Thursday, 18th January 2018  

Vijayavani

ಒಂಟಿ ಮಹಿಳೆಗೆ ಜಡೆ ಹಿಡಿದು ಥಳಿತ- ಕೊಪ್ಪಳ ಬಸ್​ಸ್ಟಾಪ್​ನಲ್ಲಿ ಪುರುಷರ ಅಟ್ಟಹಾಸ- ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್        ಯುಪಿ ಪೊಲೀಸರಿಂದ ನಡೀತು ಅಚಾತುರ್ಯ- 8 ವರ್ಷದ ಹುಡುಗನ ಎನ್​ಕೌಂಟರ್​- ಮಿಸ್​ ಫೈರ್​ ಆಯ್ತೆಂದು ಜಾರಿಕೆಯ ಉತ್ತರ        ಜಯಲಲಿತಾ ಸತ್ತಿದ್ದು ಡಿ.5ಕ್ಕಲ್ಲ ನಾಲ್ಕಕ್ಕೆ- ಶಶಿಕಲಾ ಸಹೋದರನಿಂದ ಹೊಸ ಬಾಂಬ್​- ಅಮ್ಮ ಸತ್ತು ವರ್ಷ ಕಳೆದ್ರೂ ನಿಂತಿಲ್ಲ ಊಹಾಪೋಹ        ನೈಂಟಿ ಕೊಡ್ತೇವೆ ಅಂತ ಹರಕೆ ಹೊರ್ತಾರೆ ಭಕ್ತರು- ದೇವರ ಹೆಸರಲ್ಲಿ ಸಾಮೂಹಿಕ ಮದ್ಯಾರಾಧನೆ- ಕುಣಿಗಲ್‍ನ ಒಡೇಭೈರವನಿಗೆ ಬ್ರಾಂದಿ ವಿಸ್ಕಿಯೇ ನೈವೇದ್ಯ        ಕೃಷ್ಣನಗರಿಯಲ್ಲಿ ಪರ್ಯಾಯ ಸಂಭ್ರಮ- ಕೃಷ್ಣಪೂಜೆ ನೆರವೇರಿಸಿದ ಪಲಿಮಾರು ಶ್ರೀಗಳು- ಅದ್ಧೂರಿಯಿಂದ ಸರ್ವಜ್ಞ ಪೀಠಾರೋಹಣ       
Breaking News :

ತಾಯಂದಿರ ‘ಮಡಿಲು ಭಾಗ್ಯ’ ಬರಿದಾಗಿಸಿದ ರಾಜ್ಯ ಸರ್ಕಾರ

Tuesday, 10.10.2017, 12:09 PM       No Comments

ಧಾರವಾಡ: ಬಾಣಂತಿಯರಿಗೆ ರಾಜ್ಯ ಸರ್ಕಾರ ನೀಡುತ್ತಿದ್ದ ಮಡಿಲು ಕಿಟ್ ಯೋಜನೆ ಸ್ಥಗಿತಗೊಂಡಿತಾ ಎಂಬ ಸಂಶಯ ಜನರಲ್ಲಿ ಕಾಡುತ್ತಿದೆ. ಪೌಷ್ಠಿಕಾಂಶ ವರ್ಧಿಸುವ ಉದ್ದೇಶದಿಂದ ನೀಡುತ್ತಿದ್ದ ಈ ಕಿಟ್ ಉತ್ತರ ಕರ್ನಾಟಕದ ಹಲವೆಡೆ ಅದರಲ್ಲಿಯೂ ವಿಶೇಷವಾಗಿ ಧಾರವಾಡದಲ್ಲಿ ಸ್ಥಗಿತಗೊಂಡು ಹಲವು ತಿಂಗಳುಗಳೇ ಕಳೆದಿವೆ.

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ‘ಕಿಟ್ ಲಭ್ಯವಿಲ್ಲ’ ಎಂಬ ನಾಮ ಫಲಕ ರಾರಾಜಿಸುತ್ತಿದೆ. ಜಿಲ್ಲೆಗೆ ಹೊಸದಾಗಿ ಮಡಿಲು ಕಿಟ್​ಗಳು ಬಂದು ಇದೇ ನವೆಂಬರ್​ಗೆ ಒಂದು ವರ್ಷವಾಗುತ್ತದೆ. ಕಳೆದ ವರ್ಷದ ನವೆಂಬರ್​ನಲ್ಲಿ ಬಂದಿದ್ದ 1,000 ಕಿಟ್‌ಗಳೇ ಕೊನೆ. ನಂತರದಲ್ಲಿ ಸರ್ಕಾರದಿಂದ ಯಾವುದೇ ಕಿಟ್ ಸರಬರಾಜು ಆಗಿಲ್ಲ.

ಹೀಗಾಗಿ ಈ ವರ್ಷದ ಏಪ್ರಿಲ್ ತಿಂಗಳಿನಿಂದ ಜಿಲ್ಲೆಯಲ್ಲಿ ಎಲ್ಲಿಯೂ ಬಾಣಂತಿಯರಗೆ ಮಡಿಲು ಕಿಟ್ ನೀಡಲಾಗುತ್ತಿಲ್ಲ. ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯಲ್ಲಿರುವ ಎಲ್ಲ ಸರ್ಕಾರಿ ಹೆರಿಗೆ ಆಸ್ಪತ್ರೆಗಳಲ್ಲಿ 2017ರ ಏಪ್ರಿಲ್‌ನಿಂದ ಮಡಿಲು ಕಿಟ್‌ಗಳು ಲಭ್ಯವಿರುವುದಿಲ್ಲ ಎನ್ನುವ ಫಲಕ ರಾರಾಜಿಸ್ತಾ ಇದೆ. ಇನ್ನು ಸರ್ಕಾರಕ್ಕೆ ಈ ಸಂಬಂಧ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top