Thursday, 18th January 2018  

Vijayavani

ಹಿರಿಯ ನಟ ನಿರ್ದೇಶಕ ಕಾಶಿನಾಥ್ ಇನ್ನಿಲ್ಲ - ಬೆಂಗಳೂರಿನ ಶಂಕರ ಕ್ಯಾನ್ಸರ್​ ಆಸ್ಪ್ರೆಯಲ್ಲಿ ಕೊನೆಯುಸಿರು- ಕಳಚಿದ ಅನುಭವದ ಕೊಂಡಿ        ಡೈರೆಕ್ಟರ್​ ಎಪಿ ಅರ್ಜುನ್​ ಕಚೇರಿಯಲ್ಲಿ ಕಳ್ಳತನ - ಯಶ್​ ಬರ್ತಡೇ ದಿನ ಕೃತ್ಯ - ಮಾಜಿ ಕಾರು ಡ್ರೈವರ್ ವಿರುದ್ಧ ಅನುಮಾನದ ಹುತ್ತ         ಒಂಟಿ ಮಹಿಳೆಗೆ ಜಡೆ ಹಿಡಿದು ಥಳಿತ - ಕೊಪ್ಪಳ ಬಸ್​ಸ್ಟಾಪ್​ನಲ್ಲಿ ಪುರುಷರ ಅಟ್ಟಹಾಸ - ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್         ನೈಂಟಿ ಕೊಡ್ತೇವೆ ಅಂತ ಹರಕೆ ಹೊರ್ತಾರೆ ಭಕ್ತರು - ದೇವರ ಹೆಸರಲ್ಲಿ ಸಾಮೂಹಿಕ ಮದ್ಯಾರಾಧನೆ - ಕುಣಿಗಲ್‍ನ ಒಡೇಭೈರವನಿಗೆ ಬ್ರಾಂದಿ ವಿಸ್ಕಿಯೇ ನೈವೇದ್ಯ        ಕೃಷ್ಣನಗರಿಯಲ್ಲಿ ಪರ್ಯಾಯ ಸಂಭ್ರಮ - ಕೃಷ್ಣಪೂಜೆ ನೆರವೇರಿಸಿದ ಪಲಿಮಾರು ಶ್ರೀಗಳು - ಅದ್ಧೂರಿಯಿಂದ ಸರ್ವಜ್ಞ ಪೀಠಾರೋಹಣ       
Breaking News :

ಪೊಲೀಸರಿಗೆ ಕೊಟ್ಟಿದ್ದು ಮಿಸ್ಸಿಂಗ್‌ ಕಂಪ್ಲೆಂಟ್‌! ಆದರೆ, ಮಾಡಿದ್ದು ಏನು?

Saturday, 16.12.2017, 7:54 AM       No Comments

ನವದೆಹಲಿ: ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಅದೆಷ್ಟೇ ಕಾನೂನು ಕ್ರಮ ಕೈಗೊಂಡರು ಅಪರಾಧಗಳು ಮಾತ್ರ ಹೊಸ ಹೊಸ ಅವತಾರದಲ್ಲಿ ನಡೆಯುತ್ತಲೇ ಇರುತ್ತವೆ ಎಂಬುದಕ್ಕೆ ಸಾಕ್ಷಿಯಂತಿದೆ ಈ ಪ್ರಕರಣ.

ಸದ್ಯ, ಹೆಂಡತಿಯನ್ನು ಕೊಂದು ಶವವನ್ನು ಬೇರೆಡೆ ಸಾಗಿಸಿದ್ದ ಖದೀಮ ಪತಿ ಮತ್ತು ಆತನ ಕುಟುಂಬಸ್ಥರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.  ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದಾರೆ.

ನಡೆದಿದ್ದೇನು?

ಡಿಸೆಂಬರ್‌ 11ರಂದು ತನ್ನ ಪತ್ನಿ ಕಾಣೆಯಾಗಿದ್ದಾಳೆ ಎಂದು ದೂರನ್ನು ದಾಖಲಿಸಿದ್ದ ಮಹಾಶಯ ಮಾಡಿದ್ದು ಮಾತ್ರ ಕೊಲೆ. ನಂತರ ಮನೆಯವರ ಸಹಾಯದಿಂದ ಶವವನ್ನು ಉತ್ತರಾಖಂಡದ ಮಸ್ಸೂರಿ ಕಣಿವೆಯಲ್ಲಿ ಎಸೆದು ಬಂದಿದ್ದ. ಈತನ ವಿರುದ್ಧವೇ ಮಹಿಳೆ ಪೋಷಕರು ಅನುಮಾನ ವ್ಯಕ್ತಪಡಿಸಿದಾಗ ವಿಚಾರಣೆ ನಡೆಸಿದ ಪೊಲೀಸರಿಗೆ ವಿಷಯ ತಿಳಿದಿದೆ.  ಪತಿ ಮತ್ತು ಪತ್ನಿಗೆ ದಿನನಿತ್ಯ ಜಗಳವಾಗುತ್ತಿದ್ದರಿಂದ ಬೇಸತ್ತಿದ್ದ ಆರೋಪಿ ಲಲಿತ್‌ ಈ ಕೃತ್ಯ ಎಸಗಿದ್ದಾನೆ.  (ಏಜೆನ್ಸೀಸ್‌)

Leave a Reply

Your email address will not be published. Required fields are marked *

Back To Top