More

    ವಕೀಲರಿಂದ ಕಲಾಪ ಬಹಿಷ್ಕಾರ

    ಚಾಮರಾಜನಗರ: ಜನನ ಮತ್ತು ಮರಣ ಕಾಯ್ದೆಡಿ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರ ಕಾರ‌್ಯವ್ಯಾಪ್ತಿಯನ್ನು ಸಿವಿಲ್ ನ್ಯಾಯಾಲಯದಿಂದ ಕಂದಾಯ ಇಲಾಖೆಯ ಉಪ-ವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ವರ್ಗಾಯಿಸಲಿರುವ ಸರ್ಕಾರದ ಕ್ರಮವನ್ನು ಖಂಡಿಸಿ ನಗರದ ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

    ಜಿಲ್ಲಾ ವಕೀಲರ ಸಂಘದಲ್ಲಿ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಅಧ್ಯಕ್ಷತೆಯಲಿ ್ಲಸರ್ವ ಸದಸ್ಯರ ಸಭೆ ಕರೆದು ಸರ್ಕಾರದ ಕ್ರಮವನ್ನು ಖಂಡಿಸಲಾಯಿತು. ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮಾತನಾಡಿ, ಜನನ ಮತ್ತು ಮರಣ ಕಾಯ್ದೆಯ ಪ್ರಕರಣಗಳನ್ನು ಇತ್ಯರ್ಥ ಅಕಾರವನ್ನು ಉಪ- ವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ವರ್ಗಾಯಿಸುವ ಸರ್ಕಾರದ ಕ್ರಮ ಸರಿಯಾದುದ್ದಲ್ಲ. ಇದರಿಂದ ಕಕ್ಷಿದಾರರಿಗೆ ತುಂಬಾ ಅನ್ಯಾಯವಾಗುತ್ತದೆ. ಜನಸಮಾನ್ಯರಿಗೆ ಇದರಿಂದ ತೊಂದರೆಯಾಗಲಿದೆ. ಹಾಗೂ ಭ್ರಷ್ಟಾಚಾರಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದಂತಾಗುತ್ತದೆ. ಆದರಿಂದ ಸರ್ಕಾರ ಈ ಕೂಡಲೇ ಮಾಡಿರುವ ಆದೇಶವನ್ನು ಹಿಂಪಡೆಯಬೇಕು ಇಲ್ಲದಿದ್ದಲ್ಲಿ ವಕೀಲರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎಸ್.ಮಂಜು, ಪ್ರಧಾನ ಕಾರ್ಯದರ್ಶಿ ಎನ್.ಕೆ.ವಿರುಪಾಕ್ಷಸ್ವಾಮಿ, ಖಜಾಂಚಿ ಆರ್.ಗಿರೀಶ್, ಜಂಟಿ ಕಾರ್ಯದರ್ಶಿ ಮಲ್ಲು, ವಕೀಲರಾದ ಪುಟ್ಟರಾಜು, ವೈ.ಎಂ.ಜಗದೀಶ್, ವಿ.ನಾಗರಾಜೇಂದ್ರ, ಎ.ರಮೇಶ್, ಹೆಚ್.ಎನ್.ಲೋಕೇಶ್, ಆರ್.ಅರುಣ್‌ಕುಮಾರ್.ಸಿ.ಚಿನ್ನಸ್ವಾಮಿ, ಎಂ.ಶಿವರಾಮ್, ಕೆ.ಪಿ.ನಾಗರಾಜು, ವಿದ್ಯಾಲತಾ, ನಾಗಮ್ಮ, ರಾಜೇಶ್ವರಿ, ನವೀನ್‌ಕುಮಾರ್, ಮಹದೇವಸ್ವಾಮಿ, ಮಾದೇಶ್, ವಿಶ್ವನಾಥ್, ಗಂಗಾಧರ್, ಯೋಗೇಶ್, ಆರ್.ರಂಗಸ್ವಾಮಿ ಮಹಲಿಂಗಸ್ವಾಮಿ, ಶಿವಕುಮಾರ್ ಮತ್ತು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts