More

    ಸಂಸ್ಥಾಪಕರ ಜೀವನ, ನಮ್ಮ ಬದುಕಿನ ದಾರಿದೀಪ: ಸದಾನಂದ ಮಹಾಸ್ವಾಮಿಗಳು

    ವಿಜಯವಾಣಿ ಸುದ್ದಿಜಾಲ ಗದಗ
    ನಗರದ ಕೆಎಲ್​ಇ ಸಂಸ್ಥೆಯಲ್ಲಿ ಗುರುವಾರ ಸಂಸ್ಥೆಯ 108ನೇ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು.
    ಕಾರ್ಯಕ್ರಮದಲ್ಲಿ ಸಾನ್ನಿಧ್ಯಹಿಸಿ ಶಿವಾನಂದ ಬ್ರಹನ್ಮಠದ ಸದಾನಂದ ಶ್ರೀಗಳು ಮಾತನಾಡಿ, ಕರ್ನಾಟಕ ಲಿಂಗಾಯಿತ ಶಿಕ್ಷಣ ಸಂಸ್ಥೆಯನ್ನು ಉತ್ತರ ಕರ್ನಾಟಕದಲ್ಲಿ ಕಟ್ಟಿದ ಮಹನೀಯರು ಮಾಡಿದ ತ್ಯಾಗ ಬಹಳ ದೊಡ್ಡದು. ಶಿಕ್ಷಣ ನೀಡುವ ಉದ್ದೇಶದಿಂದ ಏಳು ಜನ ಶಿಕ್ಷಕರು ಟೊಂಕ ಕಟ್ಟಿ ದುಡಿದರು. ಹಲವರು ಬೆನ್ನೆಲುಬಾಗಿ ನಿಂತು ಸಹಾಯ ಮಾಡಿದರು. ನಿಸ್ವಾರ್ಥ ಬದುಕಿನ ಸೇವೆಯಿಂದಾಗಿ ಕೆಎಲ್​ಇ ಸಂಸ್ಥೆ ಇಂದು ಜಗತ್ತಿನಾದ್ಯಂತ ಹೆಮ್ಮರವಾಗಿ ಬೆಳೆದು ನಿಂತಿದೆ. ಮಹನೀಯರ ಜೀವನ ಇಂದಿನ ವಾಸ್ತವ ಬದುಕಿಗೆ ದಾರಿದೀಪವಾಗಿದೆ. ಸಂಸ್ಥೆಯನ್ನು ಇಂದು ಡಾ. ಪ್ರಭಾಕರ್​ ಕೋರೆ ಅವರು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಿರುವುದು ಶ್ಲಾಘನಿಯ ಎಂದರು
    ಪ್ರಾಚಾರ್ಯ ಪ್ರೊ. ಪಿ. ಜಿ ಪಾಟೀಲ ಮಾತನಾಡಿ, ಸಂಸ್ಥೆಯನ್ನು ಸ್ಥಾಪಿಸಿದ ಮಹಾತ್ಮರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸತ್ಯ, ಪ್ರೇಮ, ಸೇವೆ, ನಿಸ್ವಾರ್ಥ ತ್ಯಾಗ ಎಂಬ ಸಿದ್ಧಾಂತದ ಅಡಿಯಲ್ಲಿ ಕಟ್ಟಲಾದ ಈ ಸಂಸ್ಥೆಯು ನಮ್ಮ ಭಾಗದ ಬಡ ವಿದ್ಯಾಥಿರ್ಗಳಿಗೆ ಬೆಳಕಾಗಿದೆ ಎಂದರು.
    ಎಸ್​.ಪಿ. ಸಂಶಿಮಠ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥಾಪಕರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು. ಡಾ. ಎ. ಕೆ. ಮಠ, ಡಾ. ನಾಗರಾಜ್​ ಬಳಿಗೇರ. ಬಿ. ಆರ್​. ಚಿನಗುಂಡಿ, ವೀರೇಶ ಕೂಗು, ರಾಜು ಶಳ್ಳಿಕೇರಿ. ಎಸ್​. ಆರ್​. ಪಾಟೀಲ ಹಲವರು ಇದ್ದರು.

    ೋಟೋ 16ಜಿಡಿಜಿ07
    ಗದಗ ನಗರದ ಕೆಎಲ್​ಇ ಸಂಸ್ಥೆಯಲ್ಲಿ ಗುರುವಾರ ಜರುಗಿದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಆಚರಿಸಲಾಯಿತು. ಸದಾನಂದ ಶ್ರೀಗಳು ಮಾತನಾಡಿದರು. ಡಾ. ಎ. ಕೆ. ಮಠ, ಡಾ. ನಾಗರಾಜ್​ ಬಳಿಗೇರ. ಬಿ. ಆರ್​. ಚಿನಗುಂಡಿ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts