Saturday, 26th May 2018  

Vijayavani

ನಾಮಪತ್ರ ವಾಪಸ್ ಪಡೆದ ಸುರೇಶ್​ಕುಮಾರ್​- ಅವಿರೋಧವಾಗಿ ರಮೇಶ್​ಕುಮಾರ್​ ಆಯ್ಕೆ- ಎರಡನೇ ಬಾರಿಗೆ ಸ್ಪೀಕರ್​ ಆಗಿ ನೇಮಕ        ಸದನದಲ್ಲಿ ವಿಶ್ವಾಮತ ಪರೀಕ್ಷೆ- ಮೂರು ಪಕ್ಷಗಳ ಎಲ್ಲಾ ಶಾಸಕರು ಹಾಜರ್​- ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಬಿಎಸ್​ವೈ        ಮೈತ್ರಿ ಸರ್ಕಾರದ ಪರ್ವ ಆರಂಭ- ಸಾಲ ಮನ್ನಾ ಮಾಡ್ತಾರಾ ಎಚ್​ಡಿಕೆ- ಕೊಟ್ಟ ಮಾತು ಉಳಿಸಿಕೊಳ್ತಾರಾ ಕಾಂಗ್ರೆಸ್​ ನಾಯಕರು        ಸಚಿವ ಸ್ಥಾನಕ್ಕಾಗಿ ಲಾಬಿ ಶುರು- ಕೆಪಿಸಿಸಿ ಅಧ್ಯಕ್ಷ ಸ್ಥಾನ, ಗೃಹಖಾತೆಗೆ ಡಿಕೆಶಿ ಪಟ್ಟು- ಹೈಕಮಾಂಡ್ ಭೇಟಿಗೆ ತೆರಳಲಿರುವ ಕೈ ನಾಯಕರು        ಮುಗಿದ ಬಹುಮತ ಸಾಬೀತಿನ ಪರೀಕ್ಷೆ- ಶಾಸಕರ ರೆಸಾರ್ಟ್​ ರಾಜಕೀಯ ಅಂತ್ಯ- ಇನ್ನಾದ್ರೂ ಕ್ಷೇತ್ರಗಳತ್ತ ತೆರಳ್ತಾರಾ ಎಂಎಲ್​ಎಗಳು        ಸಿಎಂಗೆ ಹೊಸ ಕಾರು ನೀಡಿದ ಡಿಪಿಎಆರ್- ಜಿಎ 6363 ಕಾರ್​ ನಂಬರ್​- ಹೊಸ ಕಾರು ಬಳಸಲು ಸಿಎಂ ನಿರ್ಧಾರ       
Breaking News

ಇದು ಸಾಹಸವಲ್ಲ ದುರಂತ: ಚಲಿಸುತ್ತಿದ್ದ ಬಸ್ ಚಕ್ರಕ್ಕೇ ತಲೆಕೊಟ್ಟ ತಲೆಕೆಟ್ಟವ

Tuesday, 05.12.2017, 10:36 AM       No Comments

<<ಅಂತೂ ಚಾಲಕನನ್ನು ಪಾರು ಮಾಡಿತು ಸಿಸಿಟಿವಿ ಕ್ಯಾಮರಾ ದೃಶ್ಯ >>

ಹಾಸನ:  ಅಲ್ಲಿದ್ದ ಜನರು ಕೆಲವೇ ಕ್ಷಣಗಳಲ್ಲಿ ತಾವು ಭೀಕರ ದೃಶ್ಯವೊಂದಕ್ಕೆ ಸಾಕ್ಷಿಯಾಗುತ್ತೇವೆ ಎಂದು ಉಹಿಸಿಕೊಂಡಿರಲಿಕ್ಕೆ ಸಾಧ್ಯವಿಲ್ಲ. ಆದರೆ, ನೋಡು ನೋಡುತ್ತಿದಂತೆಯೇ ಆ ದುರ್ಘಟನೆ ಸಂಭವಿಸಿ ಹೋಯಿತು. ಆ ವ್ಯಕ್ತಿ ಚಲಿ

ಸುತ್ತಿದ್ದ ಬಸ್​ ಕೆಳಗೆ ನುಸುಳಿ ಹಿಂಬದಿ ಚಕ್ರಕ್ಕೆ ತಲೆಕೊಟ್ಟುಬಿಟ್ಟ. ದಾರಿಹೋಕರು ಹೌಹಾರಿ ನಿಟ್ಟುಸಿರು ಬಿಡುವಷ್ಟರಲ್ಲಿ ಅವನ ಪ್ರಾಣ ಪಕ್ಷಿ ಹಾರಿಹೋಗಿತ್ತು.

ಈತ ಮಾನಸಿಕ ಅಸ್ವಸ್ಥನೋ ಅಥವಾ ಬೇಕಂತಲೇ ಆತ್ಮಹತ್ಯೆ ಮಾಡಿಕೊಂಡನೋ ಇನ್ನು ತಿಳಿಯಬೇಕಷ್ಟೆ. ಆದರೆ, ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮರಾ ಮಾತ್ರ ಬಸ್ ಚಾಲಕನ ಮೇಲಿದ್ದ ನಿರ್ಲಕ್ಷ್ಯದ ಚಾಲನೆಯ ಅರೋಪದಿಂದ ಪಾರು ಮಾಡಿದೆ.

ಹೀಗೆ ಭಯಾನಕ ರೀತಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಇಲ್ಲಿನ ರೈಲ್ವೇ ಗೇಟ್​ ಬಳಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಆತ್ಮಹತ್ಯೆಯ ಕ್ಷಣಗಳು ಸೆರೆಯಾಗಿವೆ. ರಸ್ತೆ ಬದಿಯಲ್ಲಿ ನಿಂತಿದ್ದ 40 ವಯಸ್ಸಿನ ಆಸುಪಾಸಿನ ಆ ವ್ಯಕ್ತಿ ಬಸ್​ ಕೆಳಗೆ ನುಗ್ಗಲು ಕಾಯ್ದಿದ್ದಾನೆ. ಮೊದಲ ಎರಡು ಬಸ್​ ತೆರಳಿದ ನಂತರ ಮೂರನೆ ಬಸ್​ನ ಕೆಳಗೆ ನುಗ್ಗಿಬಿಡುತ್ತಾನೆ. ಹಾಸನ ನಗರ ಪೊಲೀಸ್​​​​​​​​​​​​ ಠಾಣಾ ವ್ಯಾಪ್ತಿಯಲ್ಲಿ ಕೇಸ್​​​​ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)

 

 

Leave a Reply

Your email address will not be published. Required fields are marked *

Back To Top