Monday, 11th December 2017  

Vijayavani

1. ಮತ್ತಷ್ಟು ಹದಗೆಟ್ಟ ರವಿ ಬೆಳಗೆರೆ ಆರೋಗ್ಯ – ಕಾಲು ನೋವು, ನಿಶ್ಯಕ್ತಿಯಿಂದ ಪತ್ರಕರ್ತನ ನರಳಾಟ – ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ 2. ಮಧ್ಯಾಹ್ನ 12ಕ್ಕೆ ಕೋರ್ಟ್​ಗೆ ಹಾಜರ್ – ರವಿ ಬೆಳಗೆರೆ ವಿರುದ್ಧ ಮತ್ತೊಂದು ಕೇಸ್‌ – ಪತ್ರಕರ್ತನಿಗೆ ಜೈಲಾ..? ಬೇಲಾ..? 3. ಬಳ್ಳಾರಿಯಲ್ಲಿ ಗಣಿಗಾರಿಕೆ ವಿರುದ್ಧ ಕೂಗು – ಕುಮಾರಸ್ವಾಮಿ ಬೆಟ್ಟ ಉಳಿವಿಗೆ ಸಂಡೂರು ಬಂದ್ – ಅಂಗಡಿ, ಮುಂಗಟ್ಟುಗಳಿಗೆ ಬೀಗ, ಶಾಲಾ-ಕಾಲೇಜಿಗೆ ರಜೆ 4. ರಾಜ್ಯ ಸರ್ಕಾರದಿಂದ ಬಿಜೆಪಿ ಹತ್ತಿಕ್ಕುವ ಕೆಲಸ – ರ‍್ಯಾಲಿಯಲ್ಲಿ ಭಾಗಿಯಾದವ್ರ ವಿರುದ್ಧ ಟ್ರಾಫಿಕ್‌ ಪೊಲೀಸ್‌ ಕೇಸ್ – ಕಲಬುರಗಿಯಲ್ಲಿ ಖಾಕಿ, ಕೇಸರಿ ಕದನ 5. ಪ್ರಧಾನಿ ಮೋದಿ ರ‍್ಯಾಲಿಗೆ ಅವಕಾಶವಿಲ್ಲ – ಮೆಗಾ ರೋಡ್​ ಶೋಗೆ ಅನುಮತಿ ನಿರಾಕರಣೆ – ರಾಹುಲ್ ಸಮಾವೇಶಕ್ಕೂ ಗುಜರಾತ್ ಪೊಲೀಸರ ತಡೆ
Breaking News :

ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಂತೆ ಮುಂದಿನ ಸಿಎಂ ಯಾರು ಗೊತ್ತಾ?

Tuesday, 04.07.2017, 7:36 AM       No Comments

ಹಾಸನ: ಕೋಡಿಮಠ ಶ್ರೀಗಳ ಭವಿಷ್ಯವಾಣಿ ಅಂದ್ರೆ ಅದು ರಾಜ್ಯ ರಾಜಕೀಯ, ಹಾಗೂ ಇತರ ಆಗುಹೋಗುಗಳ ಬಗ್ಗೆ ರಾಜ್ಯ ಜನರಲ್ಲಿ ಅಪಾರ ನಂಬಿಕೆ ಇದೆ. ರಾಜ್ಯ ರಾಜಕೀಯದ ಬಗ್ಗೆ ಕೋಡಿಮಠದ ಶ್ರೀಗಳು ಸೂಚ್ಯವಾಗಿ ದಿಗ್ವಿಜಯ ನ್ಯೂಸ್​ಗೆ ಸಂದರ್ಶನ ನೀಡಿದ್ದಾರೆ.

ಹಾಸನದ ಅರಸೀಕೆರೆಯ ಹಾರನಹಳ್ಳಿ ಕೋಡಿಮಠದ ಭವಿಷ್ಯವಾಣಿ ಅಂದರೆ ರಾಜ್ಯದ ಜನರ ಚಿತ್ತ ಅತ್ತ ವಾಲುತ್ತೆ. ಇದಕ್ಕೆ ಕಾರಣ ಹಲವು ರಾಜಕೀಯ ದಿಗ್ಗಜರು ಕೋಡಿಮಠಕ್ಕೆ ಭವಿಷ್ಯ ಕೇಳಲು ಆಗಮಿಸುತ್ತಾರೆ. ಈ ಹಿಂದೆ ದಿವಂಗತ ಮಾಜಿ ಪ್ರಧಾನಿ ಇಂದಿರಾಗಾಂಧಿ ಕಾಂಗ್ರೆಸ್​ನಲ್ಲಿ ಸೋಲು ಅನುಭವಿಸಿದಾಗ, ಇಂದಿರಾಗಾಂಧಿಯವರಿಗೆ ಕರ್ನಾಟಕದ ಚಿಕ್ಕಮಗಳೂರಿನಲ್ಲಿ ಸ್ಪರ್ಧಿಸುವಂತೆ ಭವಿಷ್ಯ ನುಡಿದಿದ್ದು ಇದೇ ಕೋಡಿಮಠ ಶ್ರೀಗಳು.

ಹೀಗೆ ಇಂದಿರಾಗಾಂಧಿಯವರು ಸಹ ರಾಜಕೀಯ ಮರುಹುಟ್ಟು ಪಡೆದಿದ್ದು ಇದೇ ಕೋಡಿಮಠ ಭವಿಷ್ಯವಾಣಿ ಆಧಾರದ ಮೇಲೆ ಅನ್ನೊದು ಇಲ್ಲಿನ ಶಕ್ತಿ. ಹೀಗಾಗಿ ಇಲ್ಲಿಗೆ ದೇಶದ ಅನೇಕ ರಾಜಕೀಯ ನಾಯಕರು ಗುಟ್ಟಾಗಿ ಭೇಟಿ ನೀಡಿ ತಮ್ಮ ರಾಜಕೀಯ ಭವಿಷ್ಯ ನುಡಿ ಕೇಳ್ತಾರೆ.

ಇದೀಗ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ದಿಗ್ವಿಜಯ ನ್ಯೂಸ್​ಗೆ ರಾಜ್ಯದ ರಾಜಕೀಯ ಸೂಚ್ಯ ಭವಿಷ್ಯ ನುಡಿದಿದ್ದಾರೆ. ರಾಜ್ಯದಲ್ಲಿ ಮುಂದಿನ ಚುನಾವಣೆ ಭವಿಷ್ಯ ಏನು? ಎಂಬ ಪ್ರಶ್ನೆಗೆ ಶ್ರೀಗಳು ಈ ರೀತಿ ಭವಿಷ್ಯ ಹೇಳಿದ್ದಾರೆ.” ಬಿತ್ತಿದ ಬೆಳಸು ಪೈರು ಕುಯ್ದಾರು, ಬಿತ್ತಿದ ಬೀಜ ಒಂದು ಬೆಳೆದ ಪೈರೋಂದು'” ಅಂತ ಸೂಕ್ಷ್ಮವಾಗಿ ನುಡಿದಿದ್ದಾರೆ.

ಅಂದರೆ ಮುಂದಿನ ಚುನಾವಣೆ ಫಲಿತಾಂಶದಲ್ಲಿ ಅನಿರೀಕ್ಷಿತ ಬದಲಾವಣೆಗಳಾಗುವ ಸಾಧ್ಯತೆ ಇದೆ. ಯಾರೋ ಹಾಕಿದ ಶ್ರಮದ ಫಲವನ್ನ ಇನ್ನೊಬರು ಅನುಭವಿಸುವರು ಅಂತ ಸೂಕ್ಷ್ಮವಾಗಿ ನುಡಿದಿದ್ದಾರೆ. ಹಾಗೇ ಅನಿರೀಕ್ಷಿತ ಅಧಿಕಾರ ಚುಕ್ಕಾಣಿ ಹಿಡಿಯುವ ಸನ್ನಿವೇಶಗಳಿವೆ ಅನ್ನೊದನ್ನ ಹೇಳಿದ್ದಾರೆ.

