Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಫಿಟ್ನೆಸ್​ ಚಾಲೆಂಜ್​ ಸ್ವೀಕರಿಸಿ, ಮೋದಿಗೆ ಕೃತಜ್ಞತೆ ಅರ್ಪಿಸಿದ ಮಣಿಕಾ ಬಾತ್ರಾ

Wednesday, 13.06.2018, 6:23 PM       No Comments

ಪುಣೆ: ಪ್ರಧಾನಿ ನರೇಂದ್ರ ಮೋದಿ ಅವರಿಂದ “ಹಮ್​ ಫಿಟ್​ ತೋ ಇಂಡಿಯಾ ಫಿಟ್​” ಎಂಬ ಫಿಟ್ನೆಸ್​ ಚಾಲೆಂಜ್​ ಸ್ವೀಕರಿಸಿರುವ ಭಾರತೀಯ ಟೇಬಲ್​ ಟೆನ್ನಿಸ್​ ತಾರೆ ಮಣಿಕಾ ಬಾತ್ರಾ ಇದಕ್ಕೆ ಪ್ರತಿಯಾಗಿ ಮೋದಿ ಅವರಿಗೆ ಕೃತಜ್ಞತೆ ಅರ್ಪಿಸಿದ್ದಾರೆ.

ಈ ಕುರಿತು ಮಾತನಾಡಿರುವ ಮಣಿಕಾ ಬಾತ್ರಾ, “ಫಿಟ್ನೆಸ್​ ಚಾಲೆಂಜ್​ಗೆ ಮೋದಿ ಅವರು ನನ್ನನ್ನು ನಾಮಿನೇಟ್​ ಮಾಡಿರುವುದು ನನಗೆ ಸಂತಸ ತರಿಸಿದೆ, ಚಕಿತಳನ್ನಾಗಿಸಿದೆ. ನಾನು ಫಿಟ್​ ಆಗಿರುವುದಾಗಿ ಹೇಳಿರುವುದಕ್ಕೆ ನನಗೆ ಖುಷಿಯಾಗಿದೆ. ಕೆಲವೇ ಮಂದಿಗೆ ಮಾತ್ರ ಪ್ರಧಾನಿಯಂಥವರು ಇಂಥ ಸವಾಲು ನೀಡಲು ಸಾಧ್ಯ. ಫಿಟ್ನೆಸ್​ ಚಾಲೆಂಜ್​ ಅನ್ನು ಅತ್ಯುತ್ತಮ ರೀತಿಯಲ್ಲಿ ಪೂರ್ಣಗೊಳಿಸಲು ನಾನು ಪ್ರಯತ್ನಿಸುತ್ತೇನೆ,” ಎಂದು ಅವರು ಹೇಳಿದ್ದಾರೆ.

ಮಣಿಕಾ ಬಾತ್ರಾ ಅವರು, ಇದೇ ವರ್ಷ ಆಸ್ಟ್ರೇಲಿಯಾದ ಕಾಮನ್​ವೆಲ್ತ್​ ಕ್ರೀಡಾ ಕೂಟದಲ್ಲಿ ಭಾಗವಹಿಸಿ, ಮಹಿಳಾ ವಿಭಾಗದ ಟೆಬಲ್​ ಟೆನಿಸ್​ನಲ್ಲಿ ಚಿನ್ನ ಗೆದ್ದಿದ್ದರು. ಕಾಮನ್​ವೆಲ್ತ್​ನ ಟೇಬಲ್​ ಟೆನ್ನಿಸ್​ನಲ್ಲಿ ಚಿನ್ನಗೆದ್ದ ಮೊದಲ ಮಹಿಳಾ ಆಟಗಾರ್ತಿಎಂಬ ಕೀರ್ತಿಗೂ ಪಾತ್ರರಾಗಿದ್ದರು.

ವಿರಾಟ ಕೊಹ್ಲಿ ಅವರಿಂದ ಫಿಟ್ನೆಸ್​ ಚಾಲೆಂಜ್​ ಸ್ವೀಕರಿಸಿದ್ದ ಪ್ರಧಾನಿ ಮೋದಿ ಅವರು, ಅದಕ್ಕೆ ಪ್ರತಿಯಾಗಿ ತಾವು ಯೋಗ ಮಾಡುವ ವಿಡಿಯೋವೊಂದನ್ನು ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಪ್ರಕಟಿಸಿದ್ದಾರೆ. ಈ ಚಾಲೆಂಜ್​ ಅನ್ನು ಮುಂದುವರಿಸಿದ್ದ ಅವರು ಬುಧವಾರ ಬೆಳಗ್ಗೆ ಕರ್ನಾಟಕದ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಮತ್ತು ಟೆಬಲ್​ ಟೆನಿಸ್​ ತಾರೆ ಮಣಿಕಾ ಬಾತ್ರಾ ಅವರನ್ನು ಸವಾಲಿಗೆ ನಾಮಿನೇಟ್​ ಮಾಡಿದ್ದರು. ಕೇಂದ್ರ ಸಚಿವ ರಾಜ್ಯವರ್ಧನ್ ರಾಥೋಡ್ ಅವರು ಈ ಚಾಲೆಂಜ್​ ಅನ್ನು ಆರಂಭಿಸಿದ್ದರು.

 

Leave a Reply

Your email address will not be published. Required fields are marked *

Back To Top