Thursday, 19th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News

ಹಾರಂಗಿಯಲ್ಲಿ ಒಂದೇ ದಿನ 4 ಅಡಿ ನೀರು ಸಂಗ್ರಹ

Friday, 15.06.2018, 5:49 AM       No Comments

ಕುಶಾಲನಗರ: ಹಾರಂಗಿ ಅಣೆಕಟ್ಟೆೆ ನೀರು ಸಂಗ್ರಹದಲ್ಲಿ ಒಂದೇ ದಿನದಲ್ಲಿ ಸುಮಾರು 4 ಅಡಿಗಳಷ್ಟು ಹೆಚ್ಚಳ ಕಂಡು ಬಂದಿದೆ.
ಹಿನ್ನೀರು ಪ್ರದೇಶವಾದ ಮಡಿಕೇರಿ, ಹಟ್ಟಿಹೊಳೆ, ಮಾದಾಪುರ, ಗರಗಂದೂರು ಭಾಗಗಳಲ್ಲಿ 2 ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ.
ಗುರುವಾರದ ಮಾಹಿತಿ ಪ್ರಕಾರ ಗರಿಷ್ಠ 2859 ಅಡಿ ಎತ್ತರದ ಅಣೆಕಟ್ಟೆಯಲ್ಲಿ 2825.00 ಅಡಿ ನೀರಿದೆ. ಕಳೆದ ವರ್ಷ ಇದೇ ದಿನ 2811.62 ಅಡಿ ನೀರಿತ್ತು. ಪ್ರಸ್ತುತ ಒಳಹರಿವು 2728 ಕ್ಯೂಸೆಕ್ಸ್‌ಗಳಿದ್ದು, ಕಳೆದ ವರ್ಷ ಒಳಹರಿವು 680 ಕ್ಯೂಸೆಕ್ಸ್ ಇತ್ತು. 8.5 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಗುರುವಾರ 3.85 ಟಿಎಂಸಿ ನೀರಿತ್ತು. ಈ ಬಾರಿ ಅಣೆಕಟ್ಟೆಯ ನಿರ್ವಹಣೆ ಉದ್ದೇಶದಿಂದ ಜಲಾಶಯವನ್ನು ಸಂಪೂರ್ಣ ಖಾಲಿ ಮಾಡಲಾಗಿತ್ತು. ಆದರೂ ಮಳೆ ಹೆಚ್ಚಿರುವ ಕಾರಣ ವೇಗವಾಗಿ ಭರ್ತಿ ಆಗುತ್ತಿದೆ.
ಅಪಾಯದ ಮಟ್ಟ ತಲುಪಿದ ಕಾವೇರಿ: ನದಿಪಾತ್ರದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೀವ ನದಿ ಕಾವೇರಿ ಈ ಬಾರಿ ಜೂನ್ ತಿಂಗಳಲ್ಲೇ ಮೈತುಂಬಿಕೊಂಡಿದೆ. ಹಲವು ದಶಕಗಳ ನಂತರ ಮಳೆಗಾಲದಲ್ಲಿ ಇಷ್ಟು ಬೇಗ ನದಿಗೆ ಜೀವಕಳೆ ಬಂದಿರುವುದು ವಿಶೇಷ. ಇಲ್ಲಿನ ಶ್ರೀ ಅಯ್ಯಪ್ಪ ದೇವಾಲಯ ಮತ್ತು ಕೊಪ್ಪ ಸೇತುವೆ ಬಳಿ ನದಿ ನೀರು ಅಪಾಯದ ಮಟ್ಟ ತಲುಪಿದೆ. ಸೇತುವೆ ಕೆಳಗಡೆ 7 ಮೀಟರ್‌ಗೂ ಹೆಚ್ಚಿನ ಎತ್ತರದಲ್ಲಿ ನೀರು ಹರಿದು ಹೋಗುತ್ತಿದೆ.
ಬುಧವಾರ ರಾತ್ರಿಯಿಂದಲೇ ಕುಶಾಲನಗರ ವ್ಯಾಪ್ತಿಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಗುರುವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಮಳೆ ಅಬ್ಬರ ಕಡಿಮೆ ಆಯಿತು. ಮಳೆ ನಿಂತ ಕೂಡಲೇ ಸಾರ್ವಜನಿಕರು ನದಿ ಹತ್ತಿರ ತೆರಳಿ ತುಂಬಿದ ಕಾವೇರಿಯನ್ನು ಕಣ್ತುಂಬಿಕೊಳ್ಳುತ್ತಿದ್ದುದು ಕಂಡು ಬಂತು.
ರಂಗಸಮುದ್ರ, ದೊಡ್ಡಬೆಟಗೇರಿ, ಗುಡ್ಡೆಹೊಸೂರು, ಮುಳ್ಳುಸೋಗೆ, ಕೂಡ್ಲೂರು, ಕೂಡಿಗೆ. ಕಣಿವೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ ಭಾಗದಲ್ಲಿ ಕಾವೇರಿ ನದಿ ರೈತರ ಜಮೀನುಗಳಿಗೆ ನುಗ್ಗಿದ್ದು, ಈಗಾಗಲೇ ಬೆಳೆದು ನಿಂತಿರುವ ಜೋಳದ ಗಿಡಗಳು ನೀರಿನಲ್ಲಿ ಮುಳುಗಿವೆ. ಇದೇ ಪರಿಸ್ಥಿತಿ ಇನ್ನು 2 ದಿನ ಮುಂದುವರಿದರೆ ಗಿಡಗಳು ಕರಗುವ ಬಗ್ಗೆ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

Back To Top