Wednesday, 15th August 2018  

Vijayavani

ಹೊರಗೆ ದೋಸ್ತಿ, ಒಳಗೆ ಕುಸ್ತಿ - ದೂರವಾಗದ ಸಿದ್ದು, ಕುಮಾರ ಮುನಿಸು - ರಾಯಣ್ಣನ ಪ್ರತಿಮೆ ಬಳಿ ಬಯಲಾಯ್ತು ಮೈತ್ರಿ ಹುಳುಕು        ಕಾವೇರಿ ಕಣಿವೆಯಲ್ಲಿ ಮಳೆ ಆರ್ಭಟ - ಕೆಆರ್‌ಎಸ್‌ಗೆ ಭಾರಿ ಪ್ರಮಾಣದ ನೀರು- ಶ್ರೀರಂಗಪಟ್ಟಣ ಬಳಿ ಪ್ರವಾಹ ಪರಿಸ್ಥಿತಿ        ಮನೆ, ಮಠ , ಶಾಲೆ ಎಲ್ಲವೂ ಜಲಾವೃತ - ಹೊನ್ನಾಳಿಯಲ್ಲಿ ಸ್ಕೂಲ್‌ಗೆ ನುಗ್ಗಿದ ತುಂಗಭದ್ರ - ಅಪಾಯ ಲೆಕ್ಕಿಸದೆ ವಿದ್ಯಾರ್ಥಿಗಳ ಆಟ        ಕರಾವಳಿಯಲ್ಲಿ ಬಿಡುವುಕೊಡದ ವರುಣ - ಬೆಳ್ತಂಗಡಿಯಲ್ಲಿ ನಿರ್ಮಾಣ ಹಂತದ ಮನೆ ಕುಸಿತ - ಅತ್ತ ಹಾಸನದಲ್ಲಿ ರಸ್ತೆ ಕುಸಿತ        ಮಲೆನಾಡಿನಲ್ಲಿ ಮುಂದುವರಿದ ಮಳೆ ಆರ್ಭಟ - ನಾಲ್ಕು ವರ್ಷಗಳ ಬಳಿಕ ಲಿಂಗನಮಕ್ಕಿ ಭರ್ತಿ - ಜೋಗ ಜಲಾಪಾತದಲ್ಲಿ ಜಲ ವೈಭವ        ಕೇರಳದಲ್ಲಿ ತಗ್ಗದ ಪ್ರವಾಹ - ನೀರಿನಲ್ಲಿ ಸಿಲುಕೊಂಡ ರಾಜ್ಯ ಸಾರಿಗೆ ಬಸ್‌ - ಅಯ್ಯಪ್ಪನಿಗೂ ತಟ್ಟಿದ ನೆರೆಹಾವಳಿ       
Breaking News

ಜೆಸ್ಕಾಂ ಎಇ ಎಸಿಬಿ ಬಲೆಗೆ

Monday, 11.06.2018, 8:49 PM       No Comments

ಕೊಪ್ಪಳ: ಗ್ರಾಹಕರೊಬ್ಬರಿಂದ ಲಂಚ ಸ್ವೀಕರಿಸುತ್ತಿರುವ ವೇಳೆ ಗಂಗಾವತಿ ವಿಭಾಗದ ಜೆಸ್ಕಾಂನ ಎಇ ಪವನ ಕುಮಾರ್ ಸೋಮವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಕೊಳವೆ ಬಾವಿಗಾಗಿ ವಿದ್ಯುತ್ ಪರಿವರ್ತಕ ಮತ್ತು ಕಂಬಗಳ ಮಂಜೂರಾತಿಗಾಗಿ ಕುಷ್ಟಗಿ ತಾಲೂಕಿನ ಹಿರೇಬನ್ನಿಗೋಳ ಗ್ರಾಮದ ರಮೇಶ ಬಿನ್ ಮುದುಕಪ್ಪ ಅವರಿಂದ ಲಂಚ ಸ್ವೀಕರಿಸುತ್ತಿರುವ ವೇಳೆ ಎಸಿಬಿ ತಂಡ ದಾಳಿ ಮಾಡಿ, ಲಂಚದ ಹಣ ಸಹಿತ ಪವನ ಕುಮಾರ ಅವರನ್ನು ದಸ್ತಗಿರ್ ಮಾಡಿದೆ. ದಾಳಿ ಮಾಡಿದ ತಂಡದ ನೇತೃತ್ವವನ್ನು ಎಸಿಬಿ ಡಿವೈಎಸ್ಪಿ ರುದ್ರಪ್ಪ ಉಜ್ಜನಕೊಪ್ಪ ವಹಿಸಿದ್ದರು. ತನಿಖೆ ಮುಂದುವರಿದಿದೆ. ಹಿರೇಬನ್ನಿಗೋಳ ಗ್ರಾಮದ ರಮೇಶ ಬಿನ್ ಮುದುಕಪ್ಪ ಗಂಗಾ ಕಲ್ಯಾಣ ಯೋಜನೆಯಡಿ ತಮ್ಮ ತಾಯಿಯ ಹೆಸರಿನಲ್ಲಿ ಕೊಳವೆಬಾವಿ ಕೊರೆಸಿದ್ದರು. ಇದಕ್ಕಾಗಿ ವಿದ್ಯುತ್ ಸಂಪರ್ಕಬೇಕಿತ್ತು. ಟಿಸಿ ಮತ್ತು ಕಂಬಗಳ ಮಂಜೂರಾತಿಗಾಗಿ ಎಇ ಪವನ ಕುಮಾರ 20 ಸಾವಿರ ರೂ.ಕೊಡುವಂತೆ ಬೇಡಿಕೆ ಇಟ್ಟಿದ್ದರು. ಆ ಪೈಕಿ 10 ಸಾವಿರ ರೂ.ಗಳನ್ನು ರಮೇಶರಿಂದ ಗಂಗಾವತಿಯ ಸಿಬಿಎಸ್ ವೃತ್ತದ ಬಳಿ ಮಿಲ್ಕ್ ಪಾರ್ಲರ್ ಹತ್ತಿರ ಸೋಮವಾರ ಸ್ವೀಕರಿಸುವಾಗ ಎಸಿಬಿ ತಂಡಕ್ಕೆ ಸಾಕ್ಷಿ ಸಮೇತ ಸಿಕ್ಕಿಹಾಕಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Back To Top