Tuesday, 17th October 2017  

Vijayavani

1. ಅಕ್ರಮ ಕಸಾಯಿಖಾನೆ ಮಾಲೀಕರ ದರ್ಪ – ನೋಟಿಸ್​​​ ನೀಡಲು ಹೋದ ಪೊಲೀಸರ ಮೇಲೆಯೇ ಹಲ್ಲೆ – ಹೊಯ್ಸಳ ಸೇರಿ ನಾಲ್ಕು ವಾಹನಗಳು ಜಖಂ 2. ದಿಗ್ವಿಜಯ ಸಿಂಗ್​​ ಸಂಬಂಧಿ ಟೆಂಡರ್​ ಟೋಪಿ – ಗುತ್ತಿಗೆ​​​​​​ ನೆಪದಲ್ಲಿ ಕೋಟಿ ಕೋಟಿ ಪಂಗನಾಮ – ಭವಾನಿ ಸಿಂಗ್​​​ ವಿರುದ್ಧ ವಂಚನೆ ಆರೋಪ 3. ಉಸ್ತುವಾರಿ ಎದುರಲ್ಲೇ ಕಾಂಗ್ರೆಸ್​ ಗಲಾಟೆ – ಕೈಗೆ ಸಿಕ್ಕ ಕುರ್ಚಿಗಳು ಪೀಸ್ ಪೀಸ್​- ಚಿತ್ರದುರ್ಗದಲ್ಲಿ ಮನೆ ಮನೆ ಪ್ರಚಾರದ ವೇಳೆ ಕಿತ್ತಾಟ 4. ಜನರಕ್ಷಾ ಯಾತ್ರೆಗೆ ಅಂತಿಮ ತೆರೆ – ಸಾವಿರಾರು ಕಾರ್ಯಕರ್ತರೊಂದಿಗೆ ಚಾಣಕ್ಯ ಪಾದಯಾತ್ರೆ -ತಿರುವನಂತಪುರಂನಲ್ಲಿ ಬಿಜೆಪಿ ಬೃಹತ್​ Rally  5. ಸಾರಥಿಗೆ ಸಂದ ಬ್ರಿಟನ್​ ಗೌರವ – ಚಕ್ರವರ್ತಿಗೆ ಬಂದಿದೆ ಆಹ್ವಾನ – ಅ.19 ರಂದು ಲಂಡನ್​ನಲ್ಲಿ ಸನ್ಮಾನ
Breaking News :

ಸತತ 7ನೇ ಅರ್ಧ ಶತಕ: ವಿಶ್ವದಾಖಲೆ ಸರಿಗಟ್ಟಿದ ಕೆಎಲ್​ ರಾಹುಲ್​

Saturday, 12.08.2017, 1:05 PM       No Comments

ಪಲ್ಲೆಕಿಲೆ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್​ ಸರಣಿಯ ಮೂರನೇ ಟೆಸ್ಟ್​ ಪಂದ್ಯದಲ್ಲಿ ಭಾರತ ಕ್ರಿಕೆಟ್​ ತಂಡದ ಪ್ರತಿಭಾವಂತ ಆಟಗಾರ ಕನ್ನಡಿಗ ಕೆಎಲ್​ ರಾಹುಲ್​ ವಿಶ್ವದಾಖಲೆಯೊಂದನ್ನು ಸರಿಗಟ್ಟಿದ್ದಾರೆ.

ಪಂದ್ಯದ ಪ್ರಾರಂಭಕ್ಕೂ ಮುನ್ನ ಕೆ.ಎಲ್​. ರಾಹುಲ್​ ಸತತ 6 ಇನಿಂಗ್ಸ್​ಗಳಲ್ಲಿ 6 ಅರ್ಧ ಶತಕ ಗಳಿಸಿ ರಾಹುಲ್​ ದ್ರಾವಿಡ್​ ದಾಖಲೆಯನ್ನು ಸರಿಗಟ್ಟಿದ್ದರು. 3ನೇ ಟೆಸ್ಟ್​ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಅರ್ಧ ಶತಕ ಗಳಿಸುವ ಮೂಲಕ ಸತತ 7 ಇನಿಂಗ್ಸ್​ಗಳಲ್ಲಿ 7 ಅರ್ಧ ಶತಕ ಗಳಿಸಿದ ಅಪೂರ್ಣ ಸಾಧನೆ ಮಾಡಿದರು.

ಈ ಮೂಲಕ ಕೆ.ಎಲ್​. ರಾಹುಲ್​ ದಿಗ್ಗಜ ಆಟಗಾರರಾದ ಶ್ರೀಲಂಕಾದ ಕುಮಾರ ಸಂಗಕ್ಕಾರ, ವೆಸ್ಟ್​ ಇಂಡೀಸ್​ನ ಇವರ್ಟನ್​ ವೀಕ್ಸ್​, ಶಿವನಾರಾಯಣ್​ ಚಂದ್ರಪಾಲ್​, ಆಸ್ಟ್ರೇಲಿಯಾದ ಕ್ರಿಸ್​ ರೋಜರ್ಸ್​ ಮತ್ತು ಜಿಂಬಾಂಬ್ವೆಯ ಆಂಡಿ ಫ್ಲವರ್​ ದಾಖಲೆಯನ್ನು ಸರಿಗಟ್ಟಿದ್ದಾರೆ.

ಕೆ.ಎಲ್​. ರಾಹುಲ್​ ಕಳೆದ 7 ಇನಿಂಗ್ಸ್​ಗಳಲ್ಲಿ 90, 51, 67, 60, 51*, 57 ಮತ್ತು 67* ರನ್​ ಗಳಿಸಿದ್ದಾರೆ.

3ನೇ ಟೆಸ್ಟ್​ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆರಂಭಿಸಿದ ಭಾರತ ತಂಡ ಆರಂಭಿಕ ಆಟಗಾರರಾದ ಶಿಖರ್​ ಧವನ್​ (51*) ಮತ್ತು ಕೆ.ಎಲ್​. ರಾಹುಲ್​ (67*) ಗಳಿಸಿದ ಭರ್ಜರಿ ಆರ್ಧ ಶತಕಗಳ ನೆರವಿನಿಂದ ಭರ್ಜರಿ ಆರಂಭ ಪಡೆದಿದೆ. ಭೋಜನ ವಿರಾಮದ ವೇಳೆಗೆ ಭಾರತ ತಂಡ 27 ಓವರ್​ಗಳಲ್ಲಿ ವಿಕೆಟ್​ ನಷ್ಟವಿಲ್ಲದೆ 134 ರನ್​ ಗಳಿಸಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top