ಇನ್ನು ದೇಶದ ಪ್ರಧಾನಿ ಮೋದಿ ಬಗ್ಗೆ ಶ್ರೀಗಳು ನುಡಿದಿದ್ದು, ಮೋದಿಯವರು ಉತ್ತಮ ಪ್ರಧಾನಿ, ಅವರು ಅಧಿಕಾರವನ್ನ ಜನರ ಬಳಿಗೆ ಕೊಂಡೋಯ್ಯುತ್ತಿದ್ದಾರೆ. ಒಳಿತು ಮಾಡ್ತಿದ್ದಾರೆ. ಆದರೆ, ಮೋದಿ ಮಾಡೋ ಕೆಲಸಗಳಿಗೆ ಅಷ್ಟೇ ವಿಘ್ನಗಳಿವೆ ಅಂತ ಕೋಡಿಮಠ ಶ್ರೀಗಳು ಹೇಳಿದ್ದಾರೆ. ಹಾಗೇ ನಾಡಿನಲ್ಲಿ ಭಯದ ವಾತಾವರಣವಿದ್ದು, ಸಮರ ಆಗುವ ಲಕ್ಷಣಗಳಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಇನ್ನು ಶ್ರೀಗಳು ಜನರ ನಡೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು ಎಲ್ಲರೂ ಆಡಂಬರದ ಜೀವನ ಬಿಡಬೇಕು, ಭೂಮಿ ಮಳೆ ಬೀಳಿಸೋ ಶಕ್ತಿ ಕಳೆದುಕೊಳ್ಳುತ್ತಿದೆ ಎಂದಿದ್ದಾರೆ. ಇನ್ನೊಂದು ಕಡೆ ಮುಂದಿನ ದಿನದಲ್ಲಿ ಹಣಕೊಟ್ಟರೆ ಹಾಲು ಸಿಕ್ಕೀತು. ಆದರೆ, ನೀರು ಸಿಗಲ್ಲ. ಜೊತೆಗೆ ಮುಂದೆ ಉಸಿರಾಟದ ವಾಯು ಸಿಗದಂತ ದಿನ ಎದುರಾಗಲಿವೆ ಅಂತ ಹೇಳಿದ್ದಾರೆ. ಜೊತೆಗೆ ಗೋವು ವಧೆ ಮಾಡುವುದು ದೇಶಕ್ಕೆ ಕೆಡುಕು. ಹಾಗೆ ಗಿಡಬಳ್ಳಿ ನೆಟ್ಟರೆ ಮಾತ್ರ ಭೂಮಿಗೆ ಉಳಿಗಾಲ ಅಂತ ಭವಿಷ್ಯ ನುಡಿದಿದ್ದಾರೆ.

ರಾಜ್ಯ ರಾಜಕೀಯ ವಲಯದಲ್ಲಿ ಕೋಡಿಮಠದ ಭವಿಷ್ಯಕ್ಕೆ ತನ್ನದೇ ಆದ ಮಹತ್ವ ಇದೆ. ಈ ಹಿಂದೆ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಹಲವು ಕರಾರುವಕ್ಕು ಭವಿಷ್ಯ ನುಡಿಯೋ ಮೂಲಕ ಅಚ್ಚರಿಗೆ ಕಾರಣರಾಗಿದ್ರು. ಹೀಗಾಗಿ ಈ ಬಾರಿ ಶ್ರೀಗಳು ನುಡಿದಿರೋ ಭವಿಷ್ಯ ಹಲವು ರಾಜಕೀಯ ನಾಯಕರ ನಿದ್ದೆಗೆಡಿಸೋ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

Back To Top