Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ಟ್ರಂಪ್ ಭದ್ರತಾ ತಂಡಕ್ಕೆ ಮೊದಲ ಸಿಖ್ ನೇಮಕ

Thursday, 13.09.2018, 2:09 AM       No Comments

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭದ್ರತಾ ಪಡೆಗೆ ನೇಮಕವಾದ ಮೊದಲ ಟರ್ಬನ್​ಧಾರಿ ಸಿಖ್ ಎಂಬ ಹೆಗ್ಗಳಿಕೆಗೆ ಪಂಜಾಬ್​ನ ಲುಧಿಯಾನ ಮೂಲದ ಅಂಶ್​ದೀಪ್ ಸಿಂಗ್ ಭಾಟಿಯಾ ಪಾತ್ರರಾಗಿದ್ದಾರೆ.

ಭದ್ರತಾ ಪಡೆಗೆ ನೇಮಕಕ್ಕೂ ಮುನ್ನ ಭಾಟಿಯಾಗೆ ಟರ್ಬನ್, ಗಡ್ಡವನ್ನು ತೆಗೆಯುವಂತೆ ಅಧಿಕಾರಿಗಳು ಒತ್ತಾಯಿಸಿದ್ದರು. ಆದರೆ ಇದಕ್ಕೆ ಒಪ್ಪದ ಭಾಟಿಯಾ ಅಮೆರಿಕದ ಕೋರ್ಟ್ ಮೊರೆ ಹೋಗಿದ್ದರು. ಸಿಖ್ ಧಾರ್ವಿುಕ ಸಂಪ್ರದಾಯ ಪ್ರಕಾರ ಟರ್ಬನ್​ಗೆ ಇರುವ ಪ್ರಾಮುಖ್ಯತೆಯನ್ನು ಕೋರ್ಟ್​ಗೆ

ಮನವರಿಕೆ ಮಾಡಿಕೊಡುವಲ್ಲಿ ಭಾಟಿಯಾ ಯಶಸ್ವಿಯಾಗಿದ್ದರು. ಇವರ ಈ ಸಾಧನೆ ಬಗ್ಗೆ ಸಿಖ್ ಸಮುದಾಯಕ್ಕೆ ಹೆಮ್ಮೆಯಿದೆ ಎಂದು ಕೇಂದ್ರ ವಸತಿ ಸಚಿವ ಹರ್​ದೀಪ್ ಸಿಂಗ್ ಪುರಿ ಟ್ವೀಟ್​ನಲ್ಲಿ ತಿಳಿಸಿದ್ದಾರೆ. ಔಷಧ ವ್ಯಾಪಾರಿಯಾಗಿದ್ದ ಭಾಟಿಯಾ ಅವರ ತಂದೆ 2000ರಲ್ಲಿ ಅಮೆರಿಕಕ್ಕೆ ತೆರಳಿ ಕುಟುಂಬ ಸಮೇತ ನೆಲೆಸಿದ್ದರು.

Leave a Reply

Your email address will not be published. Required fields are marked *

Back To Top