Friday, 20th October 2017  

Vijayavani

1. ಲಿಂಗಾಯತ ಪ್ರತಿಪಾದಕರಾಗಿದ್ದಕ್ಕೆ ಕಲಬುರ್ಗಿ ಹತ್ಯೆ – ಲಿಂಗಾಯತ ವಿಚಾರ ಬರೆದಿದ್ದಕ್ಕೆ ಗೌರಿ ಲಂಕೇಶ್​ ಕೊಲೆ ಶಂಕೆ – ಬೆಂಗಳೂರಿನಲ್ಲಿ ಜಾಮದಾರ್​ ವಿವಾದಾತ್ಮಕ ಹೇಳಿಕೆ 2. ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರಿದಕ್ಕೆ ಮಾರಣಾಂತಿಕ ಹಲ್ಲೆ – ಮಾಜಿ ಕಾರ್ಪೊರೇಟರ್​ ರವೀಂದ್ರ ವಿರುದ್ಧ ಮಹಿಳೆ ಆರೋಪ – ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ 3. ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾರಥೋತ್ಸವ – ರಥೋತ್ಸವದ ವೇಳೆ ನೂಕು ನುಗ್ಗಲು – ಭಕ್ತರ ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಜ್ 4. ಹಾಲಿವುಡ್, ಬಾಲಿವುಡ್​ ಬೇರೆ ಅಲ್ಲ – ಎರಡೂ ಕಡೆ ಲೈಂಗಿಕ ಶೋಷಣೆ ಇದ್ದೆ ಇದೆ – ಸಂದರ್ಶನದಲ್ಲಿ ಸತ್ಯ ತೆರೆದಿಟ್ಟ ಪ್ರಿಯಾಂಕ ಚೋಪ್ರಾ 5. ದೀಪಾವಳಿಗೆ ಪ್ರಧಾನಿ ತಾಯಿ ಫುಲ್ ಖುಷ್​ – ರಾಮನ ಹಾಡಿಗೆ ಸಖತ್ ಸ್ಟೆಪ್ಸ್​ – 97ರ ಹರೆಯದಲ್ಲೂ ಹೀರಾಬೆನ್​ ಜೀವನ ಪ್ರೀತಿ
Breaking News :

ಯಪ್ಪಾ! ನಮ್ಮ ರಾಹುಲ್​ ಗಾಂಧಿ ಹೊಸ ಅವಾಂತರ ನೀವೇ ನೋಡಿ!

Thursday, 12.10.2017, 12:03 PM       No Comments

ಛೋಟಾ ಉದಯಪುರ​: ಕಾಂಗ್ರೆಸ್​ನ ಯುವರಾಜ ರಾಹುಲ್​ ಗಾಂಧಿ ಮೊನ್ನೆಯಷ್ಟೆ RSS​ನಲ್ಲಿ ಹೆಣ್ಣುಮಕ್ಕಳು ಯಾಕೆ ನಿಕ್ಕರ್​ ಹಾಕಿಕೊಳ್ಳುವುದಿಲ್ಲ? ಎಂದು ತಮ್ಮ ಮೊಳಕಾಲು ಕೆಳಗಿನ ಬುದ್ಧಿ ಪ್ರದರ್ಶಿಸಿದ್ದರು. ಇದು ವ್ಯಾಪಕ ಆಕ್ರೋಶ ಮತ್ತು ಲೇವಡಿಗೆ ಗುರಿಯಾಗಿತ್ತು. ಅದಾದ ನಂತರ ನಮ್ಮ ಕಾಂಗ್ರೆಸ್​ ಉಪಾಧ್ಯಕ್ಷ ರಾಹುಲ್​ ಗಾಂಧಿ ನಿನ್ನೆ ಏನ್ಮಾಡಿದ್ದಾರೆ ಗೊತ್ತಾ…

ಅನಂತ ಅವಾಂತರ:
ಬುಧವಾರ ರಾಹುಲ್​ ಗಾಂಧಿ ಅವರು ಗುಜರಾತ್​ ರಾಜ್ಯದ ಛೋಟಾ ಉದಯಪುರ​ ಜಿಲ್ಲೆಯಲ್ಲಿ ಯುವಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಸಂವಾದದುದ್ದಕ್ಕೂ ಮೋದಿ ಸರ್ಕಾರವನ್ನು ಬಾಯಿಗೆ ಬಂದಂತೆ ಟೀಕಿಸಿದ ರಾಹಲ್​ ಗಾಂಧಿ ಅವರು ನಂತರ ಏನ್ಮಾಡಿದರು ಅಂದರೆ…

ಅಧಿಕಾರಕ್ಕೆ ಹಪಾಹಪಿಸುತ್ತಿರುವ ರಾಹುಲ್​ಗೆ ಏನು ಅವಸರವೋ!?:
ಸಂವಾದ ಮುಗಿಸಿ ಟೌನ್​ಹಾಲ್​ ಕಡೆ ಹೆಜ್ಜೆ ಹಾಕತೊಡಗಿದ ರಾಹುಲ್​ ಗಾಂಧಿ ಅವರು ಅವಸರವಸರವಾಗಿ ಮಹಿಳೆಯರ ಶೌಚಾಲಯದತ್ತ ದೌಡಾಯಿಸಿದ್ದಾರೆ. ಪಾಪ! ಗೊತ್ತಿದ್ದೂ/ಗೊತ್ತಿಲ್ಲದೆಯೋ ಅಲ್ಲಿಗೆ ಹೋದ ರಾಹುಲರ ಆ ನಡೆ ಇದೀಗ ನಗೆಪಾಟೀಲಿಗೆ ಗುರಿಯಾಗಿದ್ದಾರೆ.

Mahilao Mate Shauchalya:
ಅಂದಹಾಗೆ ಅಲ್ಲಿ… ಮಹಿಳಾ ಶೌಚಾಲಯದ ಮೇಲೆ ಗುಜರಾತಿ ಭಾಷೆಯಲ್ಲಿ Mahilao Mate Shauchalya ಎಂದು ಬರೆಯಲಾಗಿತ್ತು. ಆದರೆ ರಾಹುಲ್​ ಅವರಿಗೆ ಗುಜರಾತಿ ಭಾಷೆ ಬರೋಲ್ಲ. ಹಾಗಾಗಿ … ಅತ್ತ ನುಗ್ಗಿಯೇ ಬಿಟ್ಟರು.

ಎಲ್ಲ ಡ್ರಾಮಾ ಕ್ಯಾಮೆರಾಗಳಲ್ಲಿ ದಾಖಲು:
ಇನ್ನು ರಾಹುಲ್​ ಗಾಂಧಿ ಮಹಿಳೆಯರ ಶೌಚಾಲಯಕ್ಕೆ ಹೋಗಿರುವ ವಿಷಯ ಕಿವಿಗೆ ಅಪ್ಪಳಿಸುತ್ತಿದ್ದಂತೆ ಮಾಧ್ಯಮದವರು ಅತ್ತ ನುಗ್ಗಿದಾಗ … ರಾಹುಲರ ಬೆಂಗಾವಲು ಪಡೆ ಅವರಿಗೆ ತಡೆಗೋಡೆಯಾಗಿದ್ದಾರೆ! ಈ ಮಧ್ಯೆ, ರಾಹುಲ್​ ಹೊರ ಬರುತ್ತಿದ್ದಂತೆ ಅಲ್ಲಿದ್ದವರೆಲ್ಲ ಒಮ್ಮೆ ರಾಹುಲ್​ರನ್ನು ನೋಡಿ ಬಿದ್ದು ಬಿದ್ದು ನಕ್ಕಿದ್ದು, ಈ ಎಲ್ಲ ಡ್ರಾಮಾ ಕ್ಯಾಮೆರಾಗಳಲ್ಲಿ ದಾಖಲಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top