Tuesday, 17th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ಮದುವೆಗೆ ಆಮಂತ್ರಿಸಲು ಹೋಗಿ ಮಸಣ ಸೇರಿದ ವರ..!

Wednesday, 03.01.2018, 5:06 PM       No Comments

ಮಂಡ್ಯ: ವಿಧಿ ಬರಹ ಎಷ್ಟು ಕ್ರೂರವಾಗಿರುತ್ತೆ ಎಂಬುದಕ್ಕೆ ಈ ಘಟನೆಯೊಂದು ಸಾಕ್ಷಿಯಾಗಿದೆ. ಹೊಸಬಾಳ ಹೊಸ್ತಿಲಲ್ಲಿದ್ದ ವರನೊಬ್ಬ ತನ್ನ ವಿವಾಹಕ್ಕೆ ಆಮಂತ್ರಿಸಲು ಹೋಗುತ್ತಿರುವಾಗ ಸಂಭವಿಸಿದ ಬೈಕ್​ ಅಪಘಾತದಲ್ಲಿ ಸಾವಿಗೀಡಾಗಿದ್ದಾನೆ.

ಕೆ. ಆರ್ ಪೇಟೆ ತಾಲೂಕಿನ ಕಿಕ್ಕೇರಿ ಸಮೀಪದ ಪೆಟ್ರೋಲ್​ ಬಂಕ್​ ಬಳಿ ಬುಧವಾರ ಘಟನೆ ನಡೆದಿದೆ. ಡಿಂಕಾ ಗ್ರಾಮದ ಶೇಖರ್(33) ಎಂಬಾತ ಮೃತ ದುರ್ದೈವಿ.

ಶೇಖರ್​ಗೆ ಇದೇ ತಿಂಗಳ 28 ರಂದು ಮದುವೆ ನಿಶ್ಚಯವಾಗಿತ್ತು. ಈ ಹಿನ್ನೆಲೆ ಇಂದು ತನ್ನ ಸ್ನೇಹಿತರು ಹಾಗೂ ಸಂಬಂಧಿಕರನ್ನು ಮದುವೆಗೆ ಆಮಂತ್ರಿಸಲು ಬೈಕ್​ನಲ್ಲಿ ತೆರಳುತ್ತಿರುವಾಗ ಎದುರುಗಡೆ ಬರುತ್ತಿದ್ದ ವಾಹನಕ್ಕೆ ಮುಖಾಮುಖಿ ಡಿಕ್ಕಿಯಾಗಿ ಆತನ ಮೇಲೆ ಸರ್ಕಾರಿ ಬಸ್ ಹರಿದಿದ್ದರಿಂದ ಆತ​ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮೃತ ಶೇಖರ್​ ಅನಾಥನಾಗಿದ್ದು, ಸ್ವಾಭಿಮಾನದಿಂದ ಬದುಕು ರೂಪಿಸಿಕೊಂಡಿದ್ದ. ಈತನ ದಿಢೀರ್​ ಮರಣದಿಂದ ಗ್ರಾಮದಲ್ಲಿ ಸೂಕತದ ವಾತಾವರಣ ನಿರ್ಮಾಣವಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top