Thursday, 24th May 2018  

Vijayavani

ಶಕ್ತಿಸೌಧದ ಮುಂದೆ ಎಚ್​ಡಿಕೆ ಪದಗ್ರಹಣ - ದೇವರು ಹಾಗೂ ಕನ್ನಡ ನಾಡಿನ ಹೆಸರಲ್ಲಿ ಪ್ರಮಾಣವಚನ        ಉಪಮುಖ್ಯಮಂತ್ರಿಯಾಗಿ ಪರಮೇಶ್ವರ್ ಪದಗ್ರಹಣ -ಮೈತ್ರಿ ಸರ್ಕಾರದಲ್ಲಿ ಅಧಿಕಾರದ ಚುಕ್ಕಾಣಿ        ರಾಜ್ಯದಲ್ಲಿ ಕುಮಾರಪರ್ವ ಶುರು - ವಿಧಾನಸೌಧದ ಮುಂದೆ ತೃತೀಯ ರಂಗದ ವೈಭವ        ವೇದಿಕೆಯಲ್ಲಿ ಮಮತಾ ಬ್ಯಾನರ್ಜಿ ಸಿಡಿಮಿಡಿ - ಎಚ್​ಡಿಡಿ ಸಮಾಧಾನಿಸಿದ್ರೂ ಕರಗದ ಮುನಿಸು        ವಿಧಾನಸೌಧದ ಮುಂದೆ ಜನರ ದಂಡು- ಸಹಸ್ರಾರು ಸಂಖ್ಯೆಯಲ್ಲಿ ನೆರೆದ ಕೈ-ದಳ ಕಾರ್ಯಕರ್ತರು        ವರುಣನ ಅಬ್ಬರದ ಬಳಿಕ ಪ್ರಮಾಣವಚನದ ಸಂಭ್ರಮ- ಕುಣಿದು ಕುಪ್ಪಳಿಸಿದ ಎಚ್​ಡಿಕೆ ಅಭಿಮಾನಿಗಳು       
Breaking News

ಮಲಯಾಳಂ ನಟ ಸಿಧು ಗೋವಾದಲ್ಲಿ ನಿಗೂಢ ರೀತಿಯಲ್ಲಿ ಸಾವು

Wednesday, 17.01.2018, 12:16 PM       No Comments

ಮುಂಬೈ: ಮಲಯಾಳಂ ಸಿನಿಮಾ ಸೆಕೆಂಡ್ ಹಾಫ್​ನಲ್ಲಿ ದಲ್ಕರ್ ಸಲ್ಮಾನ್ ವಿರುದ್ಧ ಖಳನಟನಾಗಿ ಅಭಿನಯಿಸಿದ್ದ ಸಿಧು ಆರ್. ಪಿಳ್ಳೈ ಗೋವಾದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಜ.12ಕ್ಕೆ ಗೋವಾ ತೆರಳಿದ್ದ ಸಿಧು(27) ಗೋವಾ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಸೋಮವಾರ ಸಂಜೆ ಸಿಧು ತಾಯಿ ಆತನ ಮೃತದೇಹವನ್ನು ಗುರುತಿಸಿದ್ದಾರೆ. ಸಿಧು ಸಾವಿನ ಸುದ್ದಿಯನ್ನು ಟ್ವೀಟ್ ಮೂಲಕ ತಿಳಿಸಿರುವ ದಲ್ಕರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಿಧು ತಂದೆ ಪಿ.ಕೆ.ಆರ್. ಪಿಳ್ಳೈ ಕೂಡಾ ಸಿನಿಮಾರಂಗಕ್ಕೆ ಪರಿಚಿತರೇ. ಇವರು ಚಿತ್ರಂ, ವಂದನಮ್, ಅಮೃತಮ್ ಗಮ್ಯ ಮುಂತಾದ ಸಿನಿಮಾವನ್ನು ಶಿರ್ಡಿ ಸಾಯಿ ಕ್ರಿಯೆಷನ್ ಬ್ಯಾನರ್​ನಡಿಯಲ್ಲಿ ನಿರ್ಮಿಸಿದ್ದಾರೆ.

ಸಿಧು ಅಂತಿಮ ಕ್ರಿಯೆಯು ಕೇರಳದ ತ್ರಿಶೂರ್ ನಲ್ಲಿರುವ ನಿವಾಸದಲ್ಲಿ ನಡೆಯಲಿದೆ.

Leave a Reply

Your email address will not be published. Required fields are marked *

Back To Top