Tuesday, 21st November 2017  

Vijayavani

1. ಇಂಧನ ಇಲಾಖೆಯಲ್ಲಿ ಅವ್ಯವಹಾರ ಆರೋಪ – ವಿಧಾನಸಭೆಯಲ್ಲಿ ಸದನ ಸಮಿತಿ ವರದಿ ಮಂಡನೆ – ಸಂಸದೆ ಶೋಭಾ ವಿರುದ್ಧ ಡಿಕೆಶಿ ಅಸ್ತ್ರ 2. ಮದ್ಯಪಾನ ನಿಷೇಧಕ್ಕೆ ಸದನದಲ್ಲಿ ಗುದ್ದಾಟ – ಮದ್ಯ ವಿರೋಧಿ ಹೋರಾಟಕ್ಕೆ ಶೆಟ್ಟರ್​ ಸಾಥ್​​​​​ – ಸಿಎಂ ವಿರುದ್ಧ ಸಂಜಯ್​​ ಪಾಟೀಲ್​​ ಕಟು ಟೀಕೆ 3. 63ರಲ್ಲಿ ಬಿಡುಗಡೆಯಾಗಿತ್ತು ಪದ್ಮಾವತಿ ಚಿತ್ರ – ಆಗಿಲ್ಲದ ವಿವಾದ ಈಗ ಸೃಷ್ಟಿ – ವಿರೋಧಿ ಪಡೆಗೆ ಪ್ರಶ್ನೆ ಮುಂದಿಟ್ಟ ಚಿತ್ರತಂಡ 4. ತ್ರಿವಳಿ ತಲಾಖ್​ಗೆ ಸದ್ಯದಲ್ಲೇ ಬ್ರೇಕ್​ – ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡನೆ – ಕೇಂದ್ರ ಸರ್ಕಾರದ ಮಹತ್ವದ ನಡೆ 5. ಐಶ್ವರ್ಯ ಫೋಟೋ ತೆಗೆಯಲು ನೂಕುನುಗ್ಗಲು – ಮಾಧ್ಯಮದವರ ನಡೆಗೆ ಬಚ್ಚನ್​​​​​​​ ಸೊಸೆ ಕಣ್ಣೀರು – ಕೈಮುಗಿದು ಕಣ್ಣೀರಿಟ್ಟ ಐಶ್ವರ್ಯ
Breaking News :

ನಿತ್ಯ ಸಾವನ್ನ ಬೆನ್ನಿಗೆ ಕಟ್ಕೊಂಡೇ ಬದುಕು ನಡೆಸುವ ದ.ಕ ಗ್ರಾಮಗಳು

Monday, 11.09.2017, 9:04 AM       No Comments

ಬೆಂಗಳೂರು: ವಿಜಯವಾಣಿ- ದಿಗ್ವಿಜಯ ನ್ಯೂಸ್ ಸಾದರಪಡಿಸುವ ಸೋಮವಾರ ಬೆಳಗಿನ ಮುಖ್ಯಾಂಶಗಳು ಹೀಗಿವೆ:

1. ಬಿಬಿಎಂಪಿಯಲ್ಲಿ 2 ಸಾವಿರ ಕೋಟಿ ಅವ್ಯವಹಾರ ಆರೋಪ- ಇಂದು ಬಿಜೆಪಿಯಿಂದ ದಾಖಲೆ ಬಿಡುಗಡೆ ಸಾಧ್ಯತೆ- ಮಲ್ಲೇಶ್ವರಂ ಕಚೇರಿಯಲ್ಲಿ ಬಿಎಸ್​ವೈ ಸುದ್ದಿಗೋಷ್ಠಿ

2. ಜಮ್ಮು-ಕಾಶ್ಮೀರದಲ್ಲಿ ಮತ್ತೆ ಭಯೋತ್ಪಾದರ ಅಟ್ಟಹಾಸ- ಕುಲ್ಗಾಂನಲ್ಲಿ ಇಬ್ಬರು ಉಗ್ರರು ಮಟಾಶ್- ಉಳಿದ ಕ್ರಿಮಿಗಳಿಗೆ ತೀವ್ರ ಶೋಧ

3. ಬೆಂಗಳೂರಿನಲ್ಲಿ ಮೀತಿ ಮೀರ್ತಿದೆ ಮಹಿಳೆಯರ ಮೇಲೆ ದೌರ್ಜನ್ಯ- ಅತ್ಯಾಚಾರ, ವರದಕ್ಷಿಣೆ ಕಿರುಕುಳದಲ್ಲಿ ಹೆಚ್ಚಳ- ದಿಗ್ವಿಜಯ ನ್ಯೂಸ್​ನಲ್ಲಿ ಎಕ್ಸ್​ಕ್ಲೂಸಿವ್​ ಮಾಹಿತಿ

4. ಹೊಸ ಕಾಂಗ್ರೆಸ್​ ಕಟ್ಟುವು ಕುರಿತು ಸುಳಿವು – ಕೈ ಪಕ್ಷದಲ್ಲಿ ಸಂಚಲನ ಮೂಡಿಸಿದ ದಿಗ್ವಿಜಯ್ ಸಿಂಗ್ ಟ್ವೀಟ್ – ಇದು ರಾಹುಲ್​ ಪಟ್ಟಕ್ಕೆ ಹೊಸ ತಂತ್ರವಾ

5. ಮಳೆಗಾಲ ಬಂತು ಅಂದ್ರೆ ಜೀವನ ದುಸ್ಥರ- ನಿತ್ಯ ಸಾವನ್ನ ಬೆನ್ನಿಗೆ ಕಟ್ಕೊಂಡೇ ಬದುಕು- ದಕ್ಷಿಣ ಕನ್ನಡ ಜಿಲ್ಲೆ ಜನರ ಗೋಳು ಕೇಳೋರಿಲ್ಲ


ನಿತ್ಯ ಸಾವನ್ನ ಬೆನ್ನಿಗೆ ಕಟ್ಕೊಂಡೇ ಬದುಕು ನಡೆಸುವ ದ.ಕ ಗ್ರಾಮಗಳು

ಮಂಗಳೂರು: ಸುಮಾರು 60 ವರ್ಷದಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಂಜನಕಜೆ ಮತ್ತು ಕೊಪ್ಪಡ್ಕ ಗ್ರಾಮದ ಜನರು ಅನುಭವಿಸುತ್ತಿರುವ ನರಕಯಾತನೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಈ ಗ್ರಾಮಗಳ ಜನರು ಜೀವ ಭಯದಿಂದಲ್ಲೇ ಜೀವನ ಸಾಗಿಸುತ್ತಿದ್ದಾರೆ.

ಹೌದು, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ಶೆಟ್ಟಿ ಕಟ್ಟ ನದಿಗೆ ಶಾಶ್ವತವಾದ ಸೇತುವೆ ಇಲ್ಲ. ಹೀಗಾಗಿ ಜನಪ್ರತಿನಿಧಿಗಳ, ಅಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ಇನ್ನೂ ಮಳೆಗಾಲದಲ್ಲಿ ಇಲ್ಲಿನ ಜನರ ಪಾಡು ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಹೀಗಾಗಿ ಈ ಗ್ರಾಮಸ್ಥರು ಇಂದಿಗೂ ಜೀವ ಭಯದಿಂದ ಮುರಿದುಹೋಗಿರುವ ಸೇತುವೆಯನ್ನು ದಾಟುತ್ತಿದ್ದಾರೆ.

ಅನಾರೋಗ್ಯದ ಸಮಯದಲ್ಲಿ ನದಿ ದಾಟ ಬೇಕೆಂದ್ರೆ, ನೀರಿನ ಪ್ರವಾಹ ಕಡಿಮೆ ಆದ್ಮೇಲೆಯೇ ಆಸ್ಪತ್ರೆಗೆ ಹೋಗುವ ಪರಿಸ್ಥಿತಿ ಇದೆ. ಈ ಬಗ್ಗೆ ಸರ್ಕಾರದ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಮಾಡುವ ಎಚ್ಚರಿಕೆ ನೀಡಿದ್ದಾರೆ.(ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top