Tuesday, 16th October 2018  

Vijayavani

ಜಮಖಂಡಿಯಲ್ಲಿ ಕಾಂಗ್ರೆಸ್-ಬಿಜೆಪಿ ಜಂಗೀಕುಸ್ತಿ- ಕೈ-ಕಮಲ ಅಭ್ಯರ್ಥಿಗಳಿಂದ ನಾಮಿನೇಷನ್​​ - ಬಿಎಸ್​ವೈ, ಸಿದ್ದು ಶಕ್ತಿಪ್ರದರ್ಶನ        ಗಣಿಧಣಿಗಳ ನಾಡಲ್ಲಿ ಬಿಗ್ ಫೈಟ್-ಉಗ್ರಪ್ಪ-ಶಾಂತಾರಿಂದ ಉಮೇದುವಾರಿಕೆ-ರಾಮುಲು, ಡಿಕೆಶಿ ನಡುವೆ ಅಸಲಿ ಕದನ        ಶಿವಮೊಗ್ಗ ಅಖಾಡದಲ್ಲಿ ಮಾಜಿ ಸಿಎಂ ಪುತ್ರರ ಸಮರ-ಇಂದು ಮಧು ಬಂಗಾರಪ್ಪ ನಾಮಪತ್ರ-ಜೆಡಿಎಸ್‌ ಅಭ್ಯರ್ಥಿಗೆ ಕಾಂಗ್ರೆಸ್ ಸಾಥ್        ಮಂಡ್ಯ ಲೋಕಸಭಾ ಚುನಾವಣೆ ಕದನ-ಇಂದು ಬಿಎಸ್​​ವೈ, ಎಚ್​ಡಿಕೆಯಿಂದ ಪ್ರಚಾರ-ದೋಸ್ತಿಗೆ ಸೆಡ್ಡು ಹೊಡೆಯಲು ಕಮಲ ಪ್ಲಾನ್​​        ರಾಮನಗರದಲ್ಲಿ ಕೋಟ್ಯಧಿಪತಿಗಳ ಕಾರುಬಾರು-ಸಿಎಂ ಪತ್ನಿ 127 ಕೋಟಿ ರೂ. ಒಡತಿ-ನಾನೇನು ಕಮ್ಮಿನಾ ಅಂತಿದ್ದಾರೆ ಚಂದ್ರಶೇಖರ್        ಬೈ ಎಲೆಕ್ಷನ್​ ಟೆನ್ಷನ್​ ಮಧ್ಯೆಯೇ ಡಿಸಿಎಂ ವರ್ಕಿಂಗ್​​-ಹುಬ್ಬಳ್ಳಿ ಠಾಣೆಗೆ ದಿಢೀರ್ ವಿಸಿಟ್​​​​​​​​​​-ಬೀಟ್ ಸಿಸ್ಟ್ಂ ಬಗ್ಗೆ ಪೊಲೀಸ್ ಸಿಬ್ಬಂದಿಗೆ ಪಾಠ       
Breaking News

ಐ ಲವ್‌ ಇಂಡಿಯಾ, ಗೆಳೆಯ ಮೋದಿಗೂ ಶುಭಾಶಯ ತಿಳಿಸಿ: ಡೊನಾಲ್ಡ್‌ ಟ್ರಂಪ್

Tuesday, 25.09.2018, 7:52 AM       No Comments

ನ್ಯೂಯಾರ್ಕ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ವಿಶೇಷ ಒಲವನ್ನು ಹೊಂದಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತೊಮ್ಮೆ ಮೋದಿಗೆ ಶುಭಾಶಯ ತಿಳಿಸುವಂತೆ ಹೇಳಿದ್ದಾರೆ.

ಯುನೈಟೆಡ್​ ನೇಷನ್ಸ್​​ನಲ್ಲಿ ನಡೆಯುತ್ತಿರುವ ಮಾದಕ ದ್ರವ್ಯದ ವಿರುದ್ಧದ ಜಾಗತಿಕ ಮಟ್ಟದ ಸಭೆಯಲ್ಲಿ ಭಾಗಿಯಾಗಿದ್ದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್​ ಅವರನ್ನು ಅಮೆರಿಕ ರಾಯಭಾರಿ ನಿಕ್ಕಿ ಹಾಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ.

ಈ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನಿಮಗೆ ಶುಭಾಶಯ ತಿಳಿಸಲು ಹೇಳಿದ್ದಾರೆ ಎಂದು ಸುಷ್ಮಾ ಹೇಳಿದ್ದೇ ತಡ, ಟ್ರಂಪ್‌ ಕೂಡ ನಾನು ಭಾರತವನ್ನು ಪ್ರೀತಿಸುತ್ತೇನೆ. ನನ್ನ ಶುಭಾಶಯಗಳನ್ನು ನನ್ನ ಸ್ನೇಹಿತ ಪ್ರಧಾನಿ ಮೋದಿಗೆ ತಿಳಿಸಿಬಿಡಿ ಎಂದು ಹೇಳಿದ್ದಾರೆ.

ನ್ಯೂಯಾರ್ಕ್‌ನಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ 73ನೇ ಅಧಿವೇಶನದಲ್ಲಿ ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷತೆಯಲ್ಲಿ ನಡೆದ ವಿಶ್ವ ಮಾದಕ ದ್ರವ್ಯ ಸಮಸ್ಯೆ ಕುರಿತ ಉನ್ನತ ಮಟ್ಟದ ಸಭೆಯಲ್ಲಿ ಸುಷ್ಮಾ ಸ್ವರಾಜ್‌ ಭಾಗಿಯಾಗಿದ್ದರು.

ಕಳೆದ ವರ್ಷ ಜೂನ್‌ನಲ್ಲಿ ಭಾರತದ ಪ್ರಧಾನಿ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ ವೇಳೆ ವೈಟ್‌ಹೌಸ್‌ನಲ್ಲಿ ಮೋದಿಗೆ ಔತಣ ಕೂಟ ಏರ್ಪಡಿಸಲಾಗಿತ್ತು. ಟ್ರಂಪ್‌ ಅಧ್ಯಕ್ಷತೆಯಲ್ಲಿ ಮೊದಲ ವಿದೇಶಿ ಗಣ್ಯರಿಗೆ ವೈಟ್‌ ಹೌಸ್‌ನಲ್ಲಿ ಔತಣ ಏರ್ಪಡಿಸಿದ್ದಾಗಿ ವೈಟ್‌ ಹೌಸ್‌ ಹೇಳಿತ್ತು.

ಇದಾದ ಬಳಿಕ ಟ್ರಂಪ್‌, ಮೋದಿ ನನ್ನ ನಿಜವಾದ ಸ್ನೇಹಿತ ಎಂದು ಬಣ್ಣಿಸಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ಫಿಲಿಫೈನ್ಸ್‌ನಲ್ಲಿ ನಡೆದ ಏಷಿಯಾನ್‌ ಶೃಂಗಸಭೆಯಲ್ಲಿ ಮೋದಿ ಮತ್ತು ಟ್ರಂಪ್‌ ಕೊನೆಯ ಬಾರಿಗೆ ಭೇಟಿಯಾಗಿದ್ದರು. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top