Friday, 21st September 2018  

Vijayavani

ಸಿಎಂ ‘ದಂಗೆ’ ಹೇಳಿಕೆ ವಿರುದ್ಧ ಕೇಸರಿ ಗುಟುರು - ಡಿಜಿಪಿ ನೀಲಮಣಿ ರಾಜುಗೆ ಬಿಜೆಪಿ ದೂರು - ಸಂಜೆ 4.30ಕ್ಕೆ ಗವರ್ನರ್ ಭೇಟಿ​​​​        ರಾಜ್ಯಾದ್ಯಂತ ಭುಗಿಲೆದ್ದ ‘ದಂಗೆ’ ಉರಿ - ಕಲಬುರಗಿ, ಮಂಡ್ಯ, ಧಾರವಾಡ, ಕೊಡಗಿನಲ್ಲಿ ದಳ್ಳುರಿ        ಬ್ರದರ್ಸ್​​ ತಂಟೆಗೆ ಹೋಗ್ಬೇಡಿ, ವಿವಾದಾತ್ಮಕ ಹೇಳಿಕೆ ಕೊಡ್ಬೇಡಿ - ಸಾಫ್ಟ್​ ಪಾಲಿಟಿಕ್ಸ್ ಬಗ್ಗೆ ಡಿಕೆಶಿಗೆ ಸಿದ್ದು ಕ್ಲಾಸ್        ಕರ್ನಾಟಕದಲ್ಲಿ ನಮಗೆ ಅಧಿಕಾರ ಬೇಕು - ಇಲ್ದಿದ್ರೆ ಲೋಕಸಭೆ ಚುನಾವಣೆಯಲ್ಲಿ ಕಷ್ಟ ಕಷ್ಟ - ಪರಿಸ್ಥಿತಿ ನಿಭಾಯಿಸಲು ಸಿದ್ದುಗೆ ಸೂಚನೆ        ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ - ಅಪಹರಿಸಿದ್ದ ಮೂವರು ಪೊಲೀಸರ ಹತ್ಯೆಗೈದ ಕಿರಾತಕರು        ಓಡಿಶಾದಲ್ಲಿ ಡೆಯ್ ಚಂಡಮಾರುತದ ಅಬ್ಬರ - ಕಾಲಾಪುರಕ್ಕೆ ನುಗ್ಗಿದ ಡ್ಯಾಮ್ ನೀರು ನುಗ್ಗಿ ಪ್ರವಾಹ - ಬಿರುಗಾಳಿಗೆ ಜನರು ಕಂಗಾಲ್       
Breaking News

ಕೊಡಗು ಸಂತ್ರಸ್ತರಿಗೀಗ ಪರಿಹಾರ ಮೊತ್ತದ ಆಘಾತ

Thursday, 13.09.2018, 2:04 AM       No Comments

|ಅಜ್ಜಮಾಡ ರಮೇಶ್ ಕುಟ್ಟಪ್ಪ

ಮಡಿಕೇರಿ: ಒಂದು ಹೆಕ್ಟೇರ್ ಕಾಫಿತೋಟ ಕಳೆದುಕೊಂಡವರಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್​ಡಿಆರ್​ಎಫ್) ನೀಡುವ ಪರಿಹಾರ ಮೊತ್ತ ಕೇವಲ 34 ಸಾವಿರ ರೂ., ಅದೂ ಗರಿಷ್ಠ 2 ಹೆಕ್ಟೇರ್​ವರೆಗೆ ಮಾತ್ರ. ಈ ನಿಯಮ ಭೂಕುಸಿತದಿಂದ ಕಾಫಿತೋಟ ಕಳೆದು ಕೊಂಡಿರುವ ಕೊಡಗಿನವರ ಪಾಲಿಗೆ ಆತಂಕ ಸೃಷ್ಟಿಸಿದೆ.

ಭಾರತೀಯ ಕಾಫಿ ಮಂಡಳಿ ಆಗಸ್ಟ್ 22ರಂದು ಕೇಂದ್ರ ವಾಣಿಜ್ಯ ಸಚಿವಾಲಯಕ್ಕೆ ನೀಡಿರುವ ಪ್ರಾಥಮಿಕ ವರದಿ ಪ್ರಕಾರ 3,600 ಎಕರೆ ಕಾಫಿ ತೋಟ ನೆಲಸಮಗೊಂಡಿದೆ, 10 ಸಾವಿರ ಎಕರೆ ಫಸಲು ಹಾನಿಗೀಡಾಗಿದೆ. ಪ್ರಸ್ತುತ 27 ತಂಡಗಳು ಸರ್ವೆ ನಂಬರ್ ಇಟ್ಟುಕೊಂಡು ಆಸ್ತಿಪಾಸ್ತಿ ಹಾನಿ ಸಮೀಕ್ಷೆ ನಡೆಸುತ್ತಿವೆ. ಈ ಸಮೀಕ್ಷೆಯಲ್ಲಿ ವಾಸ್ತವ ಚಿತ್ರಣ ಹೊರಹೊಮ್ಮುವ ನಿರೀಕ್ಷೆ ಇದೆ. ಲಕ್ಷಾಂತರ ರೂ. ಬೆಲೆ ಬಾಳುವ, ಬಹá-ವಾರ್ಷಿಕ ಫಸಲು ನೀಡುವ ಕಾಫಿತೋಟಕ್ಕೆ ಪ್ರಸ್ತುತ ನಿಯಮದಡಿ ನಿಗದಿ ಪಡಿಸಿರುವ ಪರಿಹಾರ ಅವೈಜ್ಞಾನಿಕ. 1 ಹೆಕ್ಟೇರ್ ತೋಟದ ನಿರ್ವಹಣೆಗೆ 34 ಸಾವಿರ ರೂ. ಸಾಲದು. ಹೀಗಿರುವಾಗ, ಅಷ್ಟೊಂದು ಕನಿಷ್ಠ ಮೊತ್ತದ ಪರಿಹಾರ ನೀಡುವುದರಿಂದ ಬೆಳೆಗಾರರ ಕಣ್ಣೀರು ಒರೆಸಲಾಗದು.

ಜನಪ್ರತಿನಿಧಿಗಳು, ಬೆಳೆಗಾರರ ಸಂಘಟನೆಗಳು ಹಾಗೂ ಸಾರ್ವಜನಿಕ ಸಂಘ-ಸಂಸ್ಥೆಗಳು ಕೇಂದ್ರ- ರಾಜ್ಯ ಸರ್ಕಾರಗಳ ಗಮನ ಸೆಳೆದು ಸಂತ್ರಸ್ತ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಬೇಕು. ಈ ನಿಟ್ಟಿನಲ್ಲಿ ತಕ್ಷಣ ಸರ್ಕಾರದ ಮೇಲೆ ಒತ್ತಡ ಹಾಕುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಒಕ್ಕೂಟ ಸಮೀಕ್ಷೆ

ಕರ್ನಾಟಕ ಬೆಳೆಗಾರರ ಒಕ್ಕೂಟ ಸಿದ್ಧಪಡಿಸಿರುವ ಸಮೀಕ್ಷಾ ವರದಿಯಲ್ಲಿ ಪ್ರಕೃತಿ ವಿಕೋಪದಿಂದ ಕೊಡಗಿನಲ್ಲಿ ಕಾಫಿ ಉತ್ಪಾದನೆ ಶೇ.41 ಕುಂಠಿತಗೊಳ್ಳಲಿದೆ. ಜತೆಗೆ, ಜಿಲ್ಲೆಯಲ್ಲಿ ಕಾಫಿ ಉದ್ದಿಮೆ 617 ಕೋಟಿ ರೂ. ನಷ್ಟಕ್ಕೆ ತುತ್ತಾಗಿದೆ. 4 ಸಾವಿರ ಎಕರೆ ರೋಬಸ್ಟಾ, 500 ಎಕರೆ ಅರೇಬಿಕಾ ತೋಟ ಹಾನಿಗೀಡಾಗಿದೆ ಎಂದು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಸಲ್ಲಿಸಿರುವ ಹಾನಿ ವರದಿಯಲ್ಲಿ ಕಾಫಿ ಉಲ್ಲೇಖವಾಗಿಲ್ಲ. ಭಾರತೀಯ ಕಾಫಿ ಮಂಡಳಿಗೆ ಸಮೀಕ್ಷಾ ವರದಿ ಸಲ್ಲಿಸದಿರುವುದರಿಂದ ಹೀಗಾಗಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರತಿನಿಧಿ ಕೆ.ಕೆ. ವಿಶ್ವನಾಥ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರನ್ನು ಬೆಳೆಗಾರರ ನಿಯೋಗದಲ್ಲಿ ಭೇಟಿ ಮಾಡಿ ಈ ಬಗ್ಗೆ ಆಕ್ಷೇಪ ಸಲ್ಲಿಸಿದ್ದಾರೆ. ಹಲವು ಬೆಳೆಗಾರರು ಜಾಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದು, ಭಾರತೀಯ ಕಾಫಿ ಮಂಡಳಿ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಬೆಳೆಗಾರರಿಗೆ ಆಗಿರುವ ನಷ್ಟಕ್ಕೆ ಸಂಬಂಧಿಸಿ ಸರ್ಕಾರದ ಗಮನ ಸೆಳೆಯುವ ಶಿಫಾರಸು ಮಾಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ. ಸರ್ಕಾರ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ಬೆಳೆಗಾರ ಕುಕ್ಕೇರ ಜಯ ಚಿಣ್ಣಪ್ಪ ಒತ್ತಾಯಿಸಿದ್ದಾರೆ.

ಕೊಡಗು ಸಮೀಕ್ಷೆಗೆ ಬಂದ ಕೇಂದ್ರ ತಂಡ

ಕುಶಾಲನಗರ: ಪ್ರಾಕೃತಿಕ ವಿಕೋಪ ಹಾನಿಯ ಪರಿವೀಕ್ಷಣೆಗಾಗಿ ಕೇಂದ್ರ ಸರ್ಕಾರದ ಮೂವರು ಸದಸ್ಯರ ತಂಡ ಬುಧವಾರ ಜಿಲ್ಲೆಗೆ ಆಗಮಿಸಿತು. ಕೇಂದ್ರ ಗೃಹ ವ್ಯವಹಾರಗಳ ಇಲಾಖೆ ಜಂಟಿ ಕಾರ್ಯದರ್ಶಿ ಅನಿಲ್​ವುಲಿಕ್ ನೇತೃತ್ವದ ತಂಡಕ್ಕೆ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃ ತಿಕ ವಿಕೋಪ, ಅದರಿಂದಾದ ಹಾನಿ, ಜಿಲ್ಲಾಡಳಿತ ತೆಗೆದುಕೊಂಡಿರುವ ಕ್ರಮಗಳು, ಸಂತ್ರಸ್ತರ ಪುನರ್ವಸತಿ, ರಾಜ್ಯ ಸರ್ಕಾರ ನೀಡಿರುವ ನೆರವು, ಕೇಂದ್ರ ಸರ್ಕಾರದಿಂದ ಬೇಕಾಗಿರುವ ನೆರವು, ಹಾನಿಗೊಳಗಾದ ಪ್ರದೇಶಗಳನ್ನು ಸಹಜ ಸ್ಥಿತಿಗೆ ತರಲು ತಗಲುವ ಅಂದಾಜು ವೆಚ್ಚ ಮತ್ತಿತರ ಮಾಹಿತಿಗಳನ್ನು ಒಳಗೊಂಡ ಸಮಗ್ರ ವಿವರವನ್ನು ಹಾರಂಗಿ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿ ವಿವರಿಸಿದರು. ಸದ್ಯದ ಅಂದಾಜು ಪ್ರಕಾರ 1200 ಕೋಟಿ ರೂ. ಹಾನಿ ಆಗಿದೆ. ಸ್ಪಷ್ಟ ಚಿತ್ರಣ ಸಿಗಲು ಇನ್ನೂ 15 ದಿನ ಬೇಕಾಗಬಹುದು ಎಂದು ಡಿಸಿ ತಿಳಿಸಿದರು. ಸಭೆಯಲ್ಲಿ ಸಂಸದ ಪ್ರತಾಪ್​ಸಿಂಹ ಇದ್ದರು.

ಗರಂ ಆದ ಸಾ.ರಾ. ಮಹೇಶ್

ಕೇಂದ್ರ ತಂಡದ ಜತೆ ಶಸ್ತ್ರಧಾರಿ ಪೊಲೀಸರು ಇದ್ದಿದ್ದನ್ನು ಗಮನಿಸಿದ ಸಚಿವ ಸಾ.ರಾ. ಮಹೇಶ್ ಗರಂ ಆದರು. ಕೇಂದ್ರ ತಂಡದ ಸದಸ್ಯರನ್ನು ಯಾರಾದರೂ ಹೊತ್ಕೊಂಡು ಹೋಗ್ತಾರಾ? ನಿಮಗಿಲ್ಲಿ ಬರೋಕೆ ಹೇಳಿದ್ಯಾರು ಎಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.

ಮಡಿಕೇರಿ-ಮಂಗಳೂರು ಮಾರ್ಗ ಸಂಚಾರ ಆರಂಭ

ಮಡಿಕೇರಿ: ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರದಿಂದ ಕಾರು, ಜೀಪು, ಬೈಕ್ ಸೇರಿ ಲಘು ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದ್ದು, ಒಂದು ತಿಂಗಳ ಬಳಿಕ ಈ ಮಾರ್ಗದಲ್ಲಿ ವಾಹನ ಸಂಚಾರ ಪುನಾರಂಭವಾಗಿದೆ. ವಿವಿಧೆಡೆ ಭೂಕುಸಿತದಿಂದ ಈ ಮಾರ್ಗಕ್ಕೆ ದೊಡ್ಡ ಮಟ್ಟದ ಹಾನಿವುಂಟಾಗಿದ್ದು, ತ್ವರಿತಗತಿಯಲ್ಲಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಇನ್ನೊಂದು ತಿಂಗಳಲ್ಲಿ ಶಾಶ್ವತ ಪರಿಹಾರ ಸಿಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಮಂಗಳೂರು ಉಪವಿಭಾಗದ ಸಹಾಯಕ ಇಂಜಿನಿಯರ್ ನಾಗರಾಜು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

Back To Top