Saturday, 24th February 2018  

Vijayavani

ಮತ್ತೊಂದು ಸುತ್ತಿನ ರಣಕಹಳೆಗೆ ಕೈ ಸಿದ್ಧತೆ - ಇಂದಿನಿಂದ ಮೂರುದಿನ ರಾಹುಲ್ ರಾಜ್ಯ ಪ್ರವಾಸ - ಅಧ್ಯಕ್ಷರ ಆಗಮನಕ್ಕೆ ಭರ್ಜರಿ ತಯಾರಿ        ಮೈಸೂರಲ್ಲಿ ರಂಗೇರಿದ ಎಲೆಕ್ಷನ್ ಅಖಾಡ - ಸುನಿಲ್ ಬೋಸ್ ಜತೆಗಿರುವ ಜೆಡಿಎಸ್‌ ಅಭ್ಯರ್ಥಿ ಫೋಟೋ ವೈರಲ್ - ಆರೋಪ ತಳ್ಳಿ ಹಾಕಿದ ಅಶ್ವಿನ್ ಕುಮಾರ್‌        ಉದ್ಯೋಗ ಕೊಡಿಸುವುದಾಗಿ ನೇಪಾಳದಿಂದ ಕರೆಸಿದ - ಮದುವೆಯಾಗ್ತೀನಿ ಅಂತಾ ಅತ್ಯಾಚಾರವೆಸಗಿದ - ಕಾಮ ಪಿಶಾಚಿ ಹೋಟೆಲ್‌ ಕ್ಯಾಶಿಯರ್‌ ಎಸ್ಕೇಪ್‌        ಸುಪ್ರೀಂಕೋರ್ಟ್​​ ಆದೇಶಗಾಳಿಗೆ ತೂರಿ ಬಾರ್ ಓಪನ್ ​- ಎಂಜಲು ಕಾಸಿಗಾಗಿ ನಿಯಮ ಉಲ್ಲಂಘಿಸಿದ್ರಾ ಅಧಿಕಾರಿಗಳು -ದಿಗ್ವಿಜಯ ನ್ಯೂಸ್ ರಿಯಾಲಿಟಿ ಚೆಕ್‌ನಲ್ಲಿ ಅಸಲಿ ಮುಖ ಬಯಲು        ಬೋಲ್‌ವೆರ್‌ ಕೊರೆಸಿದ್ದು ಒಂದ್ಕಡೆ - ನೀರು ಚಿಮ್ಮಿದ್ದು ಇನ್ನೊಂದ್ಕಡೆ - ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಆಕಾಶಕ್ಕೆ ಉಕ್ಕಿದ ಗಂಗೆ       
Breaking News

ಒಂದೇ ಸಮನೆ ಮದ್ಯ ಸೇವಿಸಿ ಬ್ಯಾಂಕ್‌ ನೌಕರ ಸಾವು

Saturday, 09.09.2017, 2:50 PM       No Comments

ಮೈಸೂರು: ಅನಾರೋಗ್ಯದಿಂದ ಬಳಲುತ್ತಿದ್ದ ಬ್ಯಾಂಕ್ ನೌಕರನೊಬ್ಬ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಸೇವಿಸಿ ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ವಿದ್ಯಾನಗರದ ನಿವಾಸಿ ರೇವಣ್ಣ (43) ಮೃತ. ಎಮ್‌ಡಿಸಿಸಿ ಬ್ಯಾಂಕ್ ನಲ್ಲಿ ನೌಕರನಾಗಿದ್ದ ರೇವಣ್ಣ, ಡಿ ದರ್ಜೆಯಿಂದ ಎಸ್‌ಡಿಸಿಯಾಗಿ ಪ್ರೊಮೋಷನ್ ಪಡೆದಿದ್ದರು.

To download Vijayavani Android App, click here

ಮೂರು ದಿನಗಳ ಹಿಂದೆ ತಮ್ಮ ಸ್ವಂತ ಊರಾದ ಟಿ. ನರಸೀಪುರದ ಆಲಶ್ರೀ ಕಟ್ಟೆ ಹುಂಡಿಗೆ ತೆರಳಿದ್ದ ವೇಳೆ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಸೇವಿಸಿದ್ದರಿಂದ ಅಸ್ವಸ್ಥರಾಗಿದ್ದರು. ಈ ವೇಳೆ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮೈಸೂರಿನ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.

ಆದರೆ ನಿನ್ನೆ ರಾತ್ರಿ ಶುಕ್ರವಾರ ಮತ್ತೆ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಇನ್ನು ಘಟನೆ ಕುರಿತು ಟಿ.ನರಸೀಪುರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. (ದಿಗ್ವಿಜಯ ನ್ಯೂಸ್‌)

Leave a Reply

Your email address will not be published. Required fields are marked *

Back To Top