Sunday, 24th June 2018  

Vijayavani

ಆಪ್ತರ ಜತೆ ಮಾಜಿ ಸಿಎಂ ಸಭೆ ಹಿನ್ನೆಲೆ - ಸಿದ್ದರಾಮಯ್ಯ ಭೇಟಿಗೆ ತೆರಳಿದ ಪರಂ - ರಾಜಕೀಯ ವಿಚಾರಗಳ ಬಗ್ಗೆ ನಾಯಕರ ಚರ್ಚೆ ಸಾಧ್ಯತೆ        ಪ್ರಕೃತಿ ಚಿಕಿತ್ಸಾಲಯದಿಂದ ಹೊರ ಬಂದ ಸಿದ್ದು - ಅಭಿಮಾನಿಗಳ ಜತೆ ಮಾಜಿ ಸಿಎಂ ಚರ್ಚೆ - ಕೈ ಕಾರ್ಯಕರ್ತರ ಜತೆ ಸೆಲ್ಫಿಗೆ ಫೋಸ್​​        ಶಿವಮೊಗ್ಗದಲ್ಲಿ ಮತ್ತೆ ಝಳಪಿಸಿದ ಮಾರಕಾಸ್ತ್ರ - ರೌಡಿ ಶೀಟರ್​​​ ಹಬೀಬ್​ ಬರ್ಬರ ಹತ್ಯೆ - ತುಂಗಾನಗರ ಠಾಣೆಯಲ್ಲಿ ಪ್ರಕರಣ        ಖಾತೆ ಹಂಚಿಕೆಯಾಯ್ತು, ಈಗ ಬಂಗಲೆ ಸರದಿ - ಒಂದೊಂದು ಬಂಗಲೆಗೆ ಮೂವರ ಪೈಪೋಟಿ - ಸಿಎಂ ಕುಮಾರಸ್ವಾಮಿಗೆ ಬಂಗಲೆ ಕೊಡೋದೇ ಚಿಂತೆ        ಹಿಟ್​​ಲಿಸ್ಟ್​​ನಲ್ಲಿದ್ದ 20 ಉಗ್ರರ ಪೈಕಿ ಇಬ್ಬರು ಫಿನಿಶ್ - ಕುಲ್ಗಾಮದಲ್ಲಿ ಇಬ್ಬರು ಎಲ್​​ಇಟಿ ಉಗ್ರರು ಉಡೀಸ್​ - ಶಸ್ತ್ರ ಸಹಿತ ಒಬ್ಬ ಟೆರರ್​ ಸರೆಂಡರ್        ಮನೆಗಾಗಿ ಕಣ್ಣೀರಿಟ್ಟ ವೃದ್ಧೆಗೆ ಶಾಸಕರ ಸಹಾಯ - 20 ಸಾವಿರ ಹಣ ನೀಡಿದ ಡಾ.ರಂಗನಾಥ - ದಿಗ್ವಿಜಯ ನ್ಯೂಸ್​ ವರದಿಗೆ ಸ್ಪಂದಿಸಿದ ಕುಣಿಗಲ್​ ಶಾಸಕ       
Breaking News

ಒಂದೂವರೆ ವರ್ಷಕ್ಕೆ ಭೂಪಟ ಗುರುತಿಸುವ ಚತುರ ಕೃಷ್ಣ

Monday, 11.06.2018, 11:05 AM       No Comments

ಕೋಲಾರ: ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು ಎನ್ನುವ ಮಾತನ್ನು ಕೋಲಾರದ ಒಂದೂವರೆ ವರ್ಷದ ಪುಟ್ಟ ಪೋರ ನಿಜವಾಗಿಸಿದ್ದಾನೆ.

ಕೋಲಾರ ಜಿಲ್ಲೆಯ ಪಿ.ಸಿ ಬಡಾವಣೆಯ ನಿವೃತ್ತ ಮಿಲಿಟರಿ ಅಧಿಕಾರಿ ಜವಹರ್​ ಬಾಬು ಅವರ ಮೊಮ್ಮಗ ಕೃಷ್ಣ ವಯಸ್ಸಿಗೂ ಮೀರಿದ ಜ್ಞಾನವನ್ನು ಹೊಂದಿದ್ದಾನೆ. ಈತನ ತಂದೆ ವೆಂಕಟೇಶ್​ ಮೂರ್ತಿ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಹಾಗೂ ತಾಯಿ ಮೃದುಲಾ ಗೋವಾದಲ್ಲಿ ಬ್ಯಾಂಕ್​ ಮ್ಯಾನೇಜರ್ ಆಗಿದ್ದಾರೆ.

ಕೇವಲ 18 ತಿಂಗಳಿರುವಾಗಲೇ ಈ ‘ವಂಡರ್​ ಬಾಯ್​’ ರಾಜ್ಯದ ಹೆಸರು ಹೇಳಿದರೆ ಭೂಪಟದಲ್ಲಿ ಪಟ್‌ ಅಂತಾ ತೋರಿಸ್ತಾನೆ. ಚೆಸ್​ ಪಾನ್​ಗಳನ್ನ ಕೈಗೆ ಕೊಟ್ರೆ, ಟಕ್‌ ಅಂತಾ ಹೆಸರು ಹೇಳ್ತಾನೆ. ಪ್ರಪಂಚದ ಎಲ್ಲಾ ದೇಶಗಳ ಬಾವುಟ ನೋಡಿ ಯಾವ ದೇಶ ಅಂತ ಗುರುತಿಸ್ತಾನೆ.

ತಾಯಿ ಮೃದುಲಾ ಗರ್ಭಿಣಿಯಾಗಿದ್ದಾಗ ಧೈರ್ಯ, ಶೌರ್ಯ, ಸಾಹಸದ ಕಥೆಗಳನ್ನ ಓದುತ್ತಿದ್ದರಂತೆ. 8 ತಿಂಗಳ ಮಗುವಿದ್ದಾಗಲೇ ಕೃಷ್ಣನಿಗೆ ಪಾಠ ಹೇಳಿ ಕೊಡೋಕೆ ಶುರು ಮಾಡಿದ್ದರು. ಇವೆಲ್ಲಾ ಪರಿಶ್ರಮದ ಫಲವಾಗಿ ಇಂದು 18 ತಿಂಗಳ ಮಗು ಕೃಷ್ಣ ಯೂನಿಕ್ ವರ್ಲ್ಡ್​ ರೆಕಾರ್ಡ್ ಲಿಮಿಟಿಡ್ ಮತ್ತು ಆರ್​ಎಚ್​ಓ ಸ್ಪರ್ಧೆಯಲ್ಲಿ ರೆಕಾರ್ಡ್ ಮಾಡಿ, ಪ್ರಶಸ್ತಿ ಗೆದ್ದಿದ್ದಾನೆ. ಈ ವಯಸ್ಸಿಗೆ ಸಲೀಸಾಗಿ ಇಂಗ್ಲಿಷ್​ ಮಾತನಾಡುತ್ತಾನೆ. ಯಾವುದೇ ವಿಷಯ ಹೇಳಿದರೂ ತಕ್ಷಣ ನೆನಪಿಟ್ಟುಕೊಳ್ಳುವಂಥ ಅಸಾಧಾರಣ ಬುದ್ಧಿವಂತ ಈತ. ಪುಟ್ಟಪೋರ ಕೃಷ್ಣನ ಟ್ಯಾಲೆಂಟ್‌ಗೆ ರಾಜ್ಯದ ಜನತೆಯೇ ಬೆರಗಾಗಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top