಟ ಮನೆಯೊಂದರಲ್ಲಿ ಸಣ್ಣ ವಯಸ್ಸಿನ ಅಣ್ಣ-ತಂಗಿ ಇರುತ್ತಾರೆ. ಅದೊಂದು ದಿನ ಅಮ್ಮ ಕೆಲಸಕ್ಕೆಂದು ಪರವೂರಿಗೆ ತೆರಳಿದಳು. ತಂಗಿಗೆ ಆಡುವುದೆಂದರೆ ಖುಷಿ. ಮನೆ ಪಕ್ಕದಲ್ಲಿ ಹರಿಯುವ ಪುಟ್ಟ ತೊರೆಯಲ್ಲಿ ಸಿಗುವ ಮೀನಿನ ಮರಿಯನ್ನು ಹಿಡಿದು ಪುಟ್ಟ ಗಾಜಿನ ಬಾಟಲಿಯಲ್ಲಿ ಹಾಕಿಕೊಂಡು ಬಂದು ಮನೆಯ ಕೋಣೆಯ ಕಿಟಕಿಯ ಪಕ್ಕದಲ್ಲಿ ಅಕ್ವೇರಿಯಂನಂತೆ ಇಟ್ಟು ಮೀನು ಓಡಾಡುವುದನ್ನು ನೋಡುತ್ತ ಸಂಭ್ರಮಿಸುತ್ತಿರುತ್ತಾಳೆ. ‘ಅಮ್ಮನ ಹತ್ತಿರ ಹೇಳುತ್ತೇನೆ’ ಎಂಬ ಅಣ್ಣನ ಗದರಿಕೆಗೂ ಅವಳು ಸುಮ್ಮನಿರುತ್ತಾಳೆ. ತಂಗಿಯು ಮನೆಯ ಹಿತ್ತಲಲ್ಲಿ ಆಟವಾಡುವ ಹೊತ್ತು ನೋಡಿ ಅಣ್ಣ ಆ ಬಾಟಲಿಯೊಳಗಿನ ಮೀನನ್ನು ಬಾವಿಗೆಸೆಯುವ ಪ್ರಯತ್ನ ಮಾಡುತ್ತಾನೆ. ಆದರೆ ತಂಗಿ ಓಡೋಡಿ ಬಂದು ಅದನ್ನು ತಡೆಯುತ್ತಾಳೆ.

ಸಮಯ ಕಳೆಯುತ್ತದೆ. ತಂಗಿ ಮೀನಿಗೆ ಆಹಾರ ಹಾಕುತ್ತಿರುವುದನ್ನು ಗಮನಿಸಿದ ಅಣ್ಣ ಆ ಕೋಣೆಯ ಬಾಗಿಲನ್ನು ನಿಧಾನವಾಗಿ ಎಳೆದು ಚಿಲಕ ಹಾಕುತ್ತಾನೆ. ಸ್ವಲ್ಪ ಹೊತ್ತಿನ ಬಳಿಕ, ಬಾಗಿಲು ಹಾಕಿದ್ದನ್ನು ತಂಗಿಯು ಕಂಡು ಗಾಬರಿಬಿದ್ದು ಅಣ್ಣನನ್ನು ಕೂಗುತ್ತಾಳೆ. ಬೇಸರ ಆವರಿಸಿ ಮೂಲೆಯಲ್ಲಿ ಕೂರುತ್ತಾಳೆ. ಎಷ್ಟೋ ಹೊತ್ತಿನ ಬಳಿಕ ಅಣ್ಣ ಬಾಗಿಲು ತೆರೆದಾಗ ಅವನ ಮೇಲೆ ಕೋಪಗೊಂಡು, ‘ನೀನೇ ಅಲ್ವಾ ಬಾಗಿಲು ಹಾಕಿದ್ದು ಹೇಳು… ಹೇಳು..’ ಎಂದು ಅವನನ್ನು ಹೊಡೆಯುತ್ತಾಳೆ. ಸ್ವಲ್ಪ ಹೊತ್ತು ಮೌನವಾಗಿದ್ದ ಅಣ್ಣ- ‘ಆ ಮೀನಿಗೆ ಕೈಗಳಿದ್ದಿದ್ದರೆ ಅದು ನಿನಗೂ ಹೀಗೆಯೇ ಹೊಡೆಯುತಿತ್ತು’ ಎನ್ನುತ್ತಾನೆ. ತಂಗಿ ಮೌನವಾಗುತ್ತಾಳೆ. ಅವಳಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಮೀನನ್ನು ಮರಳಿ ತೊರೆಗೆ ಬಿಡುತ್ತಾಳೆ. ಇದು ಸಚಿನ್ ಶೆಟ್ಟಿ ನಿರ್ದೇಶನದ ‘ಫಿಶ್’ ಹೆಸರಿನ ಕಿರುಚಿತ್ರದ ಕತೆ.

ನಿಜ. ನಮ್ಮ ಸ್ವಾರ್ಥಕ್ಕಾಗಿ ಇನ್ನೊಬ್ಬರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು ಖಂಡಿತ ತರವಲ್ಲ. ಇಲ್ಲಿ ಪ್ರತಿಯೊಬ್ಬರಿಗೂ ಬದುಕುವ ಸ್ವಾತಂತ್ರ್ಯವಿದೆ, ಹಕ್ಕೂ ಇದೆ. ಅವನ್ನು ಗೌರವಿಸೋಣ. ಮಾನವೀಯತೆಯನ್ನು ಮರೆಯದಿರೋಣ.

(ಲೇಖಕರು ಉಪನ್ಯಾಸಕರು ಹಾಗೂ ಹವ್ಯಾಸಿ ಬರಹಗಾರರು)

Leave a Reply

Your email address will not be published. Required fields are marked *

Back To Top