Saturday, 22nd September 2018  

Vijayavani

‘ದಂಗೆ’ ಬಿಸಿ ತಟ್ಟುತ್ತಿದ್ದಂತೆ ದೇವರ ಸ್ತುತಿ - ಶಾರದಂಬೆ ಸನ್ನಿಧಿಯಲ್ಲಿ ಎಚ್​​ಡಿಕೆ - ಸಿಎಂಗೆ ಅಣ್ಣ ರೇವಣ್ಣ ಸಾಥ್​        ರಾಜ್ಯ ರಾಜಕೀಯ ಹಾಸನಕ್ಕೆ ಶಿಫ್ಟ್​ - ಇಂದು ಹಾಸನದಲ್ಲಿ ಜೆಡಿಎಲ್​​ಪಿ ಮೀಟಿಂಗ್​ - ದಳನಾಯಕರಿಂದ ರಣತಂತ್ರದ ಚರ್ಚೆ        ಸಿಎಂ ದಂಗೆ ಹೇಳಿಕೆ ವಿರುದ್ಧ ಬಿಜೆಪಿ ಆಕ್ರೋಶ - ಇಂದು ಕೂಡ ಹಲವೆಡೆ ಹೋರಾಟ ಸಂಭವ        ಇಂದು ಚಿಕ್ಕಮಗಳೂರಲ್ಲಿ ಸಿಎಂ ಮೀಟಿಂಗ್​ - ಅತಿವೃಷ್ಟಿ, ಅನಾವೃಷ್ಟಿ ಕುರಿತು ಚರ್ಚೆ - ಸಿಎಂಗೆ ವರದಿ ನೀಡಲಿರುವ ಡಿಸಿ        ರಾಫೆಲ್​​ ವಿಮಾನ​​​​ ಖರೀದಿ ಹಗರಣ - ಭಾರತವೇ ಅನಿಲ್​ ಅಂಬಾನಿ ಹೆಸರು ಸೂಚಿಸಿತ್ತು - ವಿವಾದಕ್ಕೆ ತುಪ್ಪ ಸುರಿದ ಹೊಲೆಂಡೆ ಹೇಳಿಕೆ        ಭುಗಿಲೆದ್ದಿರುವ ರಫೇಲ್​​ ಡೀಲ್​ ಹಗರಣ - ಪ್ರಕಟಣೆ ಹೊರಡಿಸಿದ ಫ್ರಾನ್ಸ್​​ ಸರ್ಕಾರ - ಕಂಪನಿಗಳ ಮೇಲೆ ಹಸ್ತಕ್ಷೇಪ ಇಲ್ಲವೆಂದು ಸ್ಪಷ್ಟನೆ       
Breaking News

‘ಬಾಣೆ ಜಾಗ’ ಕಂದಾಯ ಹಕ್ಕುದಾರಿಕೆ ಇಲ್ಲ

Thursday, 14.06.2018, 5:19 AM       No Comments

ಮಡಿಕೇರಿ: ಅರಣ್ಯ ಇಲಾಖೆಗೆ ಸೇರಿದ ಬಾಣೆ ಜಾಗದ ಮೇಲೆ ಕಂದಾಯ ಇಲಾಖೆಗೆ ಯಾವುದೇ ಹಕ್ಕುದಾರಿಕೆ ಇಲ್ಲ. ಇದುವರೆಗೂ ಹಕ್ಕುದಾರಿಕೆ ಸ್ಥಾಪಿಸಿರುವುದು ಕಾನೂನು ಬಾಹಿರ ಎಂದು ರಾಜ್ಯ ಲೆಕ್ಕಪರಿಶೋಧಕ ಇಲಾಖೆ ಆಕ್ಷೇಪ ವ್ಯಕ್ತ ಪಡಿಸಿದೆ. ಬಾಣೆ ಜಾಗಕ್ಕೆ ಸಂಬಂಧಿಸಿದಂತೆ ಐವರು ಜಿಲ್ಲಾಧಿಕಾರಿಗಳು ತೆಗೆದುಕೊಂಡ ಕ್ರಮಕ್ಕೆ ಆಕ್ಷೇಪ ವ್ಯಕ್ತ ಪಡಿಸಿದೆ.

ಅರಣ್ಯ ಇಲಾಖೆಗೆ ಸೇರಿದ ಬಾಣೆ ಜಾಗದ ಮೇಲೆ ಕಂದಾಯ ಇಲಾಖೆಗೆ ಯಾವುದೇ ಹಕ್ಕುದಾರಿಕೆ ಮತ್ತು ವ್ಯಾಪ್ತಿ ಇರುವುದಿಲ್ಲ. ಬಾಣೆ ಜಾಗಕ್ಕೆ ಕಂದಾಯ ಇಲಾಖೆ ಕಂದಾಯ ನಿಗದಿಪಡಿಸಿರುವುದು, ಭೂ ಪರಿವರ್ತನೆ ಮಾಡಿರುವುದು ಮತ್ತು ಮಾರಾಟ ಮಾಡಲು ಅವಕಾಶ ನೀಡಿರುವುದು ವ್ಯಾಪ್ತಿ ಮೀರಿದ ಕ್ರಮ. ಜಿಲ್ಲಾಧಿಕಾರಿಗಳು ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಉಲ್ಲಂಘಿಸಿ ಕಾಫಿ ಬೆಳೆದಿರುವ ಸರ್ಕಾರಿ ಜಾಗವನ್ನು ಭೂ ಪರಿವರ್ತನೆ ಮಾಡಲು ಅನುಮತಿ ಕೊಟ್ಟಿದ್ದಾರೆಂದು ತಗಾದೆ ತೆಗೆಯಲಾಗಿದೆ.

ಕೊಡಗಿನ ಜಾಗಕ್ಕೆ ಸಂಬಂಧಿಸಿದಂತೆ 4 ಭಾಗ ಮಾಡಲಾಗಿದೆ. ರಾಜರ ಆಳ್ವಿಕೆ ಕಾಲಘಟ್ಟದ ಜಾಗ (1886 ಕ್ಕೆ ಹಿಂದೆ), ಬ್ರಿಟಿಷ್ ಆಳ್ವಿಕೆ ಅವಧಿಯಲ್ಲಿನ ಜಾಗ (1886 ರಿಂದ 1899), ಕೂರ್ಗ್ ಭೂಮಿ ಮತ್ತು ಕಂದಾಯ ಕಾಯ್ದೆ ವ್ಯಾಪ್ತಿಯ ಜಾಗ (1899 ರಿಂದ 1964) ಹಾಗೂ 1964 ರ ಕರ್ನಾಟಕ ಭೂ ಕಂದಾಯ ಕಾಯ್ದೆ ಜಾರಿಗೆ ಬಂದ ನಂತರದ ಜಾಗ ಎಂದು ವಿಂಗಡಿಸಲಾಗಿದೆ.

ರಾಜರ ಮತ್ತು ಈಸ್ಟ್ ಇಂಡಿಯಾ ಕಂಪೆನಿ(ಬ್ರಿಟಿಷ್) ಆಳ್ವಿಕೆ ಕಾಲದಲ್ಲಿ ತಮ್ಮ ಸೇನೆಯಲ್ಲಿದ್ದವರಿಗೆ ಜಮ್ಮಾ, ಸಾಗು, ಉಂಬಳಿ, ಜಹಗೀರ್ ಜಾಗ ನೀಡಲಾಗಿತ್ತು. ಜಮ್ಮಾ ಮತ್ತು ಸಾಗು ಭೂಮಿ ಕೃಷಿಗೆ ಯೋಗ್ಯವಾದ ಜಮೀನಾಗಿತ್ತು. ಸಾಗು ಜಾಗಕ್ಕೆ ಶೇ.100ರಷ್ಟು ಕಂದಾಯ ನಿಗದಿ ಪಡಿಸಲಾಗಿತ್ತು. ಜಮ್ಮಾ ಜಾಗದ ಮೇಲೆ ಶೇ.50 ರಷ್ಟು ಮಾತ್ರ ಕಂದಾಯ ನಿಗದಿಪಡಿಸಲಾಗಿತ್ತು.

ಜಮ್ಮಾ ಮತ್ತು ಸಾಗು ಜಾಗದ ಸಮೀಪದಲ್ಲಿದ್ದ ಅರಣ್ಯ ಜಾಗದಲ್ಲಿನ ಸೊಪ್ಪು, ಸೌದೆ ತೆಗೆಯುವ ಸೀಮಿತ ಹಕ್ಕುದಾರಿಕೆಯೊಂದಿಗೆ ಅರಣ್ಯ ಜಾಗ ಹಿಡುವಳಿದಾರರಿಗೆ ನೀಡಲಾಗಿತ್ತು ಮತ್ತು ಈ ಜಾಗಕ್ಕೆ ಕಂದಾಯ ವಿಧಿಸುತ್ತಿರಲಿಲ್ಲ. ಕೃಷಿಗೆ ಪೂರಕ ಬಳಕೆ ಮಾತ್ರ ನೀಡಲಾಗಿದ್ದ ಅರಣ್ಯ ಜಾಗ ಕಂದಾಯ ದಾಖಲೆಯಲ್ಲಿ ಜಮ್ಮಾ ಬಾಣೆ ಎಂದಾಗಿತ್ತು. ಬಾಣೆ ಜಾಗದಲ್ಲಿ ಬೆಳೆ ಬೆಳೆಯುವಂತಿರಲಿಲ್ಲ ಮತ್ತು ಹಿಡುವಳಿದಾರರಿಗೆ ಹಕ್ಕುದಾರಿಕೆ ಇರಲಿಲ್ಲ.

ಬಾಣೆ ಜಾಗದಲ್ಲಿನ ಮರ ಸರ್ಕಾರಕ್ಕೆ ಸೇರಿದ್ದು, ಹಿಡುವಳಿದಾರರ ಸ್ವಂತ ಬಳಕೆಗೆ ಮರ (ಶ್ರೀಗಂಧ ಹೊರತು ಪಡಿಸಿ) ಬಳಸಿಕೊಳ್ಳಬಹುದಾಗಿತ್ತು. 1899ರೊಳಗೆ ಬಾಣೆ ಜಾಗದಲ್ಲಿ ಬೆಳೆ ಬೆಳೆದಿದ್ದಲ್ಲಿ ಭೂ ಕಂದಾಯ ನಿಗದಿ ಪಡಿಸಲು ಅವಕಾಶ ನೀಡಲಾಗಿತ್ತು. 1899 ರಿಂದ 1964ರ ಅವಧಿಯಲ್ಲಿ ಉಪವಿಭಾಗಾಧಿಕಾರಿಯಿಂದ ಅನುಮತಿ ಪಡೆದು ಬೆಳೆ ಬೆಳೆದಿದ್ದಲ್ಲಿ ಶೇ.20 ರಷ್ಟು ಭೂ ಕಂದಾಯ ನಿಗದಿ ಪಡಿಸಲು ತೀರ್ಮಾನಿಸಲಾಗಿತ್ತು.

1964 ರಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ ಜಾರಿಗೆ ಬಂದ ಮೇಲೆ ಬೆಳೆ ಬೆಳೆಯದ ಜಾಗಕ್ಕೆ ಕಂದಾಯ ನಿಗದಿಪಡಿಸುವಂತಿರಲಿಲ್ಲ. 1964 ರೊಳಗೆ ಕಂದಾಯ ನಿಗದಿ ಪಡಿಸದಿರುವ ಮತ್ತು ಬೆಳೆ ಬೆಳೆಯದಿರುವ ಬಾಣೆ ಜಾಗ ಸರ್ಕಾರಕ್ಕೆ ಸೇರಿದ್ದಾಗಿತ್ತು. ಬಾಣೆ ಜಾಗದದ ಹಕ್ಕುದಾರಿಕೆ ಪಡೆಯಲು ಮತ್ತು ನೀಡಿದ ಉದ್ದೇಶಕ್ಕೆ ವ್ಯತಿರಿಕ್ತವಾಗಿ ಬಳಸಲು ಅವಕಾಶವಿಲ್ಲ. ಅನ್ಯ ಉದ್ದೇಶಕ್ಕೆ ಬಳಸುವ ಮುನ್ನ ಡಿಸಿಯಿಂದ ಅನುಮತಿ ಪಡೆಯಬೇಕಾಗಿತ್ತು. ಕೃಷಿ ಚುಟವಟಿಕೆಗೆ ಪೂರಕವಾಗಿ ಬಳಸಲು ನೀಡಿದ್ದ ಜಾಗದಲ್ಲಿ ಕಾಫಿ ಬೆಳೆಯುವಂತಿರಲಿಲ್ಲ.

Leave a Reply

Your email address will not be published. Required fields are marked *

Back To Top