Monday, 19th March 2018  

Vijayavani

ಸಿಎಂ ಧರ್ಮ, ಸಂಸ್ಕೃತಿಗೆ ಧಕ್ಕೆ ತಂದಿದ್ದಾರೆ- ಅವರ ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸ್ತಾರೆ- ಸಿದ್ದರಾಮಯ್ಯ ವಿರುದ್ಧ ರಂಭಾಪುರ ಶ್ರೀ ಗರಂ        ಪ್ರತ್ಯೇಕ ಧರ್ಮದ ಬಗ್ಗೆ ಸಿಎಂ ಜಾಣ ಮೌನ- ಸಭೆ ಬಳಿಕ ಪ್ರತಿಕ್ರಿಯೆ ನೀಡಲು ನಕಾರ- ಮಾಧ್ಯಮ ಕಂಡು ಮುಖ್ಯಮಂತ್ರಿಗಳು ದೌಡು        ರಾಜ್ಯದಲ್ಲಿ ವಿದ್ಯುತ್ ಲೋಡ್​ ಶೆಡ್ಡಿಂಗ್ ವಿಚಾರ- 4 ವರ್ಷ ಮಾಡಿಲ್ಲ, ಈಗಲೂ ಮಾಡೋದಿಲ್ಲ- ಜವಡೇಕರ್​ ಹೇಳಿಕೆಗೆ ಡಿಕೆಶಿ ಟಾಂಗ್​​​        ಬಹುಕೋಟಿ ಮೇವು ಹಗರಣ- ನಾಲ್ಕನೇ ಕೇಸ್‌ನಲ್ಲಿ ಲಾಲೂ ಅಪರಾಧಿ- ಬಿಹಾರ ಮಾಜಿ ಸಿಎಂ ಜಗನ್ನಾಥ್‌ ಮಿಶ್ರಾ ಖುಲಾಸೆ        ಪ್ರಿಯಾ ವಾರಿಯರ್ ರೀತಿ ಕಣ್ಣೊಡೆದ್ರೆ ಹುಷಾರ್- ಒಂದು ವರ್ಷ ಕಾಲೇಜಿನಿಂದ ಡಿಬಾರ್- ತಮಿಳುನಾಡಿನ ಕಾಲೇಜೊಂದರಲ್ಲಿ ಆರ್ಡರ್       
Breaking News

ದಿ.ಜಯಲಲಿತಾ ಕುಮಾರಿಯೋ ಶ್ರೀಮತಿಯೋ..? ಆಕೆಗೆ ಗಂಡುಮಗು ಜನಿಸಿತ್ತಂತೆ..?

Wednesday, 13.12.2017, 2:48 PM       No Comments

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರು ಕುಮಾರಿಯೋ ಶ್ರೀಮತಿಯೋ ಎಂಬ ಜಿಜ್ಞಾಸೆ ಮತ್ತೆ ಆರಂಭವಾಗಿದೆ. ಅದಕ್ಕೆ ಕಾರಣವಾಗಿರುವುದು ಆಕೆಯ ಖಾಸಗಿ ಜೀವನಕ್ಕೆ ಸಂಬಂಧಿಸಿದ ಛಾಪಾ ಕಾಗದ.

ಜಯಲಲಿತಾ ನಿಧನರಾಗಿ ಮೊನ್ನೆಯಷ್ಟೇ ವರ್ಷ ಕಳೆದಿದ್ದರೂ ಆಕೆಯ ಖಾಸಗಿ, ರಾಜಕೀಯ ಬದುಕಿನ ಮೇಲಿನ ಕುತೂಹಲ ಮಾತ್ರ ಇನ್ನೂ ತಣಿದಿಲ್ಲ. ಆಕೆಯ ಅಭಿಮಾನಿಗಳು ಹಾಗೂ ವಿರೋಧಿಗಳು ಅಗೆದು ಮೊಗೆದು ಹೊಸ ಸಂಗತಿಗಳನ್ನು ಹೊರ ಹಾಕುತ್ತಿದ್ದಾರೆ.

ಬದುಕಿರುವವರೆಗೆ ಕುಮಾರಿ ಜಯಲಲಿತಾ ಎಂದೇ ಕರೆಯಿಸಿಕೊಂಡ ‘ಅಮ್ಮ’ನಿಗೆ ಒಂದು ಗಂಡು ಮಗುವಿತ್ತು ಹಾಗೂ ಕಾರಣಾಂತರಗಳಿಂದ ಅದನ್ನು ದತ್ತು ನೀಡಲಾಗಿದೆ ಎಂಬ ವಿವರ ಛಾಪಾಕಾಗದದಿಂದ ಸ್ಪಷ್ಟವಾಗಿದೆ.

ಇಲ್ಲಿನ ಜಯಲಲಿತಾರ ಮನೆಯಲ್ಲಿ ತೆಲಗು ಚಿತ್ರನಟ ಶೋಭನ್​ ಬಾಬು ಹಾಗೂ ಜಯಾರಿಗೆ ಫೆ.15, 1985ರಂದು ಮಗುವೊಂದು ಜನಿಸಿತ್ತು. ಅಂದಿನ ತಮಿಳುನಾಡು ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್​ ಆಗಾಗ್ಗೆ ಬಂದು ಮಗುವನ್ನು ನೋಡಿಕೊಂಡು ಹೋಗುತ್ತಿದ್ದರು. ಇದರಿಂದ ಶೋಭನ್​ಬಾಬು ಹಾಗೂ ಜಯಲಲಿತಾ ನಡುವೆ ಗಲಾಟೆಯಾಗುತ್ತಿತ್ತು ಎನ್ನಲಾಗಿದೆ.

ಹಾಗಾಗಿ ತಮಿಳುನಾಡಿನ ಈರೋಡ್​​ನಲ್ಲಿರುವ ಜಯಲಲಿತಾ ಸ್ನೇಹಿತ ಸೆಂದಾಂಬರೆ ಎಂಬುವರಿಗೆ ಗಂಡು ಮಗುವನ್ನ ದತ್ತು ನೀಡಿರುವ ಬಗ್ಗೆ ಈ ಛಾಪಾಕಾಗದ ಮಾಡಿಸಲಾಗಿದೆ.

80ರ ದಶಕದಲ್ಲಿ ಶೋಭನ್​ ಹಾಗೂ ಜಯಲಲಿತಾ ಅವರು ಮದುವೆಯಾಗಿರುವ ಬಗ್ಗೆ ಉಹಾಪೋಹಗಳಿದ್ದವೇ ಹೊರತು ಯಾವುದೇ ದಾಖಲೆಗಳು ದೊರಕಿರಲಿಲ್ಲ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top