Monday, 25th September 2017  

Vijayavani

1. ರಾಜ್ಯದೆಲ್ಲೆಡೆ ವರುಣನ ಆರ್ಭಟ- ಬೆಂಗಳೂರು, ದಾವಣೆಗೆರೆಯಲ್ಲಿ ಮಳೆ ಅವಾಂತರ- ಕೆರೆಗಳೆಲ್ಲ ಭರ್ತಿ, ಮಂಡ್ಯದಲ್ಲಿ ಜಮೀನಿಗೆ ನುಗ್ಗಿತು ನೀರು 2. ಕಲ್ಯಾಣಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು ಪ್ರಕರಣ- ಬೆಂಗಳೂರಿನ ನ್ಯಾಷನಲ್​ ಕಾಲೇಜು ವಿರುದ್ಧ ನಿರ್ಲಕ್ಷ್ಯದ ಆರೋಪ- ಸಿಬ್ಬಂದಿ ವಿರುದ್ಧ ಪೋಷಕರ ಆಕ್ರೋಶ 3. ಇಂದು ದೀನ್​ ದಯಾಳ್​​ ಜನುಮದಿನ- ಲೋಕಾರ್ಪಣೆಗೊಳ್ಳಲಿದೆ ವಿದ್ಯುತ್​ ಭವನ- ಕುಸಿದ ಅರ್ಥವ್ಯವಸ್ಥೆಗೆ ಮೋದಿ ನೀಡ್ತಾರಾ ಟಾನಿಕ್​ 4. ಜೆಮ್​ಶೆಡ್​ಪುರದಲ್ಲಿ ಭೀಕರ ಅಗ್ನಿ ಅವಘಡ- 8 ಜನ ಸಜೀವ ದಹನ, 25 ಮಂದಿಗೆ ಗಾಯ- ಪಟಾಕಿ ಕಾರ್ಖಾನೆಗೆ ಧಗಧಗಿಸಿದ ಕಿಡಿ 5. ಹುಟ್ಟಿದ ಆರೇ ನಿಮಿಷದಲ್ಲಿ ಮಗುವಿಗೆ ಆಧಾರ್- ಜನನ ಪ್ರಮಾಣಪತ್ರಕ್ಕೆ ಲಿಂಕ್​ ಮಾಡಿಸಿದ ಪೋಷಕರು- ಒಸ್ಮಾನಾಬಾದ್​ ಆಸ್ಪತ್ರೆಯಲ್ಲಿ ಭಾರಿ ಕಮಾಲ್​
Breaking News :

ಕಾವೇರಿ ತೀರದಲ್ಲಿ ಪುಷ್ಕರ ಮಹಾಸ್ನಾನ ಯಜ್ಞ: ಹರಿದು ಬರ್ತಿದೆ ಭಕ್ತರ ದಂಡು

Tuesday, 12.09.2017, 9:04 AM       No Comments

ಬೆಂಗಳೂರು: ವಿಜಯವಾಣಿ- ದಿಗ್ವಿಜಯ ನ್ಯೂಸ್ ಸಾದರಪಡಿಸುವ ಮಂಗಳವಾರ ಬೆಳಗಿನ ಮುಖ್ಯಾಂಶಗಳು ಹೀಗಿವೆ:

1. ನಾನೂ ಗೌರಿ ನನ್ನನ್ನೂ ಕೊಲ್ಲಿ- ಬೆಂಗಳೂರಲ್ಲಿಂದು ರ್ಯಾಲಿ ಜತೆಗೆ​​​ ಪ್ರತಿರೋಧ ಸಮಾವೇಶ- ಮೆಜೆಸ್ಟಿಕ್​ ಸುತ್ತ ಬಿಗಿ ಬಂದೋಬಸ್ತ್​

2. ಅಂಗನವಾಡಿ, ಆಶಾ ಕಾರ್ಯಕರ್ತೆಯರದ್ದಾಯ್ತು- ಬೀದಿಗಿಳಿಯಲು ಸಜ್ಜಾಗಿದ್ದಾರೆ ಬಿಸಿಯೂಟ ಕಾರ್ಯಕರ್ತೆಯರು- ವೇತನಕ್ಕಾಗಿ ಆಗ್ರಹಿಸಿ ಪ್ರತಿಭಟನೆಗೆ ಸಿದ್ಧತೆ

3. ವಿಧಾನಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ- ನಾಳೆ ಬಿಎಸ್​ವೈ ನೇತೃತ್ವದಲ್ಲಿ ದಕ್ಷಿಣ ಕರ್ನಾಟಕ ಜಿಲ್ಲಾ ಮುಖಂಡರ ಸಭೆ- ಉಸ್ತುವಾರಿ ಮುರುಳಿಧರ್ ರಾವ್​ ಉಪಸ್ಥಿತಿ

4. ಕಡಿಮೆ ಅಂಕ ನೀಡಿದ್ದಕ್ಕೆ ವಿದ್ಯಾರ್ಥಿ ಆಕ್ಷೇಪ- ನಿನ್ನ ಹಣೆ ಬರಹ ಎಂದು ಪರೀಕ್ಷಾಂಗ ಕುಲ ಸಚಿವ ಉಡಾಫೆ ಉತ್ತರ- ದಾವಣಗೆರೆ ವಿವಿ ಎಡವಟ್ಟಿಗೆ ವಿದ್ಯಾರ್ಥಿ ಕಂಗಾಲು

5. ಕಾವೇರಿ ತೀರದಲ್ಲಿ ಪುಷ್ಕರ ಮಹಾಸ್ನಾನ ಯಜ್ಞ- ಇಂದಿನಿಂದ 12 ದಿನಗಳ ಕಾಲ ಕಾರ್ಯಕ್ರಮ- ಮಹಾ ಮಜ್ಜನಕ್ಕೆ ಶ್ರೀರಂಗಪಟ್ಟಣದತ್ತ ಆಸ್ತಿಕರು


ಕಾವೇರಿ ತೀರದಲ್ಲಿ ಪುಷ್ಕರ ಮಹಾಸ್ನಾನ ಯಜ್ಞ: ಹರಿದು ಬರ್ತಿದೆ ಭಕ್ತರ ದಂಡು

ಮಂಡ್ಯ: ಕಾವೇರಿ ಕರ್ನಾಟಕದ ಜೀವನದಿ. ಅದರಲ್ಲೂ ಮೈಸೂರು, ಮಂಡ್ಯ ಜಿಲ್ಲೆಯ ರೈತರ ಪಾಲಿನ ದೇವತೆ. ಒಂದಲ್ಲ ಒಂದು ಧಾರ್ಮಿಕ ಕಾರ್ಯಕ್ರಮಗಳು ಕಾವೇರಿ ತಟದಲ್ಲಿ ನೇರವೇರುತ್ತಲೇ ಇರುತ್ತವೆ. ಇಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ನದಿ ದಂಡೆಯಲ್ಲಿ 12 ವರ್ಷಗಳ ನಂತರ ಪುಷ್ಕರ ಮಹಾಸ್ನಾನ ಯಜ್ಞ ನಡೀತಿದೆ.

ಇಂದಿನಿಂದ, ಇದೇ ತಿಂಗಳ 24ರ ವರೆಗೂ 12 ದಿನಗಳ ಕಾಲ ಕಾವೇರಿ ನದಿ ತಟದಲ್ಲಿ ಪುಷ್ಕರ ಮಹಾಸ್ನಾನ ಯಜ್ಞ ನಡೆಯಲಿದೆ. 12 ರಾಶಿಗಳಲ್ಲಿ ಗುರುವು ಯಾವ ದಿನ ಯಾವ ರಾಶಿಗೆ ಪ್ರವೇಶ ಮಾಡುತ್ತಾನೋ ಆ ದಿನದಿಂದ 12 ದಿನಗಳನ್ನು ಮಹಾಪುಷ್ಕರ ಪರ್ವಕಾಲ ಎನ್ನಲಾಗುತ್ತೆ. ಈ ವರ್ಷ ಗುರು ಗ್ರಹವು ತುಲಾ ರಾಶಿಗೆ ಪ್ರವೇಶ ಮಾಡಿರುವುದರಿಂದ ಕಾವೇರಿ ನದಿಗೆ ಈ ವರ್ಷ ವಿಶೇಷ ಶಕ್ತಿ ದೊರಕಿದ್ದು ಪುಷ್ಕರ ಮಹಾಸ್ನಾನ ಯಜ್ಞಕ್ಕೆ ಸಾಕ್ಷಿಯಾಗಲಿದೆ.

ಗುರುವು ತುಲಾ ರಾಶಿಗೆ ಪ್ರವೇಶ ಮಾಡುತ್ತಿರುವುದರಿಂದ ಕಾವೇರಿ ನದಿಗೆ ವಿಶೇಷ ಶಕ್ತಿ ದೊರಕಿದೆ. 64 ಕೋಟಿ ತೀರ್ಥಗಳು ಭೂಲೋಕಕ್ಕೆ ಪುಷ್ಕರದ ವೇಳೆ ಇಳಿದು ಬಂದು ಕಾವೇರಿ ನದಿಗೆ ವಿಶೇಷ ಶಕ್ತಿ ನೀಡಿವೆ. ಈ ವೇಳೆ ದೇವಾನುದೇವತೆಗಳು, ಸಪ್ತ ಋಷಿಗಳು, ನವಕಾಂಡ ಋಷಿಗಳು, ಭೂಲೋಕಕ್ಕೆ ಇಳಿದು ಬರುತ್ತಾರೆ ಎಂಬ ನಂಬಿಕೆಯಿದೆ.

ಆದ್ದರಿಂದ ಪುಷ್ಕರದ ಸಂದರ್ಭದಲ್ಲಿ ಕಾವೇರಿ ನದಿಯಲ್ಲಿ ಮೀಯುವ ಎಲ್ಲರನ್ನು ಕಾವೇರಿ ಪವಿತ್ರಗೊಳಿಸುತ್ತಾಳೆ ಅನ್ನೋ ನಂಬಿಕೆ ಇದೆ. ಭಕ್ತರ ದಂಡು ಈಗಾಗ್ಲೇ ಶ್ರೀರಂಗಪಟ್ಟಣಕ್ಕೆ ಹರಿದು ಬರ್ತಿದೆ.

ನದಿಗಳಿಗೆ ಭಾರತೀಯ ಸಂಸ್ಕೃತಿಯಲ್ಲಿ ಪವಿತ್ರ ಸ್ಥಾನ ಕಲ್ಪಿಸಲಾಗಿದೆ. ಅದೇ ರೀತಿ ಗುರುವು ತುಲಾ ರಾಶಿಗೆ ಪ್ರವೇಶ ಮಾಡುತ್ತಿರುವುದರಿಂದ ಕಾವೇರಿ ನದಿಗೆ ಮತ್ತಷ್ಟು ವಿಶೇಷ ಶಕ್ತಿ ಲಭಿಸಲಿದ್ದು, ಆ ಸಮಯಕ್ಕಾಗಿ ಆಸ್ತಿಕರು ಭಯ ಭಕ್ತಿಯಿಂದ ಕಾಯುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top