Thursday, 22nd March 2018  

Vijayavani

ಮುಂದಿನ ಚುನಾವಣೆಯಲ್ಲಿ ಮೋದಿ ಸೋಲ್ತಾರೆ- ಇಂದಿರಾಗಾಂಧಿಯಂತೆ ನಮ್ಮನ್ನೂ ಗೆಲ್ಲಿಸಿ- ಚಿಕ್ಕಮಗಳೂರಿನಲ್ಲಿ ರಾಹುಲ್‌ ಟಾಕ್‌ವಾರ್‌        ಕುಡಿದು ಅಡ್ಡಾದಿಡ್ಡಿ ಬಸ್‌ ಚಲಾಯಿಸಿದ- ಕಾರು, ಬೈಕ್‌ ಮರಕ್ಕೆ ಡಿಕ್ಕಿ ಹೊಡೆಸಿದ- ಬೆಂಗಳೂರಿನಲ್ಲಿ ಬಿಎಂಟಿಸಿ ಚಾಲಕನ ಅವಾಂತರ        ಜೆಡಿಎಸ್ ಬಂಡಾಯ ಶಾಸಕರ ಅನರ್ಹತೆ ವಿಚಾರ- ಹೈಕೋರ್ಟ್​ಗೆ ಅಭಿಪ್ರಾಯ ತಿಳಿಸಿದ ಸ್ಪೀಕರ್​- ಮುಚ್ಚಿದ ಲಕೋಟೆಯಲ್ಲಿ ಎಜಿ ಮೂಲಕ ರವಾನೆ        5 ಕೋಟಿ ಫೇಸ್​ಬುಕ್‌ಗಳ ಮಾಹಿತಿ ಹ್ಯಾಕ್- ಕಾಂಗ್ರೆಸ್‌ ವಿರುದ್ಧ ಬಿಜೆಪಿ ಗಂಭೀರ ಆರೋಪ- ರವಿಶಂಕರ್‌ ಆರೋಪಕ್ಕೆ ಕೈತಿರುಗೇಟು        ಬೈಕ್ ಸವಾರನ ಮೇಲೆ ಬಿದ್ದ ಬೃಹತ್ ಮರ- ಹೆಲ್ಮೆಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರು- ಹೆಲ್ಮೆಟ್​ ಪುಡಿಪುಡಿ ತಲೆ ಸೇಫ್​       
Breaking News

ಮೋದಿ ಪುತ್ರನ ಸರಳ ವಿವಾಹದಲ್ಲಿ ಪಾಲ್ಗೊಂಡ ಲಾಲು

Monday, 04.12.2017, 2:15 PM       No Comments

ಪಾಟ್ನಾ: ರಾಜಕೀಯ ದ್ವೇಷವನ್ನು ಬದಿಗೊತ್ತಿ ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್​ ಯಾದವ್, ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್​ಕುಮಾರ್ ಮೋದಿ ಅವರ ಮಗನ ಮದುವೆಯಲ್ಲಿ ಭಾನುವಾರ ಪಾಲ್ಗೊಂಡು ಅಚ್ಚರಿ ಮೂಡಿಸಿದರು.

ಮೋದಿಯವರ ಮಗ ಉತ್ಕರ್ಷ್​ ಕಲ್ಕತ್ತಾ ಮೂಲದ ಲೆಕ್ಕ ಪರಿಶೋಧಕಿ ಯಾಮಿನಿ ಅವರನ್ನು ಸರಳ ಮದುವೆ ಸಮಾರಂಭದಲ್ಲಿ ವರಿಸಿದರು. ಈ ವೇಳೆ ಅನೇಕ ರಾಜಕಾರಣಿಗಳು, ನಾಯಕರು ಪಾಲ್ಗೊಂಡು ನವ ದಂಪತಿಗೆ ಹಾರೈಸಿದರು.

ಲಾಲು ಪ್ರಸಾದ್​ ಯಾದವ ಆತ್ಮೀಯವಾಗಿ ಮೋದಿ ಅವರ ಕೈಕುಲುಕಿ ನಂತರ ಕೇಂದ್ರ ಮಂತ್ರಿ ಗಿರಿರಾಜ್​ ಸಿಂಗ್​ ಪಕ್ಕ ಹೋಗಿ ಕುಳಿತುಕೊಂಡರು.

ಮದುವೆ ಏರ್ಪಡಿಸಲಾಗಿದ್ದ ಮೈದಾನದ ಸುತ್ತಲೂ ವರದಕ್ಷಿಣೆ ಪದ್ಧತಿ ವಿರುದ್ಧ ಸಂದೇಶ ಸಾರುವ ಬ್ಯಾನರ್​ಗಳನ್ನು ಕಟ್ಟಲಾಗಿತ್ತು. ಬಾಲ್ಯ ವಿವಾಹ ರದ್ದತಿ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ನೇತ್ರದಾನದ ಕುರಿತು ಜಾಗೃತಿ ಮೂಡಿಸುವ ಕರಪತ್ರಗಳನ್ನೂ ಹಂಚಲಾಯಿತು. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top