Thursday, 18th October 2018  

Vijayavani

ಅಭಿಮಾನಿಗಳ ಪಾಲಿಗೆ ಮಳೆರಾಯನೇ ವಿಲನ್​​​​​​​​​-ದಾವಣಗೆರೆಲಿ ಮುಂಜಾನೆಯ ಚಿತ್ರ ಪ್ರದರ್ಶನ ರದ್ದು- ಆಯುಧಪೂಜಾ ಸಂಭ್ರಮ ಮಂಕು        ಶಿವಮೊಗ್ಗದಲ್ಲೂ ವಿಲನ್​​ ಚಿತ್ರಕ್ಕೆ ಬ್ರೇಕ್​-ಮಧ್ಯರಾತ್ರಿ ಪ್ರದರ್ಶನಕ್ಕೆ ಪೊಲೀಸರ ಅಡ್ಡಿ-ಥಿಯೇಟರ್​​​​​ ಬಳಿ ಅಭಿಮಾನಿಗಳ ಜಾಗರಣೆ        ನಾಡಿನಾದ್ಯಂತ ನವರಾತ್ರಿ ವೈಭವ-ಇಂದು ಆಯುಧಪೂಜೆ ಸಂಭ್ರಮ-ಅತ್ತ ಅರಮನೆಯಲ್ಲಿ ಶಸ್ತ್ರಾಸ್ತ್ರ ಪೂಜೆಗೆ ಕ್ಷಣಗಣನೆ        ಯುವದಸರಾಗೆ ಬಿತ್ತು ಅದ್ಧೂರಿ ತೆರೆ-ರಾಕಿಂಗ್​​ ಸ್ಟಾರ್​ ಡೈಲಾಗ್​​ಗೆ ಫುಲ್​​​ ಖುಷ್​-ಕೊನೆ ದಿನ ಕುಣಿದು ಕುಪ್ಪಳಿಸಿದ ಯುವಕರು        ಲಿಂಗಾಯತ ಪ್ರತ್ಯೇಕ ಧರ್ಮ ತಪ್ಪು-ಧರ್ಮ, ಜಾತಿ ವಿಚಾರಕ್ಕೆ ಸರ್ಕಾರ ಕೈ ಹಾಕಬಾರದು-ತಪ್ಪೊಪ್ಪಿಕೊಂಡ ಸಚಿವ ಡಿಕೆಶಿ        ಅಂಬಿ ಮನೆಗೆ ಮಂಡ್ಯ ಜೆಡಿಎಸ್​​​​ ಕ್ಯಾಂಡಿಡೇಟ್​-ಕ್ಯಾಂಪೇನ್​​​​ಗೆ ಬರುವಂತೆ ರೆಬಲ್​ಗೆ​​​​​​ ಇನ್ವೇಟ್​-ಅಶೀರ್ವಾದ ಪಡೆದ ಶಿವರಾಮೇಗೌಡ       
Breaking News

ಇತ್ತೀಚೆಗಂತೂ ಯಾವ ತನಿಖಾಧಿಕಾರಿಗಳು ನಮ್ಮನ್ನು ಸಂಪರ್ಕಿಸಿಲ್ಲ: ಕಲಬುರಗಿ ಪತ್ನಿ

Tuesday, 12.06.2018, 6:46 PM       No Comments

ಧಾರವಾಡ: ಕಲಬುರಗಿ ಹಂತಕರನ್ನು ಪತ್ತೆ ಮಾಡಲು ರಚಿಸಲಾಗಿರುವ ತನಿಖಾ ತಂಡದ ಯಾವೊಬ್ಬ ಅಧಿಕಾರಿಗಳು ಇತ್ತೀಚೆಗೆ ನಮ್ಮನ್ನು ಸಂಪರ್ಕಿಸಿಲ್ಲ. ಹೊಸ ಸರ್ಕಾರ ಬಂದಿದೆ. ಈ ಸರ್ಕಾರವಾದರೂ ಹಂತಕರನ್ನು ಪತ್ತೆ ಮಾಡಲಿ ಎಂದು ಸಂಶೋಧಕ ಎಂ.ಎಂ. ಕಲಬುರಗಿ ಪತ್ನಿ ಉಮಾದೇವಿ ಹೇಳಿದ್ದಾರೆ.

ಗೌರಿ ಹತ್ಯೆ ಆರೋಪಿಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಉಮಾದೇವಿ ಅವರು, ” ಹಿಂದೆ ಪರಮೇಶ್ವರ ಅವರು ಗೃಹ ಮಂತ್ರಿಯಾಗಿದ್ದರು. ಈಗಲೂ ಅವರೇ ಆಗಿದ್ದಾರೆ. ಹೊಸ ಸರ್ಕಾರವಾದರೂ, ಹಂತಕರನ್ನು ಬಂಧಿಸಲಿ. ಇತ್ತೀಚೆಗಂತೂ ತನಿಖಾಧಿಕಾರಿಗಳು ನಮ್ಮ ಬಳಿ ಬಂದಿಲ್ಲ. ಹಾಗಾಗಿಯೇ ತನಿಖೆ ಚುರುಕಾಗಲಿ ಎಂದು ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದೇವೆ. ಈಗಿನ ಸರ್ಕಾರ ಆದಷ್ಟು ಬೇಗ ಹಂತಕರ‌ ಪತ್ತೆ ಮಾಡಬೇಕು,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಪೊಲೀಸರಿಗೆ ಹೈಕೋರ್ಟ್​ ನೋಟಿಸ್
ಇನ್ನೊಂದೆಡೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ತಮ್ಮನ್ನು ಆರೋಪಿಗಳನ್ನಾಗಿಸಿರುವ ಪೊಲೀಸರ ಕ್ರಮ ಪ್ರಶ್ನಿಸಿ ಸುಜಿತ್, ಪ್ರವೀಣ್, ಅಮೂಲ್ ಕಾಳೆ, ಅಮಿತ್ ದಿಗ್ವೇಕರ್ ಹಾಗೂ ಮನೋಹರ್ ದುಂಡಪ್ಪ ಯವಡೆ ಸಲ್ಲಿಸಿರುವ ಅರ್ಜಿಯ ಸಂಬಂಧ ರಾಜ್ಯ ಗೃಹ ಇಲಾಖೆ, ಡಿಜಿ ಐಜಿ, ಆರ್.ಆರ್‌.ನಗರ, ಉಪ್ಪಾರಪೇಟೆ ಪೊಲೀಸರಿಗೆ ಹೈಕೋರ್ಟ್​ ನೋಟಿಸ್ ಜಾರಿಗೊಳಿಸಿದೆ.

Leave a Reply

Your email address will not be published. Required fields are marked *

Back To Top