Wednesday, 18th July 2018  

Vijayavani

ಸಾಲದ ಸುಳಿಯಲ್ಲಿದ್ರೂ ಐ ಫೋನ್​ ಗಿಫ್ಟ್​ - ಹತ್ತಾರು ಸಮಸ್ಯೆ ಮಧ್ಯೆ ಬೇಕಿತ್ತಾ ದುಬಾರಿ ಉಡುಗೊರೆ​ - ಇಟ್ಕೊಂಡೋರಾರು..? ವಾಪಸ್ ಕೊಟ್ಟವರಾರು.?        ದೆಹಲಿಯಲ್ಲಿದ್ರೂ ರೇವಣ್ಣಗೆ ತವರಿನ ಜಪ - ಹಾಸನದ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ - ಸಿಎಂ ಎಚ್​ಡಿಕೆಯನ್ನೇ ಓವರ್​​ಟೇಕ್​ ಮಾಡಿದ PWD ಮಿನಿಸ್ಟರ್​​​        ಜಾರಕಿಹೊಳಿ ಬ್ರದರ್ಸ್​​​​ ನಡುವೆ ಸಮರ - ದೆಹಲಿಗೆ ಶಾಸಕರನ್ನ ಕರೆದೊಯ್ದ ರಮೇಶ್​​​​​​​ ಜಾರಕಿಹೊಳಿ - ಸತೀಶ್​​ಗೆ ಮಂತ್ರಿಗಿರಿ ತಪ್ಪಿಸಲು ಶಕ್ತಿ ಪ್ರದರ್ಶನ        ಇಂದಿನಿಂದ ಸಂಸತ್ ಅಧಿವೇಶನ - ಮಹಿಳಾ ಮೀಸಲಾತಿ, ತ್ರಿಪಲ್ ತಲಾಖ್​​​​​ ಮಸೂದೆ ಅಂಗೀಕಾರ ಸಾಧ್ಯತೆ - ಸಂಜೆ ರಾಜ್ಯ ಸಂಸದರ ಜತೆ ಸಿಎಂ ಮೀಟಿಂಗ್​​        ವಸತಿ ಯೋಜನೆಯ ಹಣವನ್ನೇ ನುಂಗಿದ್ರು - 140 ಅನರ್ಹರಿಂದ 8 ಕೋಟಿ ಗುಳುಂ ಸ್ವಾಹ - ಗದಗ ನಗರಸಭೆಯಲ್ಲಿ ಬಯಲಾಯ್ತು ಗೋಲ್​ಮಾಲ್​​​​        ದೀಪಾಲಂಕಾರದಿಂದ ಕಂಗೊಳಿಸಿದ ಕೆಆರ್​ಎಸ್​ - ಗಗನ ಚುಕ್ಕಿ ಜಲಪಾತ ನಯನ ಮನೋಹರ - ಡ್ರೋಣ್​​ ಕಣ್ಣಲ್ಲಿ ಸೆರೆಯಾಯ್ತು ಜಲಧಾರೆಯ ದೃಶ್ಯ ವೈಭವ       
Breaking News

ಬಿಸಿಸಿಐ ನೆರವು ಕೇಳಿದ ಕೋಲ್ಕತ ಪೊಲೀಸರು

Tuesday, 13.03.2018, 3:04 AM       No Comments

ಕೋಲ್ಕತ: ಕೌಟುಂಬಿಕ ದೌರ್ಜನ್ಯ, ವಿವಾಹೇತರ ಸಂಬಂಧ ಮತ್ತು ಮ್ಯಾಚ್ ಫಿಕ್ಸಿಂಗ್ ಆರೋಪಗಳನ್ನು ಎದುರಿಸುತ್ತಿರುವ ಟೀಮ್ ಇಂಡಿಯಾ ವೇಗಿ ಮೊಹಮದ್ ಶಮಿ ವಿರುದ್ಧದ ಪ್ರಕರಣಗಳ ತನಿಖೆಗಾಗಿ ಕೋಲ್ಕತ ಪೊಲೀಸರು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೆರವು ಯಾಚಿಸಿದ್ದಾರೆ. ಕಳೆದ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಭಾರತ ತಂಡದ ವೇಳಾಪಟ್ಟಿ ಹೇಗಿತ್ತು ಮತ್ತು ಶಮಿ ತವರಿಗೆ ಮರಳುವ ವೇಳೆ ದುಬೈನಲ್ಲಿ ತಂಗಿದ್ದರೇ ಎಂಬ ಬಗ್ಗೆ ಬಿಸಿಸಿಐನಿಂದ ಅವರು ಮಾಹಿತಿ ಕೇಳಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸ ಮುಗಿಸಿ ಭಾರತ ತಂಡದೊಂದಿಗೆ ತವರಿಗೆ ಮರಳುವ ವೇಳೆ ಶಮಿ ದುಬೈ ಹೋಟೆಲ್​ನಲ್ಲಿ ತಂಗಿದ್ದರು. ಆ ವೇಳೆ ಪಾಕಿಸ್ತಾನದ ಮಹಿಳೆಯೊಬ್ಬರು ಶಮಿ ಜತೆಗಿದ್ದರು. ಅಲ್ಲದೆ ಆಕೆ, ಮ್ಯಾಚ್ ಫಿಕ್ಸಿಂಗ್​ಗಾಗಿ ಇಂಗ್ಲೆಂಡ್ ಮೂಲದ ಮೊಹಮದ್ ಭಾಯ್ ಎಂಬ ವ್ಯಕ್ತಿ ನೀಡಿದ ಹಣವನ್ನು ಶಮಿಗೆ ಹಸ್ತಾಂತರಿಸಿದ್ದರು ಎಂಬುದು ಅವರ ಪತ್ನಿ ಹಸಿನ್ ಜಹಾನ್ ಮಾಡಿರುವ ಆರೋಪಗಳಲ್ಲಿ ಒಂದಾಗಿದೆ. ಇದರ ಸತ್ಯಾಸತ್ಯತೆ ಪರೀಕ್ಷೆಗಾಗಿ ಪೊಲೀಸರು, ಶಮಿ ನಿಜಕ್ಕೂ ತಂಡದಿಂದ ತವರಿಗೆ ಮರಳದೆ ದುಬೈನಲ್ಲಿ ತಂಗಿದ್ದರೆ, ಇದಕ್ಕಾಗಿ ಅವರು ವೈಯಕ್ತಿಕ ಹಣ ವಿನಿಯೋಗ ಮಾಡಿದ್ದರೇ ಎಂಬಿತ್ಯಾದಿ ವಿವರಗಳನ್ನು ಬಿಸಿಸಿಐನಿಂದ ಕೇಳಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಶಮಿ ಟೆಸ್ಟ್ ಮತ್ತು ಏಕದಿನ ತಂಡದಲ್ಲಿದ್ದರು. ಹೀಗಾಗಿ ಕೊನೆಯದಾಗಿ ನಡೆದ ಟಿ20 ಸರಣಿಗೆ ಮುನ್ನವೇ ಅವರು ತವರಿನ ವಿಮಾನ ಏರಿದ್ದರು. ಈ ವೇಳೆ ಅವರು ಬಿಸಿಸಿಐ ಮಾರ್ಗಸೂಚಿಯಂತೆಯೇ ತವರಿಗೆ ಮರಳಿದ್ದರೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದಕ್ಕೆ ದೊರೆಯುವ ಮಾಹಿತಿ, ಶಮಿ ಮೇಲಿನ ಆರೋಪಗಳಲ್ಲಿ ಎಷ್ಟು ಸತ್ಯಾಂಶ ಇದೆ ಎಂಬುದನ್ನು ನಿರ್ಧರಿಸಲಿದೆ. -ಏಜೆನ್ಸೀಸ್

 ನನಗೆ ತಿಳಿದಿರುವ ಮಟ್ಟಿಗೆ ಶಮಿ ಉತ್ತಮ ವ್ಯಕ್ತಿ. ಪತ್ನಿ ಮತ್ತು ದೇಶಕ್ಕೆ ದ್ರೋಹ ಮಾಡುವಂಥವರಲ್ಲ.

| ಎಂಎಸ್ ಧೋನಿ, ಟೀಮ್ ಇಂಡಿಯಾ ಮಾಜಿ ನಾಯಕ

 

ನ್ಯಾಯಾಲಯದ ಹೊರಗೆ ಪ್ರಕರಣ ಇತ್ಯರ್ಥಕ್ಕೆ ಯತ್ನ

ಶಮಿ ದಂಪತಿಯ ಕಲಹವನ್ನು ನ್ಯಾಯಾಲಯದ ಹೊರಗೆ ಬಗೆಹರಿಸಲು ಅವರ ಕುಟುಂಬದ ಸದಸ್ಯರು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. 3 ವರ್ಷದ ಮಗಳ ಭವಿಷ್ಯಕ್ಕಾಗಿ ಮತ್ತೆ ಒಂದಾಗುವಂತೆ ಶಮಿ-ಹಸಿನ್ ದಂಪತಿಯನ್ನು ಒತ್ತಾಯಿಸಲಾಗುತ್ತಿದೆ. ಈ ಸಂಬಂಧ, ಉತ್ತರ ಪ್ರದೇಶ ಮೂಲದವರಾದ ಶಮಿ ಅವರ ಸಂಬಂಧಿಕರು ಕೋಲ್ಕತಕ್ಕೆ ಆಗಮಿಸಿ ಹಸಿನ್ ಅವರ ವಕೀಲರಾದ ಜಾಕಿರ್ ಹುಸೇನ್ ಜತೆ ಮಾತುಕತೆ ನಡೆಸಿದ್ದಾರೆ.

ಶಮಿಗೆ ಸಮನ್ಸ್

ಪ್ರಕರಣದಲ್ಲಿ ವಿಚಾರಣೆ ನಡೆಸಲು ಶಮಿಗೆ ಸಮನ್ಸ್ ಕಳುಹಿಸಲಾಗಿದೆ. ಶೀಘ್ರದಲ್ಲೇ ವಿಚಾರಣೆಗೆ ಹಾಜರಾಗಿ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿಯೂ ಅವರು ತಿಳಿಸಿದ್ದಾರೆ ಎಂದು ಕೋಲ್ಕತ ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ. ಶಮಿ ಸೋಮವಾರ ಮಗಳ ಚಿತ್ರದೊಂದಿಗೆ ‘ಚಾಕೊಲೇಟ್ ಲವರ್… ಮಿಸ್ ಯೂ ಬೆಬೊ’ ಎಂದು ಟ್ವೀಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಅಭಿಮಾನಿಗಳಿಂದ ಶಮಿಗೆ ಬೆಂಬಲದ ಸಂದೇಶಗಳ ಪ್ರವಾಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.

Leave a Reply

Your email address will not be published. Required fields are marked *

Back To Top