Tuesday, 22nd August 2017  

Vijayavani

1. MLC ವೀಣಾ ಅಚ್ಚಯ್ಯ ಜತೆ ಅನುಚಿತ ವರ್ತನೆ- ಕಾಂಗ್ರೆಸ್ ಸದಸ್ಯತ್ವಕ್ಕೆ ಟಿ.ಪಿ.ರಮೇಶ್ ರಾಜೀನಾಮೆ- ಕ್ರಮಕ್ಕೂ ಮೊದಲೇ ಎಚ್ಚೆತ್ತ ಕೈ ಮುಖಂಡ 2. ಬಾಲಕೃಷ್ಣಗೆ ಟಿಕೆಟ್​ ನೀಡಿದ್ರೆ, ನಾವ್​ ವೋಟ್ ಹಾಕಲ್ಲ- ಅವರಿಗೆ ಸೀಟ್ ಸಿಕ್ರೆ ಖಂಡಿತಾ ಗೆಲ್ಲಲ್ಲ- ನೆಲಮಂಗಲದ ಕಾಂಗ್ರೆಸ್ ಸಭೆಯಲ್ಲಿ ಗದ್ದಲ 3. ಪಿಎಸ್ಐನಿಂದಲೇ ಪತ್ನಿ ಮೇಲೆ ಹಲ್ಲೆ- ಬ್ಲೇಡ್​ನಿಂದ ಕೈ ಕುಯ್ದ ಸಿರುಗುಪ್ಪ ಪಿಎಸ್​ಐ- ಕೇಸ್​ ವಾಪಾಸ್​ ಪಡೆಯುವಂತೆ ಕಿರುಕುಳ 4. ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ- ನಾಳೆ ಬೆಂಗಳೂರಿನಲ್ಲಿ ಮಹತ್ವದ ಸಭೆ- 500 ಕ್ಕೂ ಹೆಚ್ಚು ಮಠಾಧೀಶರು ಭಾಗಿ ಸಾಧ್ಯತೆ 5. ತಲಾಖ್​​​ ನಿಷೇಧ ತೀರ್ಪಿಗೆ ಪ್ರಧಾನಿ ಸ್ವಾಗತ- ಮಹಿಳಾ ಸಬಲೀಕರಣಕ್ಕೆ ಇದು ಪೂರಕ- ಟ್ವಿಟರ್​​​​​ನಲ್ಲಿ ಮೋದಿ ಪ್ರತಿಕ್ರಿಯೆ
Breaking News :

ಅಮಿತ್​ ಷಾರಿಂದ ‘The Story Of A Guru’ ಪುಸ್ತಕ ಬಿಡುಗಡೆ

Sunday, 13.08.2017, 1:29 PM       No Comments

ಮಂಡ್ಯ: 3 ದಿನಗಳ ರಾಜ್ಯ ಪ್ರವಾಸಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಭಾನುವಾರ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿ ಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಕಾಲಭೈರವೇಶ್ವರನಿಗೆ ಪೂಜೆ ಸಲ್ಲಿಸಿದರು. ಆನಂತರ ಬಾಲಗಂಗಾಧರ ಸ್ವಾಜಿಯ ಅವರ ಜೀವನಾಧರಿತ ‘The Story Of A Guru’ ಪುಸ್ತಕವನ್ನು ಬಿಡುಗಡೆ ಮಾಡಿದರು.

ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಭಾನುವಾರ ಬೆಳಗ್ಗೆ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ನಡೆಸಿ ನಂತರ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್‌ ಬಳಿ ಇರುವ ಆದಿ ಚುಂಚನಗಿರಿ ಮಠಕ್ಕೆ ಭೇಟಿ ನೀಡಿದರು. ಕುಣಿಗಲ್‌ ಬಳಿ ಅಮಿತ್ ಷಾರನ್ನ ಸ್ವಾಗತಿಸಿದ ಬಿಜೆಪಿ ಕಾರ್ಯಕರ್ತರು ಹೂವಿನ ಹಾರ ಹಾಕಿ ಜೈಕಾರ ಕೂಗಿದರು.

ಕಾಲಭೈರವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ಅಮಿತ್ ಷಾ ಅವರು ಮಠ ಸಭಾಭವನದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ಶ್ರೀಮಠ ಕುರಿತಾದ ಪುಸ್ತಕ ‘ದ ಸ್ಟೋರಿ ಆಫ್ ಎ ಗುರು’ (The Story Of A Guru) ಅನ್ನ ಅಮಿತ್‌ ಷಾ ಬಿಡುಗಡೆಗೊಳಿಸಿದ್ದಾರೆ. ನಂತರ ನಿರ್ಮಲಾನಂದ ನಾಥ ಸ್ವಾಮೀಜಿ ಜತೆ ಮಾತುಕತೆ ನಡೆಸಿ ಭೋಜನದಲ್ಲಿ ಭಾಗಿಯಾದರು.

ಇನ್ನು ಷಾ ಅವರು ಆದಿಚುಂಚನಗಿರಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಹಾಗೂ ಇಂಜಿನಿಯರ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಅಮಿತ್ ಷಾ ಭೇಟಿ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಮಠದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಿದ್ದು, ಎಲ್ಲ ಪ್ರವೇಶ ದ್ವಾರದಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top