More

    ನಾನು ಅಪ್ಪ-ಅಮ್ಮನಿಗೆ ಹುಟ್ಟಿದ ಮಗ, ಹಾಸನದವ, ಇಮೇಜ್​ ನೋಡುತ್ತ ಕೂರೋಕೆ ಆಗಲ್ಲ: ಯಶ್​ ಗರಂ

    ಹಾಸನ: ನಾನು ಅಪ್ಪ-ಅಮ್ಮನಿಗೆ ಹುಟ್ಟಿದ ಮಗ. ನನ್ನ ತಂದೆ- ತಾಯಿಗೆ ಸಮಸ್ಯೆ ಆದಾಗ ನನ್ನ‌ ಇಮೇಜ್ ನೋಡಿಕೊಂಡು ಕೂರಲು ಆಗಲ್ಲ. ಎಲ್ಲಿಂದಲೋ ಬಂದವರು, ಇಲ್ಲಿಗೆ ಬಂದಿದ್ದಾರೆ ಅಂತಾ ಕೇಳ್ತಾರಂತೆ. ನಾನು ಹಾಸನದಲ್ಲೇ ಹುಟ್ಟಿರುವ ಮಗ. ನಮ್ಮ-ತಂದೆ ತಾಯಿ ಹಾಸನದವರು. ನಾನು ಹಾಸನ, ಬೆಳಗಾವಿ, ಮಂಗಳೂರು… ಕರ್ನಾಟಕದಲ್ಲಿ ಎಲ್ಲಿ ಬೇಕಾದ್ರು ಆಸ್ತಿ ಮಾಡ್ತೀನಿ. ನಾನು ಕರ್ನಾಟಕದ ಮಗ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದರು.

    ಹಾಸನ ಜಿಲ್ಲೆಯ ದುದ್ದ ಹೋಬಳಿ ತಿಮ್ಮೇನಹಳ್ಳಿ ಗ್ರಾಮದ ಬಳಿ‌ ಯಶ್‌ ಜಮೀನು ಖರೀದಿಸಿದ್ದು, ರಸ್ತೆ ನಿರ್ಮಿಸುವ ವಿಚಾರವಾಗಿ ಯಶ್​ರ ತಂದೆ-ತಾಯಿ ಹಾಗೂ ಗ್ರಾಮಸ್ಥರ ನಡುವೆ ಗಲಾಟೆ ನಡೆದಿತ್ತು. ಯಶ್ ತಂದೆ ಅರುಣ್ ಕುಮಾರ್‌ ಹಾಗೂ ತಾಯಿ ಪುಷ್ಪ ಜಮೀನಿನ ಬಳಿ ಕೆಲಸ ಮಾಡುವಾಗ ಗ್ರಾಮಸ್ಥರ ನಡುವೆ ವಾಗ್ವಾದ ಆಗಿತ್ತು. ಇದೇ ವಿಚಾರವಾಗಿ ದುದ್ದ ಪೊಲೀಸ್​ ಠಾಣೆಯಲ್ಲಿ ಯಶ್​ ಕುಟುಂಬ ದೂರು ನೀಡಿದೆ. ಮಂಗಳವಾರ ಸಂಜೆ ಪೊಲೀಸ್​ ಠಾಣೆಗೆ ಭೇಟಿ ನೀಡಿದ್ದ ಯಶ್​ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಹಾಸನ, ಮಂಗಳೂರು, ಬೆಳಗಾವಿ.. ಎಲ್ಲೂ ಬೇಕಾದ್ರೂ ಆಸ್ತ ಮಾಡ್ತೀನಿ. ನಾನು ಕರ್ನಾಟಕದವ. ಯಾರಿಗದರೂ ಹತ್ತು ಎಕರೆ ಬೇಕಾ? ಬಡವರಿಗೆ-ಜನರಿಗೆ ಉಪಯೋಗಕ್ಕೆ ಆಗುತ್ತೆ ಅಂದ್ರೆ ನಾನೇ ಬಿಟ್ಟುಕೊಡ್ತೀನಿ. ಆಸ್ತಿ ಅನ್ನೋದು ದೊಡ್ಡದಲ್ಲ ಎಂದರು. ಇದನ್ನೂ ಓದಿರಿ Video| ನನ್​ ಗಾಡಿ ಮುಟ್ಟೋಕೆ ನೀನ್ಯಾರೆ.. ಪಿಎಸ್​ಐಗೆ ​ಯುವತಿ ಅವಾಜ್​! ಕಪಾಳಕ್ಕೆ ಬಿತ್ತು ಏಟು

    ಕಷ್ಟಪಟ್ಟು ದುಡಿದು ಜಮೀನು ತೆಗೆದುಕೊಂಡಿದ್ದೇವೆ. ಅದಕ್ಕೆ ಕಾಂಪೌಂಡ್ ಹಾಕಿಸುತ್ತಿದ್ದೇವೆ. ಜಮೀನಿನ ಒಳಗೆ ಬಂದು ಕೆಲವರು ಕುಡಿತ, ಇಸ್ಪೀಟ್​ ಆಟ ಆಡಿದ್ದಾರೆ. ಅದನ್ನೆಲ್ಲ ಸಹಿಸಿಕೊಳ್ಳೋಕೆ ಆಗಲ್ಲ. ನಮ್ಮ ಜಮೀನಲ್ಲಿ ಕೆಲಸ ಮಾಡುವ ಹುಡುಗರ ಬಳಿಯೂ ಗಲಾಟೆ ಮಾಡ್ತಾರೆ. ಹುಡುಗರ ಮೇಲೆ ಕೈ ಮಾಡ್ತಾರೆ. ನಮ್ಮ‌ ಜತೆ ಕೆಲಸ ಮಾಡೋರು ನಮ್ಮ ಮನೆಯವರಿದ್ದಂತೆ. ಅದಕ್ಕಾಗಿ ಬಂದು ಈಗ ಮಾತನಾಡುತ್ತಿದ್ದೇನೆ. ರಸ್ತೆಯನ್ನು ದೇವಸ್ಥಾನಕ್ಕೆ ಹೋಗಲು ಮಾಡಿದ್ದಾರೆ. ಅದು ನಮಗೆ ಬೇಕು ಎಂದು ಮಾಡಿಲ್ಲ ಎಂದು ಯಶ್​ ಹೇಳಿದರು.

    ಹಾಸನಕ್ಕೆ ಬಂದು ನಾನ್ಯಾಕೆ ಜಮೀನು ಮಾಡಬೇಕು. ಏನಾದ್ರು ಒಂದು ಎಕ್ಸಾಂಪಲ್ ಸೆಟ್ ಮಾಡಲು ಜಮೀನು ಮಾಡಿದ್ದೇವೆ. ಬೇಕಾದ್ರೆ ಬೆಂಗಳೂರಲ್ಲೇ ಆಸ್ತಿ ಮಾಡಬಹುದಲ್ವಾ? ನಮ್ಮ ತಂದೆ- ತಾಯಿಯೂ ಹಳ್ಳಿ ಜನ. ಅವರೂ ಮಾತನಾಡ್ತಾರೆ, ಗ್ರಾಮಸ್ಥರೂ ಮಾತನಾಡ್ತಾರೆ. ಯಾವ ರೀತಿ ಮಾತನಾಡಬೇಕೋ ಆ ರೀತಿ ಮಾತನಾಡಬೇಕು. ಸುಮ್ನೆ ಏನೇನೋ ಮಾತನಾಡೋದಲ್ಲ ಎಂದರು.

    Video| ನನ್​ ಗಾಡಿ ಮುಟ್ಟೋಕೆ ನೀನ್ಯಾರೆ.. ಪಿಎಸ್​ಐಗೆ ​ಯುವತಿ ಅವಾಜ್​! ಕಪಾಳಕ್ಕೆ ಬಿತ್ತು ಏಟು

    ತಾಯಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಬಾಲಕಿ ಆತ್ಮಹತ್ಯೆ?

    ಧರ್ಮಸ್ಥಳ ವ್ಯಾಪ್ತಿಯಲ್ಲಿ ಮರ ಕಡಿಯುವಾಗ ಅವಘಡ: ಸ್ಥಳದಲ್ಲೇ ಮೂವರ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts