Saturday, 24th March 2018  

Vijayavani

ಸಿಎಂ ತವರಿನಲ್ಲಿ AICC ಅಧ್ಯಕ್ಷರ ಸವಾರಿ- ಮೈಸೂರಿನಲ್ಲಿ ಎರಡು ದಿನ ರಾಹುಲ್ ರ‍್ಯಾಲಿ- ನಾಲ್ಕನೇ ಯಾತ್ರೆಗೆ ಸಜ್ಜಾಯ್ತು ಸಾಂಸ್ಕೃತಿಕ ನಗರಿ        ರಾಜ್ಯಸಭೆ ಚುನಾವಣೆ ಮುಗೀತಿದ್ದಂಗೆ ರಿಸೈನ್​ಗೆ ನಿರ್ಧಾರ- ಜೆಡಿಎಸ್​ಗೆ ರೆಬೆಲ್ಸ್ ಇಂದು ಗುಡ್​ಬೈ- ನಾಳೆ ರಾಹುಲ್​ ಸಮುಖದಲ್ಲಿ ಕೈಗೆ ಜೈ        ಫಲ್ಗುಣಿ ನದಿ ಒಡಲಿಗೆ ರಾಜರೋಷವಾಗಿ ಕನ್ನ- ಬೋಟ್​​ಗಟ್ಟಲೇ ಮರಳು ಲೂಟಿ- ಕಣ್ಣಿದ್ದು ಕುರುಡಾದ ಜಿಲ್ಲಾಡಳಿತ        ಜಿಲ್ಲಾ ಪಂಚಾಯತ್​​ನಲ್ಲೇ​​ ಶುರುವಾಗಿದೆ ನೀರಿಗೆ ಬರ- ಮಳೆನೀರು ಕೊಯ್ಲು ಅಳವಡಿಸಿದ್ರೂ ಜೀವಜಲಕ್ಕೆ ತತ್ವಾರ- ಧಾವಾಡ ZP ಕಚೇರಿಯಲ್ಲಿ ಇದೆಂಥ ನರಕ        ರಜನಿಕಾಂತ್ ಓದಿದ ಶಾಲೆಗೆ ನ್ಯೂ ಲುಕ್​- ಖಾಸಗಿ ಶಾಲೆಗೂ ಸೆಡ್ಡು ಹೊಡೆಯುತ್ತೆ ಫೆಸಿಲಿಟೀಸ್- ಸೂಪರ್ ಶಾಲೆ ಇಂದು ಉದ್ಘಾಟನೆ       
Breaking News

ಮತ್ತೊಂದು ಬ್ಯಾಂಕ್ ಹಗರಣ: 2,919 ಕೋಟಿ ರೂ. ವಂಚಿಸಿದ ರೋಟೊಮ್ಯಾಕ್​ ವಿರುದ್ಧ ಸಿಬಿಐ ಪ್ರಕರಣ

Monday, 19.02.2018, 6:38 PM       No Comments

<<ನೀರವ್​ ಮೋದಿ ಪಿಎನ್​ಬಿ ಪ್ರಕರಣವನ್ನೇ ಹೋಲುವ ಮತ್ತೊಂದು ಲೋನ್​ ವಂಚನೆ >>

ನವದೆಹಲಿ: ವಿವಿಧ ಬ್ಯಾಂಕುಗಳಲ್ಲಿ 2,919 ಕೋಟಿ ರೂ. (454.39 ಮಿಲಿಯನ್​ ಡಾಲರ್​) ಸಾಲ ಪಡೆದು ವಂಚಿಸಿರುವ ಕುರಿತು ಪೆನ್​ ತಯಾರಕ ಕಂಪನಿ ರೋಟೊಮ್ಯಾಕ್​ ಗ್ಲೋಬಲ್​ ಅಂಡ್​ ಅಫೀಶಿಯಲ್ಸ್​ ಪ್ರೈವೇಟ್​ ಲಿ. ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಸಿಬಿಐ ಸೋಮವಾರ ತಿಳಿಸಿದೆ.

ರೋಟೊಮ್ಯಾಕ್​ ಪ್ರಕರಣದಲ್ಲಿ ಸಿಬಿಐ ಉಲ್ಲೇಖಿಸಿರುವಂತೆ ಈ ಸಂಸ್ಥೆ ಏಳು ವಿವಿಧ ಬ್ಯಾಂಕುಗಳಲ್ಲಿ 29.19 ಬಿಲಿಯನ್​ ರೂಪಾಯಿಯಷ್ಟು ಹಣ ಕಬಳಿಸಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸಿಬಿಐ ದೂರಿಗೆ ಪ್ರತಿಕ್ರಿಯಿಸಿರುವ ರೋಟೊಮ್ಯಾಕ್​ ನಿರ್ದೇಶಕ ವಿಕ್ರಮ್​ ಕೊಠಾರಿ, ನಾನು ಬ್ಯಾಂಕುಗಳಿಂದ ಲೋನ್​ ಪಡೆದಿರುವುದು ಸತ್ಯ. ಆದರೆ, ಅದನ್ನು ಮರುಪಾವತಿಸಿಲ್ಲ ಎಂಬುದು ಶುದ್ಧ ಸುಳ್ಳು ಎಂದು ಅವರ ವಿರುದ್ಧ ದಾಖಲಾಗಿರುವ ದೂರನ್ನು ಅಲ್ಲಗಳೆದಿದ್ದಾರೆ.

ನೀರವ್​ ಮೋದಿ ಅವರ ಬಹುಕೋಟಿ ವಂಚನೆ ಹಗರಣದ ತನಿಖೆಯನ್ನು ಸಿಬಿಐ ನಡೆಸುತ್ತಿರುವ ಸಂದರ್ಭದಲ್ಲೇ ಬ್ಯಾಂಕ್​ ಆಫ್​ ಬರೋಡ ಮತ್ತಿತರ ಬ್ಯಾಂಕ್​ಗಳಿಗೆ ಸಾವಿರಾರು ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

Leave a Reply

Your email address will not be published. Required fields are marked *

Back To Top