Wednesday, 28th June 2017  

Vijayavani

1. ಜಿಎಸ್​​ಟಿ ಜಾರಿಗೆ ಸಜ್ಜಾಗ್ತಿದೆ ಕೇಂದ್ರ ಸರ್ಕಾರ- ಜೂನ್​ 30ರ ಮಧ್ಯರಾತ್ರಿ ಅಧಿವೇಶನಕ್ಕೆ ಇಂದು ರಿಹರ್ಸಲ್​- ಸಂದೇಹ ನಿವಾರಣೆಗೆ ವಾರ್​ ರೂಂ 2. ಜಗತ್ತಿನಾದ್ಯಂತ ಮತ್ತೆ ಸೈಬರ್ ದಾಳಿ- ಪೆಟ್ಯಾ ರಾನ್ಸೋಮ್ವೇರ್​ಗೆ ಯುರೋಪ್ ತತ್ತರ- ಭಾರತದ ಐಟಿ ಕಂಪನಿಗಳಿಗೂ ಶುರುವಾಯ್ತು ಭೀತಿ 3. ಆರ್​ಜೆಡಿ ನಾಯಕರ ವಿರುದ್ಧ ಹೆಚ್ಚಿದ ಭ್ರಷ್ಟಾಚಾರ ಆರೋಪ- ಲಾಲು ಮೇಲೆ ನಿತೀಶ್ ಕುಮಾರ್​ ಮುನಿಸು- ಮುರಿದು ಬೀಳುತ್ತಾ ಮಹಾಘಟಬಂಧನ 4. ತೀವ್ರ ಕುತೂಹಲ ಕೆರಳಿಸಿದ ಸಂಪುಟ ವಿಸ್ತರಣೆ- ಇಂದು ಹೈ ಕಮಾಂಡ್​ ಜತೆ ಸಿಎಂ ಮಾತುಕತೆ- ಯಾರಿಗೆ ಒಲಿಯುತ್ತೆ ಗೃಹಖಾತೆ 5. ಅವನು ಅಪ್ಪಾನಾ ಇಲ್ಲಾ ಇವನು ಅಪ್ಪಾನಾ- ತಂದೆಯ ಅವಳಿ ಸೋದರನ ಕಂಡು ಮಗು ಕನ್ಪ್ಯೂಸ್- ಕಂದನ ವಿಡಿಯೋ ಸಖತ್ ವೈರಲ್
Breaking News :

ಕಾರಿನ ಮೇಲೆ ಕಾಲಿಟ್ಟು ಗರ್ಜಿಸಿತು ಬನ್ನೇರುಘಟ್ಟ ಸಿಂಹ!

Tuesday, 31.01.2017, 6:29 PM       No Comments

ಆನೇಕಲ್: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಫಾರಿಯಲ್ಲಿ ಸಿಂಹವೊಂದು ಸಫಾರಿ ವಾಹನವನ್ನು ತಡೆದು ನಿಲ್ಲಿಸಿ ಅರೆ ಕ್ಷಣ ಕಾರಿನಲ್ಲಿದ್ದ ಪ್ರವಾಸಿಗರನ್ನು ಕಂಗಾಲಾಗಿಸಿದ ಘಟನೆ ನಡೆದಿದೆ.

ಬನ್ನೇರುಘಟ್ಟ ಉದ್ಯಾನವನದಲ್ಲಿ ಹುಲಿ ಮತ್ತು ಸಿಂಹಗಳನ್ನು ತೋರಿಸಲು ಸಫಾರಿ ವಿಷೇಶ ಬಸ್​ನಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತಾರೆ. ಹಾಗೇ ವಿಐಪಿ ವಾಹನವನ್ನೂ ಸಫಾರಿಗೆ ಬಳಸಿಕೊಳ್ಳುತ್ತಾರೆ. ಅದರಂತೆ ಮಂಗಳವಾರ ಈ ಸೇವೆ ಬಯಸಿ ಸಫಾರಿಗೆ ತೆರಳಿದ ವಾಹನದ ಮೇಲೆ ಸಿಂಹವೊಂದು ತನ್ನೆರಡು ಕಾಲುಗಳನ್ನು ಇರಿಸಿ ಒಳಗಡೆಯಲ್ಲಿ ಯಾರಿದ್ದಾರೆ ಎಂದು ಎರಗಿ ನೋಡಿದೆ. ಅಷ್ಟೇ ಅಲ್ಲ, ವಾಹನವನ್ನು ಮುಂದಕ್ಕೆ ಹೋಗದಂತೆ ತಡೆದಿದೆ.

ಇದರಿಂದ ಕಾರಿನೊಳಗಿದ್ದ ಪ್ರವಾಸಿಗರು ಸಿಂಹದ ಆರ್ಭಟ ನೋಡಿ ಅರೆಕ್ಷಣ ಕಟ್ಟುಸಿರು ಬಿಟ್ಟು ಪೇಜಿಗೆ ಸಿಲುಕಿಕೊಂಡವರಂತೆ ನಿಂತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಘಟನೆಯಿಂದಾಗಿ ವಿಐಪಿ ಸೇವೆ ಪಡೆದು ಹೋಗುವ ಪ್ರವಾಸಿಗರು ತಮಗೆ ಯಾವುದೇ ರಕ್ಷಣೆ ಇರುವುದಿಲ್ಲ ಎನ್ನುವ ಆರೋಪವನ್ನೂ ಮಾಡಿದ್ದಾರೆ. ಸಹಜವಾಗಿಯೇ ಇದೀಗ ಸಾಕಷ್ಟು ವೈರಲ್ ಆಗುತ್ತಿದೆ.

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)

Leave a Reply

Your email address will not be published. Required fields are marked *

5 × four =

Back To Top