Friday, 20th October 2017  

Vijayavani

1. ಲಿಂಗಾಯತ ಪ್ರತಿಪಾದಕರಾಗಿದ್ದಕ್ಕೆ ಕಲಬುರ್ಗಿ ಹತ್ಯೆ – ಲಿಂಗಾಯತ ವಿಚಾರ ಬರೆದಿದ್ದಕ್ಕೆ ಗೌರಿ ಲಂಕೇಶ್​ ಕೊಲೆ ಶಂಕೆ – ಬೆಂಗಳೂರಿನಲ್ಲಿ ಜಾಮದಾರ್​ ವಿವಾದಾತ್ಮಕ ಹೇಳಿಕೆ 2. ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರಿದಕ್ಕೆ ಮಾರಣಾಂತಿಕ ಹಲ್ಲೆ – ಮಾಜಿ ಕಾರ್ಪೊರೇಟರ್​ ರವೀಂದ್ರ ವಿರುದ್ಧ ಮಹಿಳೆ ಆರೋಪ – ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ 3. ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾರಥೋತ್ಸವ – ರಥೋತ್ಸವದ ವೇಳೆ ನೂಕು ನುಗ್ಗಲು – ಭಕ್ತರ ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಜ್ 4. ಹಾಲಿವುಡ್, ಬಾಲಿವುಡ್​ ಬೇರೆ ಅಲ್ಲ – ಎರಡೂ ಕಡೆ ಲೈಂಗಿಕ ಶೋಷಣೆ ಇದ್ದೆ ಇದೆ – ಸಂದರ್ಶನದಲ್ಲಿ ಸತ್ಯ ತೆರೆದಿಟ್ಟ ಪ್ರಿಯಾಂಕ ಚೋಪ್ರಾ 5. ದೀಪಾವಳಿಗೆ ಪ್ರಧಾನಿ ತಾಯಿ ಫುಲ್ ಖುಷ್​ – ರಾಮನ ಹಾಡಿಗೆ ಸಖತ್ ಸ್ಟೆಪ್ಸ್​ – 97ರ ಹರೆಯದಲ್ಲೂ ಹೀರಾಬೆನ್​ ಜೀವನ ಪ್ರೀತಿ
Breaking News :

ಮೆಕ್ಸಿಕೋ ಭೂಕಂಪ ನೂರಾರು ಸಾವು ಭಯಾನಕ ವಿಡಿಯೋಗಳಿವೆ ನೋಡಿ

Wednesday, 20.09.2017, 7:18 AM       No Comments

ಮೆಕ್ಸಿಕೋ: ಮೆಕ್ಸಿಕೋ ನಗರದ ಮೇಲೆ ಪ್ರಕೃತಿ ಮಾತೆ ಮತ್ತೆ ಮುನಿಸಿಕೊಂಡಿದ್ದಾಳೆ. ಮೆಕ್ಸಿಕೊದ ಪ್ಯುಬೆಲಾ ರಾಜ್ಯದ ರಬೊಸೊ ಪಟ್ಟಣದಲ್ಲಿ ನಿನ್ನೆ ಮಂಗಳವಾರ ರಾತ್ರಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ 139 ಮಂದಿ ಸಾವನ್ನಪ್ಪಿದ್ದಾರೆ. ತಾಜಾ ಬೆಳವಣಿಗೆ ಪ್ರಕಾರ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 250ಕ್ಕೆ ಏರಿಕೆಯಾಗಿದೆ

ರಿಕ್ಟರ್​​ ಮಾಪಕದಲ್ಲಿ 7.1ರಷ್ಟು ತೀವ್ರತೆ ದಾಖಲಾಗಿದ್ದು, ಭೂಕಂಪನದ ತೀವ್ರತೆಗೆ ನಗರದ ಹಲವೆಡೆ ಕಟ್ಟಡ, ಮನೆಗಳು ಧರಾಶಾಹಿಯಾಗಿವೆ. ಜನರು ಮನೆಯಿಂದ ಹೊರಗೋಡಿ ಬಂದಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಭೂಕಂಪದಿಂದ ನೂರಾರು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಉರುಳಿ ಬಿದ್ದಿರೊ ಕಟ್ಟಡ ಮತ್ತು ಮನೆಗಳ ಅವಶೇಷದಡಿ ಹಲವರು ಸಿಲುಕಿರೊ ಸಾಧ್ಯತೆಯಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗೊ ಸಾಧ್ಯತೆಯಿದೆ.

ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಎರಡು ವಾರಗಳ ಹಿಂದೆಯಷ್ಟೆ ಮೆಕ್ಸಿಕೊದಲ್ಲಿ ಸಂಭವಿಸಿದ ಭೂಕಂಪಕ್ಕೆ 90 ಮಂದಿ ಸಾವನ್ನಪ್ಪಿದ್ರು. ಅಚ್ಚರಿಯಂದ್ರೆ 1985ರ ಸಪ್ಟೆಂಬರ್​ 19 ರಂದು​ ಮೆಕ್ಸಿಕೊದಲ್ಲಿ ಸಂಭವಿಸಿದ ಭೂಕಂಪದಲ್ಲಿ 10 ಸಾವಿರ ಮಂದಿ ಸಾವನ್ನಪ್ಪಿದ್ದರು.

ಘಟನೆಯ ವರ್ಷಾಚರಣೆಯಂದೆ ಈಗ ಮತ್ತೆ ಭೂಕಂಪವಾಗಿದ್ದು, ಮೆಕ್ಸಿಕೊ ಜನತೆ ತತ್ತರಿಸಿ ಹೋಗಿದ್ದಾರೆ. ಮೆಕ್ಸಿಕೊ ಅಧ್ಯಕ್ಷ ಎನ್ರಿಕ್​ ಪೆನಾ ತುರ್ತು ಸಭೆ ನಡೆಸಿದ್ದು, ಪರಿಸ್ಥಿತಿಯ ಅವಲೋಕನ ಮಾಡಿದ್ದಾರೆ.

ಇನ್ನೊಂದೆಡೆ, ನ್ಯೂಜಿಲೆಂಡ್​ನ ದಕ್ಷಿಣ ಭಾಗದಲ್ಲೂ 6.1ರಷ್ಟು ತೀವ್ರತೆಯಲ್ಲಿ ಭೂಕಂಪ ಸಂಭವಿಸಿದೆ. ಆದ್ರೆ, ಸಮುದ್ರ ಪ್ರದೇಶದಲ್ಲಿ ಭೂಮಿ ಕಂಪಿಸಿರೋದ್ರಿಂದ ಯಾವುದೇ ಪ್ರಾಣಾಪಾಯದ ವರದಿಯಾಗಿಲ್ಲ. ಸದ್ಯಕ್ಕೆ ಸುನಾಮಿ ಭೀತಿಯ ಎಚ್ಚರಿಕೆಯನ್ನೂ ನೀಡಿಲ್ಲ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top