Friday, 19th January 2018  

Vijayavani

ರಾಜ್ಯದಲ್ಲಿ ಶುರುವಾಗಿದೆ ಪಕ್ಷಾಂತರ ಪರ್ವ - ಮೂರು ಪಕ್ಷದೊಳಗೆ ಆಪರೇಶನ್​​ ಪಾಲಿಟಿಕ್ಸ್​​ - ಗೆಲುವಿಗಾಗಿ ಹೊಂದಾಣಿಕೆಗೂ ಸೈ ಎಂದ ನಾಯಕರು        ಮತ್ತೆ ಅನಂತಕುಮಾರ್​ ಹೆಗಡೆ ಉದ್ಧಟತನ - ಮಹಾಭಾರತದ ಜತೆ ವಿರೋಧಿಗಳ ಹೋಲಿಕೆ - ಹೆಗಡೆ ವಿರುದ್ಧ ಕ್ರಮಕ್ಕೆ ಆಗ್ರಹ        ಪ್ಲಾಸ್ಟಿಕ್​​ ಕವರ್​​ನಲ್ಲಿ ರಾಶಿ ರಾಶಿ ತಲೆ ಬುರುಡೆ - ಮೈಸೂರಿನ ರಸ್ತೆ ಬದಿ ತಲೆಬುರುಡೆಗಳು ಪತ್ತೆ - ಬುರುಡೆಗಳ ರಾಶಿ ಕಂಡು ಜನರಲ್ಲಿ ಆತಂಕ        ಗಡಿಯಲ್ಲಿ ಪಾಕ್​​ ಮತ್ತೆ ಪುಂಡಾಟ - ಅಪ್ರಚೋದಿತ ದಾಳಿಗೆ ಇಬ್ಬರು ಸಾವು - ಭಾರತದ ಯೋಧರಿಂದಲೂ ಪ್ರತಿ ದಾಳಿ         ಪದ್ಮಾವತ್​ ಚಿತ್ರಕ್ಕೆ ತಪ್ಪದ ಸಂಕಷ್ಟ - ಒವೈಸಿಯಿಂದಲೂ ಚಿತ್ರ ಬಿಡುಗಡೆಗೆ ವಿರೋಧ - ಚಿತ್ರತಂಡದ ಅರ್ಜಿ ತಳ್ಳಿ ಹಾಕಿದ ಸುಪ್ರೀಂಕೋರ್ಟ್​​​​       
Breaking News :

ಕೆಎಸ್​ಆರ್​ಟಿಸಿ ಆದೇಶದಿಂದ ಚಾಲಕರು, ನಿರ್ವಾಹಕರಿಗೆ ಸಂಕಷ್ಟ..!

Sunday, 12.11.2017, 10:16 AM       No Comments

>> ಬೆಂಗಳೂರಿನಿಂದ ಚಿಕ್ಕಮಗಳೂರಿಗೆ 5 ಗಂಟೆಯಲ್ಲಿ ಹೋಗ್ಬೇಕಂತೆ..!

ಚಿಕ್ಕಮಗಳೂರು: ಕೆಎಸ್​ಆರ್​ಟಿಸಿಯ ಚಿಕ್ಕಮಗಳೂರು ವಿಭಾಗ ಹೊಸ ಆದೇಶವೊಂದನ್ನು ಹೊರಡಿಸಿದ್ದು, ವೋಲ್ವೋ ಹಾಗೂ ರಾಜಹಂಸ ಬಸ್ಸಗಳಂತೆ ಕೆಂಪು ಬಸ್ಸಗಳು ಕೂಡ ಚಿಕ್ಕಮಗಳೂರು ಮತ್ತು ಬೆಂಗಳೂರು ಮಧ್ಯದ ದಾರಿಯನ್ನು ಕೇವಲ 5 ಗಂಟೆಯಲ್ಲಿ ಕ್ರಮಿಸ ಬೇಕು ಎಂದಿದೆ.

ಈ ಹೊಸ ಆದೇಶದಿಂದ ಚಾಲಕರು ಮತ್ತು ನಿರ್ವಾಹಕರಿಗೆ ಸಂಕಷ್ಟ ಎದುರಾಗಿದ್ದು, ಸದ್ಯದ ಟ್ರಾಫಿಕ್​ನಲ್ಲಿ 5 ಗಂಟೆಯಲ್ಲಿ ಈ ಮಾರ್ಗ ಪಯಣಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಅದಲ್ಲದೇ ರಾಜಹಂಸ ಹಾಗೂ ವೋಲ್ವೋ ಬಸ್​ಗೆ ಮಾರ್ಗ ಮಧ್ಯೆ ಕೇವಲ 3 ಸ್ಟಾಪ್​ಗಳಿವೆ ಆದರೆ ಕೆಂಪು ಬಸ್​ಗೆ 63 ಸ್ಟಾಪ್​ಗಳಿವೆ ಎನ್ನುತ್ತಾರೆ ಸಿಬ್ಬಂದಿ.

ಚಾಲಕರು ಹಾಗೂ ನಿರ್ವಾಹಕರ ಪ್ರಕಾರ 2 ಹೆಚ್ಚುವರಿ ಗಂಟೆಗಳು ಪ್ರಯಾಣಕ್ಕೆ ಬೇಕು. ಆದರೆ ಹೆಚ್ಚುವರಿ ಕಾರ್ಯನಿರ್ವಹಿಸಿದರೆ ಓಟಿ (Over time) ನೀಡಬೇಕಾಗುತ್ತದೆ, ಇದಕ್ಕೂ ಕೂಡ ಅಧಿಕಾರಿಗಳು ನಿರಾಕರಿಸಿದ್ದಾರೆ. ಇನ್ನು ವೇಗವಾಗಿ ಚಲಿಸಿದರೆ ಅಪಘಾತ ಕಟ್ಟಿಟ್ಟ ಬುತ್ತಿ ಎನ್ನುವಂತಹ ಪರಿಸ್ಥಿತಿ ಇದೆ.

ಒಟ್ಟಾರೆ ಈ ಹೊಸ ಆದೇಶದಿಂದ ಬೇಸತ್ತಿರುವ ಚಾಲಕರು ಹಾಗೂ ನಿರ್ವಾಹಕರು ಕೆ.ಎಸ್.ಅರ್.ಟಿ.ಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಮೊರೆ ಹೋಗಿದ್ದಾರೆ. ನಮ್ಮ ಕೆಲಸಕ್ಕೆ ತಕ್ಕಂತೆ ನಮಗೆ ಓಟಿ ನೀಡಿ ಎಂದು ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ಅಧಿಕಾರಿಗಳು ಓಟಿ ಉಳಿಸೋಕೆ ಮಾಡಿರುವ ಪ್ಲಾನ್​ನಿಂದ ಡ್ರೈವರ್ ಕಂಡಕ್ಟರ್​ಗಳು ದುಡ್ಡು ಹಾಗೂ ಮನಶಾಂತಿ ಎರಡೂ ಕಳೆದುಕೊಂಡಂತಾಗಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top