More

    ಮಂಡ್ಯ ಚುನಾವಣೆ; ಕುಮಾರಸ್ವಾಮಿ ಕೃಷಿ ಸಚಿವರಾಗುವ ಭಾವನಾತ್ಮಕ ಭರವಸೆ

    ಬೆಂಗಳೂರು: ಮಂಡ್ಯ ಚುನಾವಣಾ ಕಣ ಆರೋಪ-ಪ್ರತ್ಯಾರೋಪ, ಟೀಕೆ-ಟಿಪ್ಪಣಿಗಳಿಂದ ರಂಗೇರಿದೆ. ಸಂಸದೆ ಸುಮಲತಾ ಕಣದಿಂದ ಹಿಂದೆ ಸರಿದ ಬಳಿಕ ಮಂಡ್ಯ ರಾಜಕೀಯ ರೋಚಕ ತಿರುವು ಪಡೆದಿದೆ.

    ಇತ್ತ ಕಾಂಗ್ರೆಸ್ ಸ್ಟಾರ್ ಚಂದ್ರು ಅವರನ್ನು ರಣಾಂಗಣಕ್ಕಿಳಿಸಿ ‘ಸ್ಥಳೀಯ ಅಸ್ಮಿತೆ’ ಅಸ ಪ್ರಯೋಗಿಸಿದೆ. ಇದು ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕಂಗಾಲು ಮಾಡಿದೆ. ಇದಕ್ಕೆ ಪ್ರತಿಯಾಗಿ ಕುಮಾರಸ್ವಾಮಿ ದಿನಕ್ಕೊಂದು ಬಾಣಗಳನ್ನು ಪ್ರಯೋಗಿಸುತ್ತಿದ್ದಾರೆ.

    ಸುಮಲತಾ ಬಗ್ಗೆ ಸ್‌ಟಾ ಕಾರ್ನರ್ ತೋರುತ್ತಿರುವ ಕುಮಾರಸ್ವಾಮಿಗೆ ಬಿಜೆಪಿ ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಬಿಟ್ಟರೆ ಗೆಲುವು ಕಷ್ಟ ಎಂಬುದು ಅರಿವಿಗೆ ಬಂದಂತಿದೆ. ಹೀಗಾಗಿ ವಚನ ಭ್ರಷ್ಟತೆ ಆರೋಪ ಹೊರಿಸಿದ್ದ ಬಿ.ಎಸ್.ಯಡಿಯೂರಪ್ಪ ಅವರ ಜತೆ ಕೈ ಮಿಲಾಯಿಸಿದ್ದಾರೆ. ಹಾವು -ಮುಂಗುಸಿಯಂತಿದ್ದವರ ಮನೆಗೆ ಎಡತಾಕುತ್ತಿದ್ದಾರೆ. ಏನಕೇನ ಗೆಲ್ಲಲೇಬೇಕೆಂಬ ಧೋರಣೆಯಿಂದ ದಿನಕ್ಕೊಂದು ಭರವಸೆಗಳನ್ನು ನೀಡುತ್ತಲೇ ಇದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ಟೀಕಿಸುತ್ತಲೇ ತಾವು ಗೆದ್ದರೆ ರಾಜ್ಯದ ನೀರಾವರಿ ಯೋಜನೆಗಳಿಗೆ ಮರು ಜೀವ ಕೊಡುವುದಾಗಿ ಹೇಳಿದ್ದಾರೆ.

    ನೀರಾವರಿ ಯೋಜನೆಗಳಿಗೆ ಮರು ಜೀವ

    ಸಂಸದನಾಗಿ ಆಯ್ಕೆಯಾಗಿ ಮೇಕೆದಾಟು, ಮಹದಾಯಿ, ಕೃಷ್ಣ, ಭದ್ರಾ ಮೇಲ್ದಂಡೆ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುಮತಿ ಪಡೆಯುವುದೇ ನನ್ನ ಗುರಿ. ಇದು ಸಾಧ್ಯವಾಗದಿದ್ದರೆ ರಾಜಕಾರಣದಲ್ಲಿ ಮುಂದುವರಿಯುವುದಿಲ್ಲ ಎಂದು ಹೇಳಿ ಮಂಡ್ಯ ಜಿಲ್ಲೆ ಮತದಾರರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.

    ಕೇಂದ್ರ ಕೃಷಿ ಸಚಿವ

    ಕುಮಾರಸ್ವಾಮಿ ಗೆದ್ದರೆ ಕೇಂದ್ರ ಸರ್ಕಾರದಲ್ಲಿ ಕೃಷಿ ಸಚಿವರಾಗುತ್ತಾರೆ ಎಂಬ ಸುದ್ದಿಯನ್ನೂ ಕ್ಷೇತ್ರದಲ್ಲಿ ಹರಿಬಿಡಲಾಗಿದೆ. ಮಾಜಿ ಪ್ರಧಾನಿ ದೇವೇಗೌಡರ ಗರಡಿಯಲ್ಲಿ ಪಳಗಿರುವ ಕುಮಾರಸ್ವಾಮಿ ದಿನಕ್ಕೊಂದು ಹೊಸ ಹೊಸ ಅಸಗಳನ್ನು ಹರಿಬಿಡುವ ಮೂಲಕ ಚುನಾವಣಾ ಕಣವನ್ನು ಜೀವಂತವಾಗಿಟ್ಟು ಮತದಾರರ ಓಲೈಕೆಯಲ್ಲಿ ತೊಡಗಿದ್ದಾರೆ.
    ಜತೆಗೆ ಬಿಜೆಪಿ ನಾಯಕರಿಂದಲೇ ಕೃಷಿ ಸಚಿವರಾಗುವರೆಂಬ ಹೇಳಿಕೆ ಕೊಡಿಸಿ, ಬಿಜೆಪಿ ಹೈಕಮಾಂಡ್ ಮೇಲೂ ಅನಿವಾರ್ಯತೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಜನ್ಮಭೂಮಿ, ಕರ್ಮಭೂಮಿ

    ಸ್ಟಾರ್ ಚಂದ್ರು ಮಂಡ್ಯದಲ್ಲಿ ಮನೆ ಖರೀದಿಸಿ ಸ್ಥಳೀಯ ಎಂಬ ಹಣೆಪಟ್ಟಿಯೊಂದಿಗೆ ಮತದಾರರನ್ನು ಸೆಳೆಯುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಕುಮಾರಸ್ವಾಮಿ ಹಾಸನ ನನ್ನ ಜನ್ಮಭೂಮಿ, ರಾಮನಗರ ಕರ್ಮಭೂಮಿ, ಎರಡಕ್ಕೂ ಮಿಗಿಲಾದ ನೆಲ ಮಂಡ್ಯ ಎನ್ನುವ ಮೂಲಕ ಸ್ಥಳೀಯ ಅಸ್ಮಿತೆಗೆ ಠಕ್ಕರ್ ಕೊಡುತ್ತಿದ್ದಾರೆ.
    ಕಳೆದ ಬಾರಿ ನಿಖಿಲ್ ಸೋಲಿನ ಅನುಕಂಪ, ಒಕ್ಕಲಿಗರ ಬೆಂಬಲ, ಬಿಜೆಪಿ ಮೈತ್ರಿಯ ಆನೆ ಬಲದ ಮೇಲೆ ಕುಮಾರಸ್ವಾಮಿ ಚುನಾವಣೆಯನ್ನು ಎದುರಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